إعدادات العرض
ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು…
ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ
ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî Tiếng Việt Magyar ქართული Kiswahili සිංහල Română অসমীয়া ไทย मराठी ភាសាខ្មែរ دری አማርኛ ગુજરાતી Македонски Nederlands ਪੰਜਾਬੀ മലയാളംالشرح
ಉಮ್ಮು ಅತಿಯ್ಯಾ ಅಲ್-ಅನ್ಸಾರಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರಿಗೆ ಜನಾಝಾಗಳೊಂದಿಗೆ (ಮೃತದೇಹಗಳೊಂದಿಗೆ) ನಡೆಯುವುದನ್ನು ನಿಷೇಧಿಸಿದ್ದಾರೆ. ಇದಕ್ಕೆ ಕಾರಣ ಅವರಿಗೆ ಮತ್ತು ಅವರಿಂದ ಫಿತ್ನಾ (ಪ್ರಚೋದನೆ/ಪರೀಕ್ಷೆ) ಉಂಟಾಗುವ ಭಯವಾಗಿದೆ. ಅವರ ತಾಳ್ಮೆಯ ಕೊರತೆಯೂ ಅದಕ್ಕೆ ಒಂದು ಕಾರಣವಾಗಿದೆ. ನಂತರ ಅವರು (ಉಮ್ಮು ಅತಿಯ್ಯಾ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇತರ ನಿಷಿದ್ಧ ಕಾರ್ಯಗಳಲ್ಲಿ ಮಾಡುವಂತೆ ಈ ನಿಷೇಧದ ಬಗ್ಗೆ ಒತ್ತುಕೊಟ್ಟು ಹೇಳಿಲ್ಲ.فوائد الحديث
ಮಹಿಳೆಯರಿಗೆ ಜನಾಝಾಗಳನ್ನು ಹಿಂಬಾಲಿಸುವುದನ್ನು ನಿಷೇಧಿಸಲಾಗಿದೆ. ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಸಿದ್ಧಪಡಿಸುವ ಸ್ಥಳಕ್ಕೆ, ನಮಾಝ್ ಮಾಡುವ ಸ್ಥಳಕ್ಕೆ ಮತ್ತು ಸಮಾಧಿ ಮಾಡುವ ಕಬರಸ್ಥಾನಕ್ಕೆ ಹಿಂಬಾಲಿಸುವುದನ್ನೂ ಇದು ಒಳಗೊಳ್ಳುತ್ತದೆ.
ನಿಷೇಧಕ್ಕೆ ಕಾರಣವೇನೆಂದರೆ, ಮಹಿಳೆಯರಿಗೆ ಇಂತಹ ದುಃಖದ ದೃಶ್ಯಗಳನ್ನು ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು (ಪುರುಷರಷ್ಟು) ಸಹಿಸಲಾಗುವುದಿಲ್ಲ. ಕೆಲವೊಮ್ಮೆ ಅವರಿಂದ ಕಡ್ಡಾಯವಾದ ತಾಳ್ಮೆಗೆ ವಿರುದ್ಧವಾದ ರೀತಿಯಲ್ಲಿ ಅಸಮಾಧಾನ ಮತ್ತು ಅಸಹನೆ ವ್ಯಕ್ತವಾಗುವ ಸಾಧ್ಯತೆಯಿದೆ.
ಮೂಲತತ್ವದ ಪ್ರಕಾರ ತಡೆಯುವುದು (ನಹೀ) ಎಂದರೆ 'ತಹ್ರೀಮ್' (ಸಂಪೂರ್ಣವಾಗಿ ನಿಷಿದ್ಧಗೊಳಿಸುವುದು) ಆಗಿದ್ದರೂ, ಸಾಂದರ್ಭಿಕ ಸೂಚನೆಯಿಂದ ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿದುಕೊಂಡಿದ್ದೇನೆಂದರೆ, ಜನಾಝಾಗಳನ್ನು ಹಿಂಬಾಲಿಸುವುದರಿಂದ ಅವರನ್ನು ಖಚಿತವಾಗಿ ಮತ್ತು ಕಟ್ಟುನಿಟ್ಟಾಗಿ ನಿಷೇಧಿಸಲಾಗಿಲ್ಲ. ಆದರೆ, ಜನಾಝಾಗಳನ್ನು ಹಿಂಬಾಲಿಸುವ ವಿಷಯದಲ್ಲಿ ಈ ಹದೀಸ್‌ಗಿಂತಲೂ ಹೆಚ್ಚು ಕಟ್ಟುನಿಟ್ಟಾದ ಸೂಚನೆಯನ್ನು ನೀಡುವ ಇತರ ಹದೀಸ್‌ಗಳು ವರದಿಯಾಗಿವೆ.
