ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ

ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ

ಬರಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಮಾಝ್ ಮಾಡುವಾಗ ಸಜ್ದಾದಲ್ಲಿ ಕೈಗಳು ಹೇಗಿರಬೇಕೆಂದು ವಿವರಿಸುತ್ತಿದ್ದಾರೆ. ಅದು ಹೇಗೆಂದರೆ, ಅಂಗೈಗಳನ್ನು ನೆಲದ ಮೇಲೆ ದೃಢವಾಗಿ ಇಡಬೇಕು ಮತ್ತು ಬೆರಳುಗಳನ್ನು ಮುಚ್ಚಿಕೊಂಡು ಕಿಬ್ಲಾದ ದಿಕ್ಕಿಗೆ ಇಡಬೇಕು. ಮೊಣಕೈಗಳು - ತೋಳು ಮತ್ತು ಮೇಲ್ಬಾಹುವಿನ ಜೋಡಣೆ - ನೆಲವನ್ನು ಮುಟ್ಟದಂತೆ ಎತ್ತಿಕೊಂಡಿರಬೇಕು ಮತ್ತು ಪಕ್ಕೆಲುಬುಗಳಿಂದ ದೂರವಿರಬೇಕು.

فوائد الحديث

ನಮಾಝ್ ಮಾಡುವವರು ತಮ್ಮ ಅಂಗೈಗಳನ್ನು ನೆಲದ ಮೇಲೆ ಇಡುವುದು ಕಡ್ಡಾಯವಾಗಿದೆ. ಎರಡು ಅಂಗೈಗಳು ಸಜ್ದಾದ (ಸಾಷ್ಟಾಂಗದ) ಏಳು ಅಂಗಗಳಲ್ಲಿ ಒಳಪಡುತ್ತವೆ.

ಮೊಣಕೈಗಳನ್ನು ನೆಲದಿಂದ ಎತ್ತಿಕೊಳ್ಳುವುದು ಅಪೇಕ್ಷಣೀಯವಾಗಿದೆ. ಮೃಗವು ತನ್ನ ತೋಳುಗಳನ್ನು ನೆಲದಲ್ಲಿ ಚಾಚುವಂತೆ ಅವುಗಳನ್ನು ಚಾಚುವುದು ಕರಾಹತ್ (ಅಸಹ್ಯಕರ) ಆಗಿದೆ.

ನಮಾಝ್‌ನಲ್ಲಿ ಹುರುಪು, ಶಕ್ತಿ ಮತ್ತು ಆಸಕ್ತಿಯನ್ನು ಪ್ರಕಟಿಸುವುದು ಧಾರ್ಮಿಕ ನಿಯಮವಾಗಿದೆ.

ನಮಾಝ್ ಮಾಡುವವನು ಸಜ್ದಾದ (ಸಾಷ್ಟಾಂಗದ) ಎಲ್ಲಾ ಅಂಗಗಳ ಮೇಲೆ ಆತುಕೊಂಡರೆ, ಪ್ರತಿ ಅಂಗವು ಅದರ ಆರಾಧನೆಯ ಹಕ್ಕನ್ನು ಪಡೆಯುತ್ತದೆ.

التصنيفات

Method of Prayer