ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ…

ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ ಬರುವೆವು." (ಹೀಗೆ ಹೇಳುತ್ತಾ) ಅವರು ತಮ್ಮ ಬೆರಳುಗಳನ್ನು ಜೋಡಿಸಿದರು

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ ಬರುವೆವು." (ಹೀಗೆ ಹೇಳುತ್ತಾ) ಅವರು ತಮ್ಮ ಬೆರಳುಗಳನ್ನು ಜೋಡಿಸಿದರು.

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಿಗೆ ಇಬ್ಬರು ಹೆಣ್ಣು ಮಕ್ಕಳನ್ನು ಅಥವಾ ಸಹೋದರಿಯರನ್ನು ಕರುಣಿಸಲಾಗಿದೆಯೋ, ಮತ್ತು ಅವರಿಬ್ಬರು ದೊಡ್ಡವರಾಗುವವರೆಗೆ ಮತ್ತು ಪ್ರಾಯಕ್ಕೆ ಬರುವವರೆಗೆ, ಅವರ ಪೋಷಣೆ, ಶಿಕ್ಷಣ, ಒಳಿತಿಗೆ ಮಾರ್ಗದರ್ಶನ ಮಾಡುವುದು, ಕೆಡುಕಿನ ಬಗ್ಗೆ ಎಚ್ಚರಿಸುವುದು ಮುಂತಾದವುಗಳನ್ನು ಮಾಡುತ್ತಾರೋ, ಅವರು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುತ್ಥಾನ ದಿನದಂದು ಇದರಂತೆ ಬರುತ್ತಾರೆ. (ಹೀಗೆ ಹೇಳುತ್ತಾ) ಅವರು ತಮ್ಮ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಜೋಡಿಸಿದರು.

فوائد الحديث

ಹೆಣ್ಣು ಮಕ್ಕಳನ್ನು ವಿವಾಹವಾಗುವವರೆಗೆ ಅಥವಾ ಪ್ರಾಯಕ್ಕೆ ಬರುವವರೆಗೆ ಪೋಷಣೆ ಮತ್ತು ಶಿಕ್ಷಣ ನೀಡುತ್ತಾ ನೋಡಿಕೊಳ್ಳುವವರಿಗೆ ಮಹತ್ತರವಾದ ಪ್ರತಿಫಲವಿದೆ. ಅದೇ ರೀತಿ ಸಹೋದರಿಯರನ್ನು ಕೂಡ.

ಗಂಡು ಮಕ್ಕಳನ್ನು ನೋಡಿಕೊಳ್ಳುವುದಕ್ಕಿಂತ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದರ ಪ್ರತಿಫಲವು ದೊಡ್ಡದಾಗಿದೆ. ಏಕೆಂದರೆ ಗಂಡುಮಕ್ಕಳ ವಿಷಯದಲ್ಲಿ ಇಂತಹ ಯಾವುದೇ ಉಲ್ಲೇಖಗಳಿಲ್ಲ. ಇದಕ್ಕೆ ಕಾರಣವೇನೆಂದರೆ, ಹೆಣ್ಣು ಮಕ್ಕಳ ಪೋಷಣೆ ಮತ್ತು ಅವರ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡುವುದು ಗಂಡು ಮಕ್ಕಳ ಕಾರ್ಯಗಳಿಗಿಂತ ದೊಡ್ಡದಾಗಿದೆ. ಏಕೆಂದರೆ ಹೆಣ್ಣು ಮಕ್ಕಳು ಪರ್ದಾದಲ್ಲಿ ಇರುವವರಾಗಿದ್ದು, ಅವರಿಗೆ ತಮ್ಮ ಕಾರ್ಯಗಳನ್ನು ನೇರವಾಗಿ ನಿರ್ವಹಿಸಲಾಗುವುದಿಲ್ಲ ಮತ್ತು ಅವರು ಗಂಡು ಮಕ್ಕಳಂತೆ ಹೊರ ಹೋಗಿ ವ್ಯವಹರಿಸುವುದಿಲ್ಲ. ಅದೇ ರೀತಿ, ತಂದೆಗೆ ತನ್ನ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಂದಾಗಿ ತನ್ನ ಶತ್ರುಗಳ ವಿರುದ್ಧ ಬಲವನ್ನು ಪಡೆಯುವ, ಹೆಸರನ್ನು ಉಳಿಸುವ ಮತ್ತು ವಂಶವನ್ನು ಮುಂದುವರಿಸುವ ಆಸೆ ಇರುವುದಿಲ್ಲ. ಆದ್ದರಿಂದ ಅವರು ಹೆಣ್ಣು ಮಕ್ಕಳಿಗಾಗಿ ಖರ್ಚು ಮಾಡುವಾಗ ತಾಳ್ಮೆ, ನಿಷ್ಕಳಂಕತೆ ಮತ್ತು ಒಳ್ಳೆಯ ಉದ್ದೇಶದೊಂದಿಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಅದರ ಪ್ರತಿಫಲವು ದೊಡ್ಡದಾಗಿದೆ. ಹೀಗಾಗಿ ಅವರು ಪುನರುತ್ಥಾನ ದಿನದಂದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗೆಳೆಯರಾಗಿರುತ್ತಾರೆ.

ಮಹಿಳೆಯರು ಪ್ರಾಯಕ್ಕೆ ಬರುವ ಚಿಹ್ನೆಗಳು: ಹದಿನೈದು ವರ್ಷ ವಯಸ್ಸನ್ನು ಪೂರ್ಣಗೊಳಿಸುವುದು. ಅಥವಾ ಮುಟ್ಟಾಗುವುದು; ಅದು ಹದಿನೈದು ವರ್ಷಕ್ಕೆ ಮೊದಲಾದರೂ ಸಹ. ಅಥವಾ ಅವರ ಜನನಾಂಗದ ಸುತ್ತ ಒರಟಾದ ಕೂದಲು ಬೆಳೆಯುವುದು. ಅಥವಾ ಸ್ವಪ್ನಸ್ಖಲನವಾಗುವುದು. ಅಂದರೆ ನಿದ್ರೆಯಲ್ಲಿ ವೀರ್ಯ ಹೊರಬರುವುದು.

ಕುರ್ತುಬಿ ಹೇಳಿದರು: "ಅವರು ಪ್ರಾಯಕ್ಕೆ ಬರುವುದು ಎಂದರೆ ಅವರು ಸ್ವತಂತ್ರವಾಗಿ ನಿಲ್ಲುವ ಸ್ಥಿತಿಯನ್ನು ತಲುಪುವುದಾಗಿದೆ. ಇದು ಮಹಿಳೆಯರಲ್ಲಿ ಅವರ ಪತಿಯಂದಿರು ಅವರೊಂದಿಗೆ ಸೇರುವಾಗ ಉಂಟಾಗುತ್ತದೆ. (ಹದೀಸಿನಲ್ಲಿ ಹೇಳಲಾಗಿರುವ) ಪ್ರಾಯಕ್ಕೆ ಬರುವುದು ಎಂದರೆ, ಅವರಿಗೆ ಮುಟ್ಟಾಗುವುದು ಮತ್ತು ಅವರು ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧರಾಗುವುದು ಎಂದಲ್ಲ. ಏಕೆಂದರೆ ಕೆಲವೊಮ್ಮೆ ಅವಳು ಅದಕ್ಕೂ ಮೊದಲು ವಿವಾಹವಾಗಿ, ಅವಳಿಗೆ ಗಂಡನ ಹೊರತು ಬೇರೆ ಪೋಷಕರ ಅಗತ್ಯವಿಲ್ಲದೆ ಬರಬಹುದು. ಕೆಲವೊಮ್ಮೆ ಅವಳಿಗೆ ಸ್ವತಂತ್ರವಾಗಿ ನಿಲ್ಲುವ ಸ್ಥಿತಿಯನ್ನು ತಲುಪುವುದಕ್ಕೆ ಮೊದಲೇ ಮುಟ್ಟಾಗಬಹುದು. ಇಂತಹ ಸ್ಥಿತಿಯಲ್ಲಿ ಅವಳನ್ನು ಒಂಟಿಯಾಗಿ ಬಿಟ್ಟರೆ ಅವಳಿಗೆ ಗೊಂದಲವಾಗಬಹುದು ಮತ್ತು ಅವಳ ಪರಿಸ್ಥಿತಿ ಹದಗೆಡಬಹುದು. ಬದಲಿಗೆ, ಈ ಸ್ಥಿತಿಯಲ್ಲಿ ಅವಳಿಗೆ ಆಶ್ರಯ ಮತ್ತು ಸಂರಕ್ಷಣೆಯ ಅಗತ್ಯ ಹೆಚ್ಚಾಗಿದ್ದು, ಅವಳ ಸಂರಕ್ಷಣೆಯ ಭಾಗವಾಗಿ ಅವಳ ಪೋಷಕರು ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವಳನ್ನು ವಿವಾಹವಾಗಲು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಈ ಅರ್ಥದಿಂದಲೇ, ನಮ್ಮ ವಿದ್ವಾಂಸರು ಹೇಳುವುದೇನೆಂದರೆ, ಹುಡುಗಿ ಪ್ರಾಯಕ್ಕೆ ಬರುವುದರಿಂದ ತಂದೆ ಅವಳಿಗೋಸ್ಕರ ಖರ್ಚು ಮಾಡುವುದಕ್ಕೆ ವಿನಾಯಿತಿ ದೊರೆಯುವುದಿಲ್ಲ. ಬದಲಿಗೆ ಅವಳು ಗಂಡನನ್ನು ಸೇರುವ ತನಕ ಅವನು ಖರ್ಚು ಮಾಡಬೇಕಾಗುತ್ತದೆ."

التصنيفات

Merits of Good Deeds