ಯಾವುದರ ಹೆಚ್ಚಿನ ಪ್ರಮಾಣವು ಅಮಲೇರಿಸುತ್ತದೆಯೋ, ಅದರ ಕಡಿಮೆ ಪ್ರಮಾಣವೂ ಹರಾಮ್ (ನಿಷಿದ್ಧ) ಆಗಿದೆ

ಯಾವುದರ ಹೆಚ್ಚಿನ ಪ್ರಮಾಣವು ಅಮಲೇರಿಸುತ್ತದೆಯೋ, ಅದರ ಕಡಿಮೆ ಪ್ರಮಾಣವೂ ಹರಾಮ್ (ನಿಷಿದ್ಧ) ಆಗಿದೆ

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾವುದರ ಹೆಚ್ಚಿನ ಪ್ರಮಾಣವು ಅಮಲೇರಿಸುತ್ತದೆಯೋ, ಅದರ ಕಡಿಮೆ ಪ್ರಮಾಣವೂ ಹರಾಮ್ (ನಿಷಿದ್ಧ) ಆಗಿದೆ".

[حسن] [رواه أبو داود والترمذي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಯಾವುದೇ ಪಾನೀಯ ಅಥವಾ ಆಹಾರವು ಅದರ ಹೆಚ್ಚಿನ ಪ್ರಮಾಣವನ್ನು ಸೇವಿಸಿದಾಗ ಬುದ್ಧಿಯ ಸ್ಥಿಮಿತವನ್ನು ತಪ್ಪಿಸುತ್ತದೆಯೋ, ಅದರ ಕಡಿಮೆ ಪ್ರಮಾಣವನ್ನು ಸೇವಿಸುವುದು ಕೂಡ ನಿಷಿದ್ಧವಾಗಿದೆ. ಆ ಕಡಿಮೆ ಪ್ರಮಾಣವು ಬುದ್ಧಿಯ ಸ್ಥಿಮಿತವನ್ನು ತಪ್ಪಿಸದಿದ್ದರೂ ಸಹ.

فوائد الحديث

ಶರೀಅತ್ (ಇಸ್ಲಾಮೀ ಧರ್ಮಶಾಸ್ತ್ರ) ಜನರ ಬುದ್ಧಿಶಕ್ತಿಯನ್ನು ಸಂರಕ್ಷಿಸುತ್ತದೆ.

'ಸದ್ದು - ದ್ದರಾಇಅ್' (ಕೆಡುಕಿಗೆ ದಾರಿ ಮಾಡಿಕೊಡುವ ದ್ವಾರಗಳನ್ನು ಮುಚ್ಚುವುದು) ತತ್ವದ ಸಿಂಧುತ್ವವನ್ನು ವಿವರಿಸಲಾಗಿದೆ. ಅಂದರೆ ಅಂತಹ ಕೆಡುಕುಗಳಿಗೆ (ಮಾದಕತೆ) ಕಾರಣವಾಗುವ ಎಲ್ಲವನ್ನೂ ತಡೆಯುವುದು.

ಮಾದಕ ವಸ್ತುವಿನ ಕಡಿಮೆ ಪ್ರಮಾಣವನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಅಮಲುಂಟಾಗುವುದಕ್ಕೆ ಕಾರಣವಾಗುತ್ತದೆ.

ಒಂದು ವೇಳೆ ಕಡಿಮೆ ಪ್ರಮಾಣವಾಗಲಿ ಅಥವಾ ಹೆಚ್ಚಿನ ಪ್ರಮಾಣವಾಗಲಿ ಅಮಲೇರಿಸದಿದ್ದರೆ, ಅದು ಹರಾಮ್ ಆಗುವುದಿಲ್ಲ.

التصنيفات

Forbidden Drinks