ನೀವು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಲೈಲತುಲ್ ಖದ್ರ್ ಅನ್ನು ಹುಡುಕಿರಿ

ನೀವು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಲೈಲತುಲ್ ಖದ್ರ್ ಅನ್ನು ಹುಡುಕಿರಿ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಲೈಲತುಲ್ ಖದ್ರ್ ಅನ್ನು ಹುಡುಕಿರಿ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲೈಲತುಲ್ ಖದ್ರ್ ಅನ್ನು ಹುಡುಕಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ಮತ್ತು ಅದರಲ್ಲಿ ಬಹಳಷ್ಟು ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸಿದರು. ಪ್ರತಿ ವರ್ಷ ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಅದು ಸಂಭವಿಸುವ ಸಾಧ್ಯತೆ ಹೆಚ್ಚು. ಆ ರಾತ್ರಿಗಳು ಯಾವುದೆಂದರೆ 21ನೇ, 23ನೇ, 25ನೇ, 27ನೇ ಮತ್ತು 29ನೇ ರಾತ್ರಿ.

فوائد الحديث

ಲೈಲತುಲ್ ಖದ್ರ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅದನ್ನು ಹುಡುಕಲು ಪ್ರೋತ್ಸಾಹಿಸಲಾಗಿದೆ.

ಅಲ್ಲಾಹು ಈ ರಾತ್ರಿಯನ್ನು ರಹಸ್ಯವಾಗಿಟ್ಟಿದ್ದು ಅವನ ವಿವೇಕ ಮತ್ತು ದಯೆಯನ್ನು ವ್ಯಕ್ತಪಡಿಸುತ್ತದೆ. ಇದರಿಂದ ಜನರು ಅದನ್ನು ಪಡೆಯಲು ಆರಾಧನೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಇದರಿಂದ ಅವರ ಪ್ರತಿಫಲಗಳು ಹೆಚ್ಚಾಗುತ್ತವೆ.

ಲೈಲತುಲ್ ಖದ್ರ್ ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಬರುತ್ತದೆ. ಅದು ಬೆಸ ರಾತ್ರಿಗಳಲ್ಲಿ ಬರುತ್ತದೆಯೆಂಬ ಸಂಭಾವ್ಯತೆ ಹೆಚ್ಚಾಗಿದೆ.

ಲೈಲತುಲ್ ಖದ್ರ್‌ನ ರಾತ್ರಿ ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಒಂದಾಗಿದೆ. ಅದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಿತ್ರ ಕುರ್‌ಆನನ್ನು ಅವತೀರ್ಣಗೊಳಿಸಿದ ರಾತ್ರಿಯಾಗಿದೆ. ಅಲ್ಲಾಹು ಈ ರಾತ್ರಿಯನ್ನು ಅದರ ಸಮೃದ್ಧಿ ಮತ್ತು ಶ್ರೇಷ್ಠತೆಯಲ್ಲಿ ಮತ್ತು ಅದರಲ್ಲಿ ಮಾಡಲಾಗುವ ಕರ್ಮಗಳ ಪ್ರತಿಫಲದ ದೃಷ್ಟಿಯಿಂದ ಸಾವಿರ ತಿಂಗಳುಗಳಿಗಿಂತ ಶ್ರೇಷ್ಠಗೊಳಿಸಿದ್ದಾನೆ.

ಆ ರಾತ್ರಿಯನ್ನು ಲೈಲತುಲ್-ಖದ್ರ್ ಎಂದು ಕರೆಯಲಾಗುತ್ತದೆ. ಇದನ್ನು "ಗೌರವ" ಎಂಬ ಅರ್ಥವಿರುವ ಶರಫ್ ಎಂಬ ಪದದಿಂದ ತೆಗೆದುಕೊಂಡಿರುವ ಸಾಧ್ಯತೆಯಿದೆ. ಹೀಗೆ ಹೇಳಲಾಗುತ್ತದೆ: ಫುಲಾನ್ ಅಜೀಮುಲ್-ಖದ್ರ್ (ಅಂದರೆ: ಇಂತಿಂತಹ ವ್ಯಕ್ತಿ ದೊಡ್ಡ ಗೌರವವನ್ನು ಹೊಂದಿದ್ದಾನೆ). ಈ ಕಾರಣದಿಂದ ನೋಡುವಾಗ, ರಾತ್ರಿ ಎಂಬ ಪದದ ಸೇರ್ಪಡೆಯು ವಸ್ತುವನ್ನು ಅದರ ಗುಣಲಕ್ಷಣಕ್ಕೆ ಮಾಡುವ ಸೇರ್ಪಡೆಯಾಗುತ್ತದೆ. ಅಂದರೆ ಇದರ ಅರ್ಥ: ಶ್ರೇಷ್ಠ ರಾತ್ರಿ ಎಂದಾಗುತ್ತದೆ. ಅಂದರೆ, ಆ ರಾತ್ರಿ ಗೌರವ ಮತ್ತು ವೈಭವದ ವಿಷಯದಲ್ಲಿ ದೊಡ್ಡ ಸ್ಥಾನವನ್ನು ಹೊಂದಿದೆ. ಅಲ್ಲಾಹು ಹೇಳುತ್ತಾನೆ, "ಖಂಡಿತವಾಗಿಯೂ ನಾವು ಅದನ್ನು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ." (ದುಖಾನ್: 3). ಅಥವಾ ಅದು "ತೀರ್ಮಾನ" ಎಂಬ ಅರ್ಥವಿರುವ ತಖ್ದೀರ್ ಎಂಬ ಪದದಿಂದ ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಕಾರಣದಿಂದ ನೋಡುವಾಗ, ರಾತ್ರಿ ಎಂಬ ಪದದ ಸೇರ್ಪಡೆಯು "ಖದ್ರ್" ಪದಕ್ಕೆ ಕಾಲಾವಧಿಯ ವಿವರಣೆಗೆ ಮಾಡುವ ಸೇರ್ಪಡೆಯಾಗುತ್ತದೆ. ಅಂದರೆ ಇದರ ಅರ್ಥ: ವರ್ಷದಲ್ಲಿ ನಡೆಯುವ ಎಲ್ಲವನ್ನೂ ತೀರ್ಮಾನಿಸುವ ರಾತ್ರಿ. ಅಲ್ಲಾಹು ಹೇಳುತ್ತಾನೆ, "ಆ ರಾತ್ರಿಯಲ್ಲಿ ಪ್ರತಿಯೊಂದು ವಿವೇಕಯುತ ವಿಷಯವನ್ನು ತೀರ್ಮಾನಿಸಲಾಗುವುದು." (ದುಖಾನ್: 4)

التصنيفات

Last Ten Days of Ramadaan