ನೀನು ಅಲ್ಲಾಹುವಿನ ಮಾರ್ಗದಲ್ಲಿ ಖರ್ಚು ಮಾಡಿದ ಒಂದು ದೀನಾರ್ (ಬಂಗಾರದ ನಾಣ್ಯ), ನೀನು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಲು ಖರ್ಚು…

ನೀನು ಅಲ್ಲಾಹುವಿನ ಮಾರ್ಗದಲ್ಲಿ ಖರ್ಚು ಮಾಡಿದ ಒಂದು ದೀನಾರ್ (ಬಂಗಾರದ ನಾಣ್ಯ), ನೀನು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಲು ಖರ್ಚು ಮಾಡಿದ ಒಂದು ದೀನಾರ್, ನೀನು ಒಬ್ಬ ಬಡವನಿಗೆ/ನಿರ್ಗತಿಕನಿಗೆ ದಾನವಾಗಿ ನೀಡಿದ ಒಂದು ದೀನಾರ್ ಮತ್ತು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ ಒಂದು ದೀನಾರ್. ಇವುಗಳಲ್ಲಿ ಅತ್ಯಧಿಕ ಪ್ರತಿಫಲವುಳ್ಳದ್ದು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ್ದಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಅಲ್ಲಾಹುವಿನ ಮಾರ್ಗದಲ್ಲಿ ಖರ್ಚು ಮಾಡಿದ ಒಂದು ದೀನಾರ್ (ಬಂಗಾರದ ನಾಣ್ಯ), ನೀನು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಲು ಖರ್ಚು ಮಾಡಿದ ಒಂದು ದೀನಾರ್, ನೀನು ಒಬ್ಬ ಬಡವನಿಗೆ/ನಿರ್ಗತಿಕನಿಗೆ ದಾನವಾಗಿ ನೀಡಿದ ಒಂದು ದೀನಾರ್ ಮತ್ತು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ ಒಂದು ದೀನಾರ್. ಇವುಗಳಲ್ಲಿ ಅತ್ಯಧಿಕ ಪ್ರತಿಫಲವುಳ್ಳದ್ದು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ್ದಾಗಿದೆ".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ರೀತಿಯ ಖರ್ಚುಗಳನ್ನು (ದಾನಗಳನ್ನು) ಉಲ್ಲೇಖಿಸುತ್ತಾ ಹೇಳಿದರು: ಒಂದು ದೀನಾರ್ ಅನ್ನು ನೀನು ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡಲು ಖರ್ಚು ಮಾಡಿದೆ, ಒಂದು ದೀನಾರ್ ಅನ್ನು ನೀನು ಗುಲಾಮಗಿರಿಯಿಂದ ಒಬ್ಬ ವ್ಯಕ್ತಿಯನ್ನು ವಿಮೋಚನೆಗೊಳಿಸಲು ಖರ್ಚು ಮಾಡಿದೆ, ಒಂದು ದೀನಾರ್ ಅನ್ನು ನೀನು ಅಗತ್ಯವಿರುವ ಬಡವನಿಗೆ ದಾನವಾಗಿ ನೀಡಿದೆ, ಮತ್ತು ಒಂದು ದೀನಾರ್ ಅನ್ನು ನೀನು ನಿನ್ನ ಕುಟುಂಬ ಮತ್ತು ಅವಲಂಬಿತರ ಮೇಲೆ ಖರ್ಚು ಮಾಡಿದೆ. ನಂತರ ಅವರು ತಿಳಿಸುವುದೇನೆಂದರೆ, ಇವುಗಳಲ್ಲಿ ಅಲ್ಲಾಹುವಿನ ಬಳಿ ಅತ್ಯಧಿಕ ಪುಣ್ಯವುಳ್ಳದ್ದು ಯಾವುದೆಂದರೆ, ನೀನು ನಿನ್ನ ಕುಟುಂಬ, ಅವಲಂಬಿತರು ಮತ್ತು ಯಾರ ಖರ್ಚುವೆಚ್ಚವನ್ನು ನೋಡಿಕೊಳ್ಳುವುದು ನಿನಗೆ ಕಡ್ಡಾಯವಾಗಿದೆಯೋ ಅವರ ಮೇಲೆ ಖರ್ಚು ಮಾಡಿದ್ದಾಗಿದೆ.

فوائد الحديث

ಅಲ್ಲಾಹುವಿನ ಮಾರ್ಗದಲ್ಲಿ ಖರ್ಚು ಮಾಡಲು ಅನೇಕ ದಾರಿಗಳಿವೆ.

ಎಲ್ಲದಕ್ಕೂ ಖರ್ಚು ಮಾಡಲು ಸಾಧ್ಯವಾಗದಿದ್ದಾಗ, ಆದ್ಯತೆಯುಳ್ಳದ್ದಕ್ಕೆ ಮೊದಲ ಸ್ಥಾನ ನೀಡಬೇಕೆಂದು ತಿಳಿಸಲಾಗಿದೆ. ಇದರಲ್ಲಿ ಕುಟುಂಬದ ಮೇಲಿನ ಖರ್ಚು ಮಾಡುವುದು ಮೊದಲ ಸ್ಥಾನದಲ್ಲಿದೆ.

ಇಮಾಮ್ ನವವಿ ಅವರು 'ಶರ್ಹ್ ಮುಸ್ಲಿಂ'ನಲ್ಲಿ ಹೇಳುತ್ತಾರೆ: "ಮನೆಯವರ ಮೇಲೆ ಖರ್ಚು ಮಾಡಲು ಪ್ರೋತ್ಸಾಹಿಸಲಾಗಿದೆ ಮತ್ತು ಅದರಲ್ಲಿರುವ ಮಹತ್ತರವಾದ ಪುಣ್ಯವನ್ನು ವಿವರಿಸಲಾಗಿದೆ. ಏಕೆಂದರೆ ಅವರಲ್ಲಿ ಕೆಲವರ ಖರ್ಚುವೆಚ್ಚವನ್ನು ನೋಡುವುದು ರಕ್ತಸಂಬಂಧದಿಂದಾಗಿ ಕಡ್ಡಾಯವಾಗಿರುತ್ತದೆ. ಕೆಲವರಿಗೆ ಖರ್ಚು ಮಾಡುವುದು ಅಪೇಕ್ಷಣೀಯವಾಗಿದ್ದು ಅದು ದಾನ ಹಾಗೂ ಸಂಬಂಧ ಬೆಸೆಯುವ ಕಾರ್ಯವಾಗಿರುತ್ತದೆ. ಕೆಲವರಿಗೆ ಖರ್ಚು ಮಾಡುವುದು ವಿವಾಹದಿಂದಾಗಿ ಅಥವಾ ಗುಲಾಮನ ಯಜಮಾನ ಆಗಿರುವುದರಿಂದಾಗಿ ಕಡ್ಡಾಯವಾಗಿರುತ್ತದೆ. ಇವೆಲ್ಲವೂ ಶ್ರೇಷ್ಠ ಮತ್ತು ಪ್ರೋತ್ಸಾಹಿಸಲ್ಪಟ್ಟ ಕಾರ್ಯಗಳಾಗಿವೆ. ಇವು ಐಚ್ಛಿಕ ದಾನಕ್ಕಿಂತ ಶ್ರೇಷ್ಠವಾಗಿದೆ."

ಸಿಂದಿ ಹೇಳುತ್ತಾರೆ: ಅವರ ಮಾತು "ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ಒಂದು ದೀನಾರ್." ಇದರ ಅರ್ಥವೇನೆಂದರೆ: ಅವನು ಅದರ ಮೂಲಕ ಅಲ್ಲಾಹುವಿನ ಮುಖವನ್ನು (ಸಂತೃಪ್ತಿಯನ್ನು) ಉದ್ದೇಶಿಸಿದರೆ ಮತ್ತು ಉದಾಹರಣೆಗೆ ಅವಲಂಬಿತರ ಹಕ್ಕನ್ನು ಪೂರೈಸಲು ಬಯಸಿದರೆ (ಈ ಪುಣ್ಯ ದೊರೆಯುತ್ತದೆ)."

ಅಬೂ ಖಿಲಾಬ ಹೇಳುತ್ತಾರೆ: "ಚಿಕ್ಕ ಅವಲಂಬಿತರ ಮೇಲೆ ಖರ್ಚು ಮಾಡಿ ಅವರನ್ನು (ಭಿಕ್ಷೆ ಬೇಡುವುದರಿಂದ) ತಡೆಯುವ ಅಥವಾ ಅಲ್ಲಾಹು ಅವನ ಮೂಲಕ ಅವರಿಗೆ ಪ್ರಯೋಜನ ನೀಡುವ ಮತ್ತು ಅವರನ್ನು ಶ್ರೀಮಂತಗೊಳಿಸುವ ವ್ಯಕ್ತಿಗಿಂತ ಹೆಚ್ಚು ಪುಣ್ಯವಂತ ವ್ಯಕ್ತಿ ಯಾರು?!"

التصنيفات

ಖರ್ಚು- ವೆಚ್ಚ, ನಫ್ಲ್ ಸದಕಾ