إعدادات العرض
ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ…
ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು. ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮಲ್ಲಿ ಮತ್ತು ನೀವು ತಂದ ಧರ್ಮದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆದರೂ ನಿಮಗೆ ನಮ್ಮ ಬಗ್ಗೆ ಭಯವೇ?" ಅವರು ಉತ್ತರಿಸಿದರು: "ಹೌದು, ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಇವೆ. ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල ئۇيغۇرچە Kurdî Kiswahili Português አማርኛ অসমীয়া ગુજરાતી Nederlands नेपाली پښتو Hausa ไทย Svenska മലയാളം Кыргызча Română Oromoo తెలుగు Malagasyالشرح
ಧರ್ಮದಲ್ಲಿ ಮತ್ತು ಆಜ್ಞಾನುಸರಣೆ ಮಾಡುವುದರಲ್ಲಿ ಸ್ಥಿರವಾಗಿ ನಿಲ್ಲಿಸಲು ಮತ್ತು ವಕ್ರ ಮಾರ್ಗ ಹಾಗೂ ದುರ್ಮಾರ್ಗಗಳಿಂದ ದೂರವಿರಿಸಲು ಅಲ್ಲಾಹನಲ್ಲಿ ಬೇಡುವುದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ನಿರ್ವಹಿಸುತ್ತಿದ್ದ ಒಂದು ಪ್ರಾರ್ಥನೆಯಾಗಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಯನ್ನು ಅತಿಯಾಗಿ ನಿರ್ವಹಿಸುವುದನ್ನು ನೋಡಿ ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಆಶ್ಚರ್ಯಪಟ್ಟರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ, "ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆಯಿವೆ, ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ" ಎಂದು ತಿಳಿಸಿದರು. ಹೃದಯವು ಸತ್ಯವಿಶ್ವಾಸ ಮತ್ತು ಸತ್ಯನಿಷೇಧವು ನೆಲೆಸುವ ಸ್ಥಳವಾಗಿದೆ. ಹೃದಯವು ಅತಿ ಹೆಚ್ಚಾಗಿ ತಿರುಗುವ ಕಾರಣ ಅದನ್ನು 'ಕಲ್ಬ್' (ತಿರುಗುವಂತದ್ದು) ಎಂದು ಕರೆಯಲಾಗಿದೆ. ಮಡಿಕೆಯಲ್ಲಿ ನೀರು ಕುದಿಯುವುದಕ್ಕಿಂತಲೂ ತೀವ್ರವಾಗಿ ಹೃದಯವು ತಿರುಗುತ್ತದೆ. ಅಲ್ಲಾಹು ಇಚ್ಛಿಸಿದವನ ಹೃದಯವನ್ನು ಅವನು ಸನ್ಮಾರ್ಗದಲ್ಲಿ ನಿಲ್ಲಿಸುತ್ತಾನೆ ಮತ್ತು ಧರ್ಮದಲ್ಲಿ ದೃಢಗೊಳಿಸುತ್ತಾನೆ. ಅಲ್ಲಾಹು ಇಚ್ಛಿಸಿದವನ ಹೃದಯವನ್ನು ಅವನು ಸನ್ಮಾರ್ಗದಿಂದ ವಕ್ರ ಮತ್ತು ದುರ್ಮಾರ್ಗಕ್ಕೆ ತಿರುಗಿಸುತ್ತಾನೆ.فوائد الحديث
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮುಂದೆ ತೋರುತ್ತಿದ್ದ ಶರಣಾಗತಿ ಮತ್ತು ವಿನಮ್ರತೆಯನ್ನು ಮತ್ತು ಈ ಪ್ರಾರ್ಥನೆಯನ್ನು ಅಲ್ಲಾಹನಲ್ಲಿ ಬೇಡಬೇಕೆಂದು ಸಮುದಾಯಕ್ಕೆ ನಿರ್ದೇಶಿಸಿದ್ದನ್ನು ತಿಳಿಸಲಾಗಿದೆ.
ಧರ್ಮದಲ್ಲಿ ನೇರವಾಗಿ ಮತ್ತು ದೃಢವಾಗಿ ನಿಲ್ಲುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಕರ್ಮಗಳನ್ನು ಅದರ ಅಂತ್ಯಸ್ಥಿತಿಯನ್ನು ನೋಡಿ ಪರಿಗಣಿಸಲಾಗುತ್ತದೆ.
ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲಲು ಅಲ್ಲಾಹು ನೀಡುವ ದೃಢತೆಯನ್ನು ಕಣ್ಣೆವೆಯಿಕ್ಕುವಷ್ಟು ಕಾಲ ಕೂಡ ಬೇಡವೆಂದು ನಿರಾಕರಿಸಿ ಸ್ವಾವಲಂಬಿಯಾಗಲು ಮನುಷ್ಯನಿಗೆ ಸಾಧ್ಯವಿಲ್ಲ.
ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸುತ್ತಾ ಈ ಪ್ರಾರ್ಥನೆಯನ್ನು ಪದೇ ಪದೇ ಪ್ರಾರ್ಥಿಸಲು ಪ್ರೋತ್ಸಾಹಿಸಲಾಗಿದೆ.
ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲುವುದು ಅತಿದೊಡ್ಡ ಅನುಗ್ರಹವಾಗಿದ್ದು, ಅದಕ್ಕಾಗಿ ಪರಿಶ್ರಮಿಸುವುದು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದು ಮನುಷ್ಯನ ಕರ್ತವ್ಯವಾಗಿದೆ.