ನನ್ನನ್ನು ಆಕಾಶಲೋಕಕ್ಕೆ ಕರೆದೊಯ್ಯಲ್ಪಟ್ಟಾಗ, ನಾನು ಒಂದು ಜನಾಂಗದ ಬಳಿಯಿಂದ ಸಾಗಿದೆನು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು…

ನನ್ನನ್ನು ಆಕಾಶಲೋಕಕ್ಕೆ ಕರೆದೊಯ್ಯಲ್ಪಟ್ಟಾಗ, ನಾನು ಒಂದು ಜನಾಂಗದ ಬಳಿಯಿಂದ ಸಾಗಿದೆನು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು ಅವುಗಳಿಂದ ತಮ್ಮ ಮುಖಗಳನ್ನು ಮತ್ತು ಎದೆಗಳನ್ನು ಪರಚಿಕೊಳ್ಳುತ್ತಿದ್ದರು

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನನ್ನು ಆಕಾಶಲೋಕಕ್ಕೆ ಕರೆದೊಯ್ಯಲ್ಪಟ್ಟಾಗ, ನಾನು ಒಂದು ಜನಾಂಗದ ಬಳಿಯಿಂದ ಸಾಗಿದೆನು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು ಅವುಗಳಿಂದ ತಮ್ಮ ಮುಖಗಳನ್ನು ಮತ್ತು ಎದೆಗಳನ್ನು ಪರಚಿಕೊಳ್ಳುತ್ತಿದ್ದರು. ನಾನು ಕೇಳಿದೆನು: 'ಓ ಜಿಬ್ರೀಲ್, ಇವರು ಯಾರು?'. ಅವರು (ಜಿಬ್ರೀಲ್) ಹೇಳಿದರು: 'ಇವರು ಜನರ ಮಾಂಸವನ್ನು ತಿನ್ನುತ್ತಿದ್ದವರು, ಮತ್ತು ಅವರ ಘನತೆಗೆ ಧಕ್ಕೆ ತರುತ್ತಿದ್ದವರು'.

[حسن] [رواه أبو داود]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಇಸ್ರಾ ಮತ್ತು ಮಿಅರಾಜ್‌ನ ರಾತ್ರಿಯಂದು ಅವರನ್ನು ಆಕಾಶಕ್ಕೆ ಏರಿಸಿದಾಗ, ಅವರು ಕೆಲವು ಜನರ ಬಳಿಯಿಂದ ಸಾಗಿದರು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು ಅವುಗಳಿಂದ ತಮ್ಮ ಮುಖಗಳನ್ನು ಮತ್ತು ಎದೆಗಳನ್ನು ಪರಚುತ್ತಿದ್ದರು ಮತ್ತು ಹರಿಯುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರಲ್ಲಿ ಕೇಳಿದರು: ಈ ಶಿಕ್ಷೆಗೆ ಅರ್ಹರಾಗಲು ಇವರು ಏನು ಮಾಡಿದ್ದರು? ಆಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಹೇಳಿದರು: ಇವರು ಜನರ ಪರನಿಂದೆ ಮಾಡುತ್ತಿದ್ದವರು (ಗೀಬತ್), ಮತ್ತು ಅನ್ಯಾಯವಾಗಿ ಅವರ ಘನತೆಯ ಬಗ್ಗೆ ಮಾತನಾಡುತ್ತಿದ್ದರು.

فوائد الحديث

'ಗೀಬತ್' (ಪರನಿಂದೆ) ಯ ಬಗ್ಗೆ ತೀವ್ರವಾಗಿ ಎಚ್ಚರಿಸಲಾಗಿದೆ, ಮತ್ತು ಪರನಿಂದೆ ಮಾಡುವವನನ್ನು ನರಮಾಂಸ ಭಕ್ಷಕನಿಗೆ ಹೋಲಿಸಲಾಗಿದೆ.

ಜನರ ಘನತೆಗೆ ಧಕ್ಕೆ ತರುವುದು, ಪರನಿಂದೆ ಮಾಡುವುದು ಮುಂತಾದ ಕಾರ್ಯಗಳು ಮಹಾಪಾಪಗಳಲ್ಲಿ (ಕಬಾಇರ್) ಸೇರಿವೆ.

"ಪರಚಿಕೊಳ್ಳುತ್ತಿದ್ದರು" ಎಂಬ ಮಾತಿನ ಬಗ್ಗೆ ಅತ್ತೀಬೀ ಹೇಳುತ್ತಾರೆ: "ಮುಖ ಮತ್ತು ಎದೆಯನ್ನು ಪರಚಿಕೊಳ್ಳುವುದು ಮೃತದೇಹದ ಬಳಿ ರೋದಿಸುವ ಮಹಿಳೆಯರ ಗುಣಲಕ್ಷಣಗಳಲ್ಲಿ ಒಂದಾಗಿರುವುದರಿಂದ, ಮುಸ್ಲಿಮರ ಪರನಿಂದೆ ಮಾಡುವ ಮತ್ತು ಅವರ ಮಾನ-ಮರ್ಯಾದೆಯನ್ನು ಹರಾಜು ಮಾಡುವವರಿಗೆ, ಈ ಕಾರ್ಯಗಳು ಪುರುಷರ ಗುಣಲಕ್ಷಣಗಳಲ್ಲ, ಬದಲಿಗೆ ಅತ್ಯಂತ ಕೆಟ್ಟ ಮತ್ತು ವಿಕೃತ ರೂಪದಲ್ಲಿರುವ ಮಹಿಳೆಯರ ಗುಣಲಕ್ಷಣಗಳಾಗಿವೆ ಎಂದು ಸೂಚಿಸುವುದಕ್ಕಾಗಿ ಅದನ್ನೇ ಶಿಕ್ಷೆಯಾಗಿ ಮಾಡಲಾಗಿದೆ."

'ಗೈಬ್' (ಅಗೋಚರ) ದಲ್ಲಿ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಎಲ್ಲದರಲ್ಲೂ ಈಮಾನ್ (ವಿಶ್ವಾಸ) ಇಡುವುದು ಕಡ್ಡಾಯವಾಗಿದೆ.

التصنيفات

Condemning Sins