إعدادات العرض
ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು:…
ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು: "ಅಂತ್ಯಸಮಯ ಯಾವಾಗ?" ಅವರು ಕೇಳಿದರು: "ನೀನು ಅದಕ್ಕಾಗಿ ಏನನ್ನು ಸಿದ್ಧಪಡಿಸಿದ್ದೀಯಾ?
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು: "ಅಂತ್ಯಸಮಯ ಯಾವಾಗ?" ಅವರು ಕೇಳಿದರು: "ನೀನು ಅದಕ್ಕಾಗಿ ಏನನ್ನು ಸಿದ್ಧಪಡಿಸಿದ್ದೀಯಾ?" ಆ ವ್ಯಕ್ತಿ ಉತ್ತರಿಸಿದರು: "ಏನೂ ಇಲ್ಲ. ಆದರೆ ನಾನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುತ್ತೇನೆ." ಆಗ ಅವರು (ಪ್ರವಾದಿ) ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ." ಅನಸ್ ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ" ಎಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಕೇಳಿ ನಮಗೆ ಎಷ್ಟು ಸಂತೋಷವಾಯಿತೆಂದರೆ, ಅಷ್ಟು ಸಂತೋಷ ನಮಗೆ ಇನ್ನಾವುದರಿಂದಲೂ ಉಂಟಾಗಿರಲಿಲ್ಲ." ಅನಸ್ ಹೇಳಿದರು: "ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಬೂಬಕರ್‌ರನ್ನು ಮತ್ತು ಉಮರ್‌ರನ್ನು ಪ್ರೀತಿಸುತ್ತೇನೆ. ಅವರು ಮಾಡಿದಂತಹ ಕರ್ಮಗಳನ್ನು ನಾನು ಮಾಡಿರದಿದ್ದರೂ ಸಹ, ನನಗೆ ಅವರಲ್ಲಿರುವ ಪ್ರೀತಿಯಿಂದಾಗಿ ನಾನು ಅವರೊಂದಿಗೆ ಇರಲು ಬಯಸುತ್ತೇನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල Kurdî Kiswahili Português አማርኛ অসমীয়া ગુજરાતી Nederlands नेपाली پښتو Svenska دری ไทย Hausa മലയാളം Кыргызча Română Oromoo తెలుగు Malagasyالشرح
ಮರುಭೂಮಿಯಲ್ಲಿ ವಾಸಿಸುವ ಒಬ್ಬ ಅಲೆಮಾರಿ ಅರಬ್ಬನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯವು ಸಂಭವಿಸುವ ಸಮಯದ ಬಗ್ಗೆ ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀನು ಅದಕ್ಕಾಗಿ ಏನೆಲ್ಲಾ ಸತ್ಕರ್ಮಗಳನ್ನು ಸಿದ್ಧಪಡಿಸಿದ್ದೀಯಾ?" ಪ್ರಶ್ನೆ ಕೇಳಿದ ವ್ಯಕ್ತಿ ಉತ್ತರಿಸಿದರು: "ನಾನು ಅದಕ್ಕಾಗಿ ದೊಡ್ಡ ಕರ್ಮಗಳನ್ನು ಮಾಡಿಲ್ಲ. ಆದರೆ ನಾನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುತ್ತೇನೆ." ಆ ವ್ಯಕ್ತಿ ಅದರ ಹೊರತು ಬೇರೆ ಯಾವುದೇ ಆಂತರಿಕ, ದೈಹಿಕ ಅಥವಾ ಅರ್ಥಿಕ ಆರಾಧನೆಗಳ ಬಗ್ಗೆ ತಿಳಿಸಲಿಲ್ಲ. ಏಕೆಂದರೆ, ಅವೆಲ್ಲವೂ ಆ ಪ್ರೀತಿಯ ಪರಿಣಾಮವಾಗಿ ಉಂಟಾಗುವ ಅದರ ಶಾಖೆಗಳಾಗಿವೆ. ಏಕೆಂದರೆ, ಪ್ರಾಮಾಣಿಕ ಪ್ರೀತಿಯು ಸತ್ಕರ್ಮಗಳನ್ನು ಮಾಡಲು ಪರಿಶ್ರಮಿಸುವಂತೆ ಪ್ರೇರೇಪಿಸುತ್ತದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯೊಡನೆ ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಸ್ವರ್ಗದಲ್ಲಿ ಅವರೊಂದಿಗೆ ಇರುವೆ." ಈ ಸುವಾರ್ತೆ ಕೇಳಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಿಗೆ ಅತಿಯಾದ ಸಂತೋಷವಾಯಿತು. ನಂತರ, ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಬೂಬಕರ್‌ರನ್ನು ಮತ್ತು ಉಮರ್‌ರನ್ನು ಪ್ರೀತಿಸುತ್ತಾರೆ ಮತ್ತು ಅವರೊಡನೆ ಇರಲು ಬಯಸುತ್ತಾರೆ. ಇವರು ಮಾಡಿದ ಕರ್ಮಗಳು ಅವರ ಕರ್ಮಗಳಂತೆ ಅಗಾಧವಾಗಿರದಿದ್ದರೂ ಸಹ.فوائد الحديث
ಪ್ರಶ್ನೆ ಕೇಳಿದವನಿಗೆ ಉತ್ತರಿಸುವಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿದ ಜಾಣ್ಮೆಯನ್ನು ತಿಳಿಸಲಾಗಿದೆ. ಅದೇನೆಂದರೆ, ಆ ವ್ಯಕ್ತಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಾಮುಖ್ಯತೆಯಿರುವ ಮತ್ತು ಅವನ ಮೋಕ್ಷಕ್ಕೆ ಕಾರಣವಾಗುವ ವಿಷಯವನ್ನು ಅವರು ಕೇಳಿದರು. ಅಂದರೆ, ಪ್ರಯೋಜನಕಾರಿಯಾದ ಸತ್ಕರ್ಮಗಳ ಮೂಲಕ ಪರಲೋಕಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದು.
ಮನುಷ್ಯನು ಅಲ್ಲಾಹನ ಭೇಟಿಗಾಗಿ ಸಿದ್ಧತೆ ಮತ್ತು ಪೂರ್ಣ ತಯಾರಿಯಲ್ಲಿರಲು ಅಲ್ಲಾಹು ಅಂತ್ಯದಿನದ ಸಮಯವನ್ನು ತಿಳಿಸದೆ ಅಡಗಿಸಿದ್ದಾನೆ.
ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು, ಹಾಗೂ ಸತ್ಯವಿಶ್ವಾಸಿಗಳಲ್ಲಿ ಸೇರಿದ ಇತರ ಸಜ್ಜನರನ್ನು ಪ್ರೀತಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಬಹುದೇವವಿಶ್ವಾಸಿಗಳನ್ನು ಪ್ರೀತಿಸುವುದರ ಬಗ್ಗೆ ಎಚ್ಚರಿಸಲಾಗಿದೆ.
"ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ" ಎಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತಿನ ತಿರುಳು ಪದವಿ ಮತ್ತು ಸ್ಥಾನಮಾನದಲ್ಲಿ ಅವರು ಪರಸ್ಪರ ಸಮಾನರಾಗಿರುತ್ತಾರೆ ಎಂದಲ್ಲ. ಬದಲಿಗೆ, ಅದರ ಅರ್ಥ ಅವರ ವಾಸಸ್ಥಳವು ವಿದೂರವಾಗಿದ್ದರೂ ಸಹ ಅವರು ಒಬ್ಬರನ್ನೊಬ್ಬರು ನೋಡಲು ಸಾಧ್ಯವಾಗುವ ರೀತಿಯಲ್ಲಿ ಸ್ವರ್ಗದಲ್ಲಿರುತ್ತಾರೆ ಎಂದಾಗಿದೆ.
ತನಗೆ ಹೆಚ್ಚು ಪ್ರಯೋಜನ ಮತ್ತು ಉಪಕಾರವಿರುವ ಕೆಲಸಗಳಲ್ಲಿ ನಿರತನಾಗಬೇಕು ಮತ್ತು ಅಪ್ರಯೋಜನಕಾರಿ ವಿಷಯಗಳ ಬಗ್ಗೆ ಪ್ರಶ್ನಿಸುವುದರಿಂದ ದೂರವಿರಬೇಕು ಎಂದು ಮುಸಲ್ಮಾನನಿಗೆ ನಿರ್ದೇಶನ ನೀಡಲಾಗಿದೆ.