ಮೂರು ಸಮಯಗಳು. ಆ ಸಮಯಗಳಲ್ಲಿ ನಮಾಝ್ ಮಾಡುವುದನ್ನು ಅಥವಾ ನಮ್ಮ ಮೃತರನ್ನು ಸಮಾಧಿ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ…

ಮೂರು ಸಮಯಗಳು. ಆ ಸಮಯಗಳಲ್ಲಿ ನಮಾಝ್ ಮಾಡುವುದನ್ನು ಅಥವಾ ನಮ್ಮ ಮೃತರನ್ನು ಸಮಾಧಿ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ನಿಷೇಧಿಸುತ್ತಿದ್ದರು

ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಮೂರು ಸಮಯಗಳು. ಆ ಸಮಯಗಳಲ್ಲಿ ನಮಾಝ್ ಮಾಡುವುದನ್ನು ಅಥವಾ ನಮ್ಮ ಮೃತರನ್ನು ಸಮಾಧಿ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ನಿಷೇಧಿಸುತ್ತಿದ್ದರು: ಸೂರ್ಯನು ಸರಿಯಾಗಿ ಉದಯಿಸಲು ಪ್ರಾರಂಭಿಸಿ ಅದು (ಒಂದು ಈಟಿಯಷ್ಟು) ಎತ್ತರಕ್ಕೆ ಏರುವವರೆಗೆ. ನಡು ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ನಿಂತು ಅದು ಪಶ್ಚಿಮಕ್ಕೆ ವಾಲುವವರೆಗೆ. ಸೂರ್ಯನು ಅಸ್ತಮಿಸಲು ವಾಲಿಕೊಂಡು ಅದು ಸಂಪೂರ್ಣವಾಗಿ ಮುಳುಗುವವರೆಗೆ.

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಗಲಿನ ಮೂರು ಸಮಯಗಳಲ್ಲಿ ಐಚ್ಛಿಕ (ನಫಿಲ್) ನಮಾಝ್ ಮಾಡುವುದನ್ನು ಅಥವಾ ಮೃತರನ್ನು ಸಮಾಧಿ ಮಾಡುವುದನ್ನು ನಿಷೇಧಿಸಿದರು: ಮೊದಲ ಸಮಯ: ಸೂರ್ಯನು ಸರಿಯಾಗಿ ಉದಯಿಸುವಾಗ, ಅಂದರೆ ಅದರ ಉದಯದ ಆರಂಭದಿಂದ ಅದು ಒಂದು ಈಟಿಯಷ್ಟು ಎತ್ತರಕ್ಕೆ ಏರುವವರೆಗೆ. ಇದನ್ನು ಸುಮಾರು ಹದಿನೈದು ನಿಮಿಷಗಳೆಂದು ಅಂದಾಜಿಸಲಾಗಿದೆ. ಎರಡನೇ ಸಮಯ: ಸೂರ್ಯನು ಆಕಾಶದ ಮಧ್ಯಭಾಗದಲ್ಲಿದ್ದಾಗ. ಆಗ ಅದಕ್ಕೆ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆರಳು ಇರುವುದಿಲ್ಲ. ಅದು ಆಕಾಶದ ಮಧ್ಯಭಾಗದಿಂದ ಸರಿಯುವವರೆಗೆ ಮತ್ತು ಪೂರ್ವ ದಿಕ್ಕಿನಲ್ಲಿ ನೆರಳು ಕಾಣಿಸಿಕೊಳ್ಳುವವರೆಗೆ. ಅಂದರೆ ಝುಹ್ರ್ ನಮಾಝ್‌ನ ಸಮಯ ಪ್ರಾರಂಭವಾಗುವವರೆಗೆ. ಇದು ಅಲ್ಪಾವಧಿಯಾಗಿದೆ. ಇದನ್ನು ಸುಮಾರು ಐದು ನಿಮಿಷಗಳೆಂದು ಅಂದಾಜಿಸಲಾಗಿದೆ. ಮೂರನೇ ಸಮಯ: ಸೂರ್ಯನು ಅಸ್ತಮಿಸಲು ವಾಲಿಕೊಂಡು ಪ್ರಾರಂಭಿಸಿದಾಗಿನಿಂದ ಅದು ಸಂಪೂರ್ಣವಾಗಿ ಮುಳುಗುವವರೆಗೆ.

فوائد الحديث

ಈ ಹದೀಸ್ ಮತ್ತು ಇತರ ಹದೀಸ್‌ಗಳು ಸೂಚಿಸುವಂತೆ ನಮಾಝ್ ಮಾಡಲು ನಿಷೇಧಿಸಲಾದ ಸಮಯಗಳು ಹೀಗಿವೆ: ಮೊದಲನೆಯದು: ಫಜ್ರ್ ನಮಾಝ್‌ನ ನಂತರ ಸೂರ್ಯೋದಯದವರೆಗೆ. ಎರಡನೆಯದು: ಸೂರ್ಯೋದಯದ ಸಮಯದಲ್ಲಿ ಅದು ಒಂದು ಈಟಿಯಷ್ಟು ಎತ್ತರಕ್ಕೆ ಏರಿದೆಯೆಂದು ಕಣ್ಣಿಗೆ ಕಾಣಿಸುವವರೆಗೆ. ಅಂದರೆ ಸುಮಾರು ಹದಿನೈದು ನಿಮಿಷಗಳು. ಮೂರನೆಯದು: ನಡು ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ನಿಂತು ಅದು ಸರಿಯುವವರೆಗೆ. ಅಂದರೆ ಮಧ್ಯಾಹ್ನ ನಿಂತಿರುವವನಿಗೆ ಪೂರ್ವದಲ್ಲಾಗಲೀ ಪಶ್ಚಿಮದಲ್ಲಾಗಲೀ ನೆರಳು ಇಲ್ಲದಿರುವಾಗ. ಕೆಲವರು ಇದನ್ನು ಸುಮಾರು ಐದು ನಿಮಿಷಗಳೆಂದು ಅಂದಾಜಿಸಿದ್ದಾರೆ. ನಾಲ್ಕನೆಯದು: ಅಸ್ರ್ ನಮಾಝ್‌ನ ನಂತರ ಸೂರ್ಯಾಸ್ತದವರೆಗೆ. ಐದನೆಯದು: ಸೂರ್ಯನು ಹಳದಿ ಬಣ್ಣಕ್ಕೆ ತಿರುಗಿದಾಗಿನಿಂದ ಅದು ಮುಳುಗುವವರೆಗೆ.

ಈ ನಿಷೇಧಿತ ಐದು ಸಮಯಗಳಲ್ಲಿ ನಮಾಝ್ ಮಾಡುವ ನಿಷೇಧದಿಂದ ಫರ್ಝ್ (ಕಡ್ಡಾಯ) ನಮಾಝ್‌ಗಳು ಮತ್ತು ನಿರ್ದಿಷ್ಟ ಕಾರಣಗಳಿರುವ ನಮಾಝ್‌ಗಳನ್ನು ಹೊರತುಪಡಿಸಲಾಗಿದೆ (ಉದಾ: ತಹಿಯ್ಯತುಲ್ ಮಸ್ಜಿದ್, ವುಝೂ ನಂತರದ ನಮಾಝ್, ತಪ್ಪಿಹೋದ ನಮಾಝ್‌ನ ಖಝಾ ಇತ್ಯಾದಿ).

ಮೃತದೇಹ ಸಮಾಧಿ ಮಾಡುವುದನ್ನು ಹದೀಸ್‌ನಲ್ಲಿ ಉಲ್ಲೇಖಿಸಲಾದ ಈ ಮೂರು ಇಕ್ಕಟ್ಟಿನ ಸಮಯಗಳಿಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ನಿಷೇಧಿಸಲಾಗಿದೆ. ಹಗಲು ಅಥವಾ ರಾತ್ರಿಯ ಬೇರೆ ಯಾವುದೇ ಸಮಯದಲ್ಲಿ ಸಮಾಧಿ ಮಾಡುವುದು ಅನುಮತಿಸಲಾಗಿದೆ.

ಈ ಸಮಯಗಳಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವುದರ ಹಿಂದಿನ (ಹಿಕ್ಮತ್) ಜಾಣ್ಮೆ ಯೇನೆಂದರೆ, ಮೂಲತಃ ಮುಸ್ಲಿಮನು ಅಲ್ಲಾಹನ ಆರಾಧನೆ ಸಲ್ಲಿಸುವ ರೂಪದಲ್ಲಿ ಅವನ ಆಜ್ಞೆಗಳಿಗೆ ಶರಣಾಗಬೇಕು ಮತ್ತು ಅವನ ನಿಷೇಧಗಳಿಂದ ದೂರವಿರಬೇಕು. ಒಂದು ಕರ್ಮವನ್ನು ಏಕೆ ಆದೇಶಿಸಲಾಗಿದೆ ಅಥವಾ ನಿಷೇಧಿಸಲಾಗಿದೆ ಎಂಬುದರ ಹಿಂದಿನ ಜಾಣ್ಮೆ ಅಥವಾ ಕಾರಣ ತಿಳಿಯುವವರೆಗೆ ಅವನು ಆರಾಧನೆಯನ್ನು ನಿಲ್ಲಿಸಬಾರದು. ಬದಲಿಗೆ ಅವನು ವಿಧೇಯನಾಗಬೇಕು. ಆದರೂ, ಇತರ ಹದೀಸ್‌ಗಳಲ್ಲಿ ಇದರ ಹಿಂದಿನ ಕಾರಣಗಳು ವರದಿಯಾಗಿವೆ: ಮೊದಲನೆಯದು: ಮಧ್ಯಾಹ್ನದ ಸಮಯದಲ್ಲಿ, ಸೂರ್ಯನು ನೆತ್ತಿಯಿಂದ ಸರಿಯುವ ಸ್ವಲ್ಪ ಮೊದಲು, ಜಹನ್ನಮ್ (ನರಕ) ವನ್ನು ತೀವ್ರವಾಗಿ ಉರಿಸಲಾಗುತ್ತದೆ. ಎರಡನೆಯದು: ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಮಾಝ್ ನಿಷೇಧಿಸಿರುವುದರ ಕಾರಣವೆಂದರೆ, ಮುಶ್ರಿಕ್‌ಗಳನ್ನು (ಬಹುದೇವಾರಾಧಕರನ್ನು) ಅನುಕರಿಸುವುದನ್ನು ತಪ್ಪಿಸುವುದು. ಏಕೆಂದರೆ ಅವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನಿಗೆ ಸಾಷ್ಟಾಂಗ ಮಾಡುತ್ತಾರೆ. ಮೂರನೆಯದು: ಫಜ್ರ್ ನಮಾಝ್‌ನ ನಂತರ ಸೂರ್ಯೋದಯದವರೆಗೆ ಮತ್ತು ಅಸ್ರ್ ನಮಾಝ್‌ನ ನಂತರ ಸೂರ್ಯಾಸ್ತದವರೆಗೆ ನಮಾಝ್ ನಿಷೇಧಿಸಿರುವುದು ಕೆಡುಕಿನ ದ್ವಾರವನ್ನು ಮುಚ್ಚುವುದರ ಭಾಗವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಅನುಕರಿಸುವುದು ಸಂಪೂರ್ಣವಾಗಿ ನಿಲ್ಲುತ್ತದೆ ಮತ್ತು ಮುಸ್ಲಿಂ ಅವರ ಶಿರ್ಕ್‌ನಲ್ಲಿ ಅವರನ್ನು ಅನುಕರಿಸುವುದಿಲ್ಲ. ಏಕೆಂದರೆ ಅವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನಿಗೆ ಸಾಷ್ಟಾಂಗ ಮಾಡುತ್ತಾರೆ.

التصنيفات

Times Not to Pray