ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ

ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರು ಪರಸ್ಪರ ನಡೆಸಿದ ದೌರ್ಜನ್ಯಗಳ ಪೈಕಿ ಪುನರುತ್ಥಾನ ದಿನದಂದು ಮೊ‌ಟ್ಟಮೊದಲು ರಕ್ತಪಾತದ ತೀರ್ಪು ನೀಡಲಾಗುವುದು , ಅಂದರೆ ಕೊಲೆ ಮತ್ತು ಜಖಂಗಳ ಕುರಿತಾಗಿದೆ.

فوائد الحديث

ರಕ್ತಪಾತದ ಗಂಭೀರತೆಯನ್ನು ಒತ್ತಿಹೇಳಲಾಗಿದೆ. ಏಕೆಂದರೆ ಏನನ್ನೇ ಆದರೂ ಪ್ರಮುಖ ವಿಷಯದಿಂದಲೇ ಪ್ರಾರಂಭಿಸಲಾಗುತ್ತದೆ.

ಪಾಪದಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ಆಧರಿಸಿ ಪಾಪಗಳ ಗಂಭೀರತೆಯನ್ನು ನಿರ್ಧರಿಸಲಾಗುತ್ತದೆ. ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದು ಅತ್ಯಂತ ಗಂಭೀರ ಹಾನಿಗಳಲ್ಲಿ ಒಂದಾಗಿದೆ. ಸತ್ಯನಿಷೇಧ ಮತ್ತು ಶಿರ್ಕ್ (ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವುದು) ಹೊರತುಪಡಿಸಿದರೆ ಇದೇ ಅತಿದೊಡ್ಡ ಪಾಪವಾಗಿದೆ.

التصنيفات

The Hereafter Life, Retribution