ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು…

ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು' ಎಂದು ಸಲಾಂ ಹೇಳುತ್ತಿದ್ದರು, ಮತ್ತು ತಮ್ಮ ಎಡಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್' ಎಂದು ಸಲಾಂ ಹೇಳುತ್ತಿದ್ದರು

ವಾಯಿಲ್ ಬಿನ್ ಹುಜ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು' ಎಂದು ಸಲಾಂ ಹೇಳುತ್ತಿದ್ದರು, ಮತ್ತು ತಮ್ಮ ಎಡಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್' ಎಂದು ಸಲಾಂ ಹೇಳುತ್ತಿದ್ದರು."

[حسن] [رواه أبو داود]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಮಾಝಿನಿಂದ ಹೊರಬರಲು ಬಯಸಿದಾಗ, ತಮ್ಮ ಬಲ ಮತ್ತು ಎಡಗಡೆಗೆ ತಿರುಗಿ ಸಲಾಂ ಹೇಳುತ್ತಿದ್ದರು. ಅಂದರೆ, ಅವರು ತಮ್ಮ ಮುಖವನ್ನು ಬಲಗಡೆಗೆ ತಿರುಗಿಸಿ, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು" ಎಂದು ಹೇಳುತ್ತಿದ್ದರು. ಹಾಗೆಯೇ ಅವರು ತಮ್ಮ ಎಡಗಡೆಗೆ ಸಲಾಂ ಹೇಳುತ್ತಿದ್ದರು. ಅಂದರೆ, ಅವರು ತಮ್ಮ ಮುಖವನ್ನು ಎಡಗಡೆಗೆ ತಿರುಗಿಸಿ, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್" ಎಂದು ಹೇಳುತ್ತಿದ್ದರು.

فوائد الحديث

ನಮಾಝಿನಿಂದ ಹೊರಬರುವಾಗ ಎರಡು ಸಲಾಂ ಹೇಳುವುದು ಧಾರ್ಮಿಕ ನಿಯಮವಾಗಿದೆ, ಮತ್ತು ಅದು ನಮಾಝಿನ ಸ್ತಂಭಗಳಲ್ಲಿ (ಅರ್ಕಾನ್) ಒಂದಾಗಿದೆ.

ಕೆಲವೊಮ್ಮೆ 'ವಬರಕಾತುಹು' ಪದವನ್ನು ಹೆಚ್ಚುವರಿಯಾಗಿ ಹೇಳುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು (ಈ ಹದೀಸಿನಲ್ಲಿ ಹೇಳಿರುವಂತೆ) ಯಾವಾಗಲೂ ನಿರ್ವಹಿಸುತ್ತಿರಲಿಲ್ಲ.

ನಮಾಝಿನಲ್ಲಿ ಎರಡು ಸಲಾಂಗಳನ್ನು ಹೇಳುವುದು ಕಡ್ಡಾಯವಾದ ಸ್ತಂಭವಾಗಿದೆ. ಆದರೆ ಅವುಗಳನ್ನು ಹೇಳುವಾಗ ತಿರುಗುವುದು ಅಪೇಕ್ಷಣೀಯವಾಗಿದೆ.

"ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್" ಎಂದು ಹೇಳುವುದು ತಿರುಗುವ ಸಮಯದಲ್ಲಾಗಿರಬೇಕು. ಅದಕ್ಕೆ ಮೊದಲು ಅಥವಾ ನಂತರ ಆಗಿರಬಾರದು.

التصنيفات

Method of Prayer