إعدادات العرض
ನೀವು ಅಳುವವರಾಗಿರುತ್ತಲೇ ಹೊರತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದವರ ವಾಸಸ್ಥಳಗಳನ್ನು ಪ್ರವೇಶಿಸಬೇಡಿ
ನೀವು ಅಳುವವರಾಗಿರುತ್ತಲೇ ಹೊರತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದವರ ವಾಸಸ್ಥಳಗಳನ್ನು ಪ್ರವೇಶಿಸಬೇಡಿ
ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗೆ 'ಹಿಜ್ರ್' ಪ್ರದೇಶದ ಮೂಲಕ ಹಾದುಹೋದೆವು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಳುವವರಾಗಿರುತ್ತಲೇ ಹೊರತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದವರ ವಾಸಸ್ಥಳಗಳನ್ನು ಪ್ರವೇಶಿಸಬೇಡಿ. ಅವರಿಗೆ ಸಂಭವಿಸಿದ್ದು ನಿಮಗೂ ಸಂಭವಿಸಬಾರದೆಂಬ ಭಯದಿಂದ (ಹೀಗೆ ಮಾಡಿರಿ)". ನಂತರ ಅವರು (ತಮ್ಮ ವಾಹನಮೃಗವನ್ನು) ಗದರಿಸಿ, ವೇಗವನ್ನು ಹೆಚ್ಚಿಸಿ ಅದನ್ನು (ಆ ಪ್ರದೇಶವನ್ನು) ದಾಟಿಹೋದರು.
الترجمة
العربية Tiếng Việt Bahasa Indonesia Nederlands Kiswahili English অসমীয়া ગુજરાતી සිංහල Magyar ქართული Hausa Română ไทย Português मराठी ភាសាខ្មែរ دری አማርኛ বাংলা Kurdî తెలుగు Македонски Tagalog Українська ਪੰਜਾਬੀ മലയാളം Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೂದ್ ಜನಾಂಗದ ನಾಡಿನ ಮೂಲಕ ಹಾದುಹೋದುತ್ತಿದ್ದ ಸಂದರ್ಭದಲ್ಲಿ, ಶಿಕ್ಷೆಗೊಳಗಾದ ಮತ್ತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದ ಜನರ ನಾಡನ್ನು ಪ್ರವೇಶಿಸಬೇಡಿ ಅಥವಾ ಅಲ್ಲಿಗೆ ಹೋಗಬೇಡಿ ಎಂದು ನಿಷೇಧಿಸಿದರು. ಆದರೆ ಅದಕ್ಕೆ ಪ್ರವೇಶಿಸುವವನು ಅಳುವವನಾಗಿದ್ದರೆ, ಅವರಿಂದ ಪಾಠ ಕಲಿಯುವವನಾಗಿದ್ದರೆ (ಅದರಲ್ಲಿ ತೊಂದರೆಯಿಲ್ಲ). ಅವರಿಗೆ ಸಂಭವಿಸಿದಂತಹ ಶಿಕ್ಷೆಯು ತನಗೂ ಸಂಭವಿಸಬಹುದೆಂಬ ಭಯದಿಂದ (ಹೀಗೆ ಮಾಡಬೇಕು). ನಂತರ ಅವರು ತಮ್ಮ ವಾಹನಮೃಗವನ್ನು ಗದರಿಸಿ ವೇಗವಾಗಿ ಸಾಗಿ ಅದನ್ನು ದಾಟಿಹೋದರು.فوائد الحديث
ಅಲ್ಲಾಹು ನಾಶಗೊಳಿಸಿದವರ ದುರವಸ್ಥೆಗಳ ಬಗ್ಗೆ ಆಲೋಚಿಸಬೇಕು, ಅವರು ಯಾವ ಪಾಪಗಳಲ್ಲಿ ಬಿದ್ದಿದ್ದರೋ ಅದರ ಬಗ್ಗೆ ಎಚ್ಚರದಿಂದಿರಬೇಕು, ಮತ್ತು ದೃಷ್ಟಾಂತಗಳ ಬಗ್ಗೆ ಚಿಂತನೆ ನಡೆಸುವುದರಲ್ಲಿ ಉದಾಸೀನತೆ ತೋರಬಾರದೆಂದು ತಿಳಿಸಲಾಗಿದೆ.
ಶಿಕ್ಷೆಗೊಳಪಟ್ಟ ಇಂತಹವರ ನಾಡುಗಳನ್ನು ಅವರ ನಂತರ ವಾಸಸ್ಥಳವನ್ನಾಗಿ ಮಾಡಿಕೊಳ್ಳಬಾರದು, ಅಥವಾ ತಾಯ್ನಾಡನ್ನಾಗಿ ಮಾಡಿಕೊಳ್ಳಬಾರದು. ಏಕೆಂದರೆ ಅಲ್ಲಿ ವಾಸಿಸುವವನು ಸದಾ ಅಳುವ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ, ಮತ್ತು ಈ ಸ್ಥಿತಿಯಲ್ಲಿ ಹೊರತು ಅವುಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಇಮಾಮ್ ನವವಿ ಹೇಳುತ್ತಾರೆ: "ಇದರಲ್ಲಿ, ಅನ್ಯಾಯಗಾರರ ನಾಡುಗಳು ಮತ್ತು ಶಿಕ್ಷೆಯ ಸ್ಥಳಗಳ ಮೂಲಕ ಹಾದುಹೋಗುವಾಗ ಜಾಗರೂಕತೆ ವಹಿಸಲು ಪ್ರೋತ್ಸಾಹಿಸಲಾಗಿದೆ. 'ವಾದಿ ಮುಹಸ್ಸಿರ್' ನಲ್ಲಿ ವೇಗವಾಗಿ ಸಾಗುವುದೂ ಇದೇ ಉದ್ದೇಶದಿಂದಾಗಿದೆ. ಏಕೆಂದರೆ ಆನೆ ಸೈನ್ಯದವರು ಅಲ್ಲಿ ನಾಶವಾಗಿದ್ದರು. ಆದ್ದರಿಂದ, ಇಂತಹ ಸ್ಥಳಗಳಲ್ಲಿ ಹಾದುಹೋಗುವವರು ಜಾಗರೂಕತೆ, ಭಯ, ಅಳು, ಮತ್ತು ಆ ದುರ್ಜನರ ಬಗ್ಗೆ ಹಾಗೂ ಅವರ ದುರಂತಗಳ ಬಗ್ಗೆ ಪಾಠ ಕಲಿಯುವುದು, ಮತ್ತು ಅದರಿಂದ ಅಲ್ಲಾಹನಲ್ಲಿ ಅಭಯ ಯಾಚಿಸುವುದು ಮಾಡಬೇಕಾಗಿದೆ.
ಈ ನಿಷೇಧ ಮತ್ತು ಎಚ್ಚರಿಕೆಯು ಸಮೂದ್ ಜನಾಂಗದ ವಾಸಸ್ಥಳಗಳಿಗೆ ಮತ್ತು ಅದೇ ಅರ್ಥವನ್ನು ಹೊಂದಿರುವ, ಶಿಕ್ಷೆಗೆ ಒಳಗಾದ ಇತರ ಎಲ್ಲಾ ಜನಾಂಗಗಳಿಗೂ ಅನ್ವಯಿಸುತ್ತದೆ.
ಈ ಸ್ಥಳಗಳನ್ನು ಮತ್ತು ಈ ಪ್ರದೇಶಗಳನ್ನು ಪ್ರವಾಸೋದ್ಯಮ, ವಿಹಾರ ಮತ್ತು ಅಂತಹ ಯಾವುದೇ ಉದ್ದೇಶಕ್ಕಾಗಿ ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
التصنيفات
Manners and Rulings of Travel