إعدادات العرض
ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?
ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?" ಅವರು (ಸ್ವಹಾಬಗಳು) ಹೇಳಿದರು: "ನಮ್ಮಲ್ಲಿ ದಿವಾಳಿ ಯಾರೆಂದರೆ ಹಣ ಅಥವಾ ಸಾಮಾನುಗಳು ಇಲ್ಲದವನು." ಅವರು ಹೇಳಿದರು: "ಖಂಡಿತವಾಗಿಯೂ, ನನ್ನ ಸಮುದಾಯದಲ್ಲಿ ದಿವಾಳಿ ಯಾರೆಂದರೆ, ಪುನರುತ್ಥಾನದ ದಿನದಂದು ನಮಾಝ್, ಉಪವಾಸ ಮತ್ತು ಝಕಾತ್‌ಗಳೊಂದಿಗೆ ಬರುವವನು. ಆದರೆ, ಅದೇ ಸಮಯ ಅವನು ಇತರರನ್ನು ನಿಂದಿಸಿ, ಇತರರ ಮೇಲೆ ಸುಳ್ಳಾರೋಪ ಹೊರಿಸಿ, ಇತರರ ರಕ್ತ ಚೆಲ್ಲಿ ಮತ್ತು ಇತರರಿಗೆ ಥಳಿಸಿದಂತಹ ಪಾಪಗಳೊಂದಿಗೂ ಬರುತ್ತಾನೆ. ಆಗ ಅವನ ಸತ್ಕರ್ಮಗಳಿಂದ ಕೆಲವನ್ನು ನೀಡಿ ಅವರಿಗೆ ನ್ಯಾಯ ಒದಗಿಸಲಾಗುವುದು. ಅವರೆಲ್ಲರಿಗೂ ನ್ಯಾಯ ಒದಗಿಸುವ ಮೊದಲೇ ಇವನ ಸತ್ಕರ್ಮಗಳು ಮುಗಿದು ಬಿಟ್ಟರೆ, ಅವರ ಕೆಲವು ಪಾಪಗಳನ್ನು ತೆಗೆದು ಇವನ ಮೇಲೆ ಹೊರಿಸಲಾಗುವುದು. ನಂತರ ಅವನನ್ನು ನರಕಕ್ಕೆ ಎಸೆಯಲಾಗುವುದು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt Kurdî Português සිංහල অসমীয়া Kiswahili አማርኛ ગુજરાતી Nederlands پښتو Hausa नेपाली ไทย മലയാളം Кыргызча Română Svenska Malagasy Српски తెలుగు ქართული Moore Magyar Македонски Čeština Українськаالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರೊಡನೆ ಕೇಳಿದರು: "ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?" ಅವರು (ಸಹಚರರು) ಹೇಳಿದರು: "ನಮ್ಮಲ್ಲಿ ದಿವಾಳಿ ಯಾರೆಂದರೆ ಹಣ ಅಥವಾ ಸಾಮಾನುಗಳು ಇಲ್ಲದವನು." ಅವರು ಹೇಳಿದರು: "ಖಂಡಿತವಾಗಿಯೂ, ನನ್ನ ಸಮುದಾಯದಲ್ಲಿ ದಿವಾಳಿ ಯಾರೆಂದರೆ, ಪುನರುತ್ಥಾನದ ದಿನದಂದು ನಮಾಝ್, ಉಪವಾಸ, ಝಕಾತ್ ಮುಂತಾದ ಸತ್ಕರ್ಮಗಳೊಂದಿಗೆ ಬರುವವನು. ಆದರೆ, ಅದೇ ಸಮಯ ಅವನು ಇನ್ನೊಬ್ಬರನ್ನು ನಿಂದಿಸಿರುತ್ತಾನೆ ಮತ್ತು ಅವಹೇಳನ ಮಾಡಿರುತ್ತಾನೆ. ಇನ್ನೊಬ್ಬರ ಮೇಲೆ ಸುಳ್ಳಾರೋಪ ಹೊರಿಸಿ ಗೌರವಚ್ಯುತಿ ಮಾಡಿರುತ್ತಾನೆ. ಇನ್ನೊಬ್ಬರ ಹಣವನ್ನು ತಿಂದು ಅದನ್ನು ವಾಪಸು ಕೊಡಲು ನಿರಾಕರಿಸಿರುತ್ತಾನೆ. ಇನ್ನೊಬ್ಬರ ರಕ್ತವನ್ನು ಚೆಲ್ಲಿ ಅವರ ಮೇಲೆ ದಬ್ಬಾಳಿಕೆ ಮಾಡಿರುತ್ತಾನೆ. ಇನ್ನೊಬ್ಬರನ್ನು ಥಳಿಸಿ ಅವಮಾನ ಮಾಡಿರುತ್ತಾನೆ. ಆದ್ದರಿಂದ ಅನ್ಯಾಯಕ್ಕೊಳಗಾದವರಲ್ಲಿ ಎಲ್ಲರಿಗೂ ಇವನ ಸತ್ಕರ್ಮಗಳಲ್ಲಿ ಕೆಲವನ್ನು ನೀಡಲಾಗುವುದು. ಅವರೆಲ್ಲರಿಗೂ ನ್ಯಾಯ ಒದಗಿಸುವ ಮೊದಲೇ ಇವನ ಸತ್ಕರ್ಮಗಳು ಮುಗಿದು ಬಿಟ್ಟರೆ, ಅನ್ಯಾಯಕ್ಕೊಳಗಾದವರ ಕೆಲವು ಪಾಪಗಳನ್ನು ತೆಗೆದು ಇವನ ಹೆಸರಲ್ಲಿ ದಾಖಲಿಸಲಾಗುವುದು. ನಂತರ, ಅವನಲ್ಲಿ ಯಾವುದೇ ಸತ್ಕರ್ಮಗಳು ಇಲ್ಲದಿರುವ ಕಾರಣ ಅವನನ್ನು ನರಕಕ್ಕೆ ಎಸೆಯಲಾಗುವುದು.فوائد الحديث
ನಿಷಿದ್ಧ ಕೃತ್ಯದಲ್ಲಿ ಒಳಗೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ, ಇತರರಿಗೆ ಸಂಬಂಧಿಸಿದ ಭೌತಿಕ ಮತ್ತು ನೈತಿಕ ಹಕ್ಕುಗಳಲ್ಲಿ.
ಮನುಷ್ಯರು ಪರಸ್ಪರ ಹೊಂದಿರುವ ಹಕ್ಕುಗಳು ಅವರು ಪರಸ್ಪರ ಬಗೆಹರಿಸುವುದರ ಮೇಲೆ ಅವಲಂಬಿತವಾಗಿವೆ. ಆದರೆ ಶಿರ್ಕ್ (ಬಹುದೇವತ್ವ) ಹೊರತುಪಡಿಸಿದರೆ ಸೃಷ್ಟಿಕರ್ತನ ಹಕ್ಕುಗಳೆಲ್ಲವೂ ಕ್ಷಮೆಯ ಮೇಲೆ ಅವಲಂಬಿತವಾಗಿವೆ.
ಕೇಳುಗನನ್ನು ಆಕರ್ಷಿಸುವ, ಅವನ ಗಮನವನ್ನು ಸೆಳೆಯುವ ಮತ್ತು ಅವನಲ್ಲಿ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಸಂಭಾಷಣೆ ಮಾಡುವ ವಿಧಾನವನ್ನು ಬಳಸಿಕೊಳ್ಳಬೇಕು - ವಿಶೇಷವಾಗಿ ಶಿಕ್ಷಣ ಮತ್ತು ಮಾರ್ಗದರ್ಶನದ ವಿಷಯಗಳಲ್ಲಿ.
ದಿವಾಳಿಯ ನೈಜ ಅರ್ಥವನ್ನು ವಿವರಿಸಲಾಗಿದೆ. ಅದೇನೆಂದರೆ, ಪುನರುತ್ಥಾನ ದಿನ ಸಾಲಗಾರರು ಅವನ ಸತ್ಕರ್ಮಗಳನ್ನು ಕಿತ್ತುಕೊಳ್ಳುವುದು.
ಪರಲೋಕದಲ್ಲಿ ಪ್ರತೀಕಾರವು ಸಂಪೂರ್ಣ ಸತ್ಕರ್ಮಗಳನ್ನು ವಶಪಡಿಸುವ ತನಕ, ಅಂದರೆ ಅವನಲ್ಲಿ ಯಾವುದೇ ಸತ್ಕರ್ಮಗಳು ಉಳಿಯದಿರುವ ತನಕ ಉಂಟಾಗಬಹುದು.
ಅಲ್ಲಾಹು ಮನುಷ್ಯರೊಡನೆ ನ್ಯಾಯ ಮತ್ತು ಸತ್ಯದ ಆಧಾರದಲ್ಲಿ ವ್ಯವಹರಿಸುತ್ತಾನೆಂದು ತಿಳಿಸಲಾಗಿದೆ.