ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್…

ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು

ವಹ್ಶೀ ಇಬ್ನ್ ಹರ್ಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು (ಸಹಾಬಿಗಳು) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಖಂಡಿತವಾಗಿಯೂ ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ". ಅವರು (ಪ್ರವಾದಿ) ಹೇಳಿದರು: "ಬಹುಶಃ ನೀವು ಬೇರೆ ಬೇರೆಯಾಗಿ ತಿನ್ನುತ್ತೀರಾ?". ಅವರು (ಸಹಾಬಿಗಳು) ಹೇಳಿದರು: "ಹೌದು". ಅವರು (ಪ್ರವಾದಿ) ಹೇಳಿದರು: "ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು".

[حسن] [رواه أبو داود وابن ماجه وأحمد]

الشرح

ಕೆಲವು ಸಹಾಬಿಗಳು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: ಬಹುಶಃ ನೀವು ಊಟ ಮಾಡುವಾಗ ಬೇರೆ ಬೇರೆಯಾಗುತ್ತೀರಿ; ಪ್ರತಿಯೊಬ್ಬನೂ ಒಂಟಿಯಾಗಿ ತಿನ್ನುತ್ತಾನೆಯೇ? ಅವರು ಹೇಳಿದರು: ಹೌದು. ಪ್ರವಾದಿಯವರು ಹೇಳಿದರು: ಹಾಗಾದರೆ ಒಟ್ಟುಗೂಡಿರಿ ಮತ್ತು ಬೇರೆ ಬೇರೆಯಾಗಿ ತಿನ್ನಬೇಡಿ, ಮತ್ತು ಊಟದ ಆರಂಭದಲ್ಲಿ 'ಬಿಸ್ಮಿಲ್ಲಾಹ್' ಎಂದು ಹೇಳುವ ಮೂಲಕ ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ನಿಮಗೆ ಅದರಲ್ಲಿ ಬರಕತ್ ನೀಡಲಾಗುವುದು ಮತ್ತು ನಿಮಗೆ ಹೊಟ್ಟೆ ತುಂಬುವುದು.

فوائد الحديث

ಊಟಕ್ಕಾಗಿ ಒಟ್ಟುಗೂಡುವುದು ಮತ್ತು ಊಟದ ಆರಂಭದಲ್ಲಿ ಬಿಸ್ಮಿಲ್ಲಾಹ್ ಹೇಳುವುದು ಆಹಾರದಲ್ಲಿ ಬರಕತ್ (ಸಮೃದ್ಧಿ) ಉಂಟಾಗಲು, ಮತ್ತು ಅದನ್ನು ತಿನ್ನುವುದರಿಂದ ಹೊಟ್ಟೆ ತುಂಬಲು ಕಾರಣವಾಗಿದೆ.

ಬೇರೆ ಬೇರೆಯಾಗುವುದು ಸಂಪೂರ್ಣವಾಗಿ ಕೆಡುಕಾಗಿದೆ, ಮತ್ತು ಒಗ್ಗಟ್ಟು ಸಂಪೂರ್ಣವಾಗಿ ಒಳಿತಾಗಿದೆ.

ಊಟದ ಸಮಯದಲ್ಲಿ ಒಟ್ಟುಗೂಡಲು ಮತ್ತು 'ಬಿಸ್ಮಿಲ್ಲಾಹ್' ಹೇಳಲು ಪ್ರೋತ್ಸಾಹಿಸಲಾಗಿದೆ.

ಅಸ್ಸಿಂದಿ ಹೇಳುತ್ತಾರೆ: "ಒಟ್ಟುಗೂಡುವುದರಿಂದ ಆಹಾರದಲ್ಲಿ ಬರಕತ್‌ಗಳು ಇಳಿಯುತ್ತವೆ, ಮತ್ತು ಅಲ್ಲಾಹನ ಹೆಸರನ್ನು ಉಚ್ಛರಿಸುವುದರಿಂದ ಶೈತಾನನು ಆಹಾರವನ್ನು ತಲುಪುವುದರಿಂದ ತಡೆಯಲ್ಪಡುತ್ತಾನೆ."

التصنيفات

Manners of Eating and Drinking