إعدادات العرض
ಯಾವಾಗ ಮೃತದೇಹವನ್ನು (ಜನಾಝಾವನ್ನು) ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ…
ಯಾವಾಗ ಮೃತದೇಹವನ್ನು (ಜನಾಝಾವನ್ನು) ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ (ಪುಣ್ಯಾತ್ಮವಾಗಿದ್ದರೆ) ಅದು ಹೇಳುತ್ತದೆ: 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ'
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವಾಗ ಮೃತದೇಹವನ್ನು (ಜನಾಝಾವನ್ನು) ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ (ಪುಣ್ಯಾತ್ಮವಾಗಿದ್ದರೆ) ಅದು ಹೇಳುತ್ತದೆ: 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ'. ಒಂದು ವೇಳೆ ಅದು ಸಜ್ಜನ ಆತ್ಮವಾಗಿರದಿದ್ದರೆ (ಪಾಪಿ ಆತ್ಮವಾಗಿದ್ದರೆ) ಅದು ಹೇಳುತ್ತದೆ: 'ಅಯ್ಯೋ ನನ್ನ ದುರ್ಗತಿಯೇ! ಇವರು ಇದನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?' ಅದರ ಧ್ವನಿಯನ್ನು ಮನುಷ್ಯನ ಹೊರತು ಪ್ರತಿಯೊಂದು ವಸ್ತುವೂ ಕೇಳುತ್ತದೆ. ಒಂದು ವೇಳೆ ಮನುಷ್ಯನು ಅದನ್ನು ಕೇಳಿದ್ದರೆ, ಅವನು ಮೂರ್ಛೆ ಹೋಗುತ್ತಿದ್ದನು."
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt සිංහල ئۇيغۇرچە Hausa Kurdî தமிழ் অসমীয়া Nederlands Kiswahili ગુજરાતી Magyar ქართული Română Português ไทย తెలుగు मराठी دری አማርኛ Malagasy Македонски ភាសាខ្មែរ Українська ਪੰਜਾਬੀ پښتو Yorùbá Wolof Moore Svenska മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾವಾಗ ಮೃತದೇಹವನ್ನು ಮಂಚದ ಮೇಲೆ ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ, ತನ್ನ ಮುಂದೆ ಕಾಣುವ ಅನುಗ್ರಹಗಳ ಕಾರಣದಿಂದ ಅದು 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ' ಎಂದು ಹೇಳುತ್ತದೆ. ಒಂದು ವೇಳೆ ಅದು ಸಜ್ಜನ ಆತ್ಮವಾಗಿರದಿದ್ದರೆ, ಅದು ಭಯಾನಕ ಸ್ವರದಲ್ಲಿ ಕೂಗುತ್ತದೆ: 'ಅಯ್ಯೋ ನನ್ನ ವಿನಾಶವೇ! ಇವರು ಇದನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?!' ಏಕೆಂದರೆ ಅದು ತನ್ನ ಮುಂದೆ ಶಿಕ್ಷೆಯನ್ನು ಕಾಣುತ್ತದೆ. ಅದರ ಧ್ವನಿಯನ್ನು ಮನುಷ್ಯನ ಹೊರತು ಪ್ರತಿಯೊಂದು ವಸ್ತುವೂ ಕೇಳುತ್ತದೆ. ಒಂದು ವೇಳೆ ಮನುಷ್ಯನು ಅದನ್ನು ಕೇಳಿದ್ದರೆ, ಅವನು ಕೇಳುವ ವಿಷಯದ ತೀವ್ರತೆಯಿಂದಾಗಿ ಮೂರ್ಛೆ ಹೋಗುತ್ತಿದ್ದನು.فوائد الحديث
ಸಜ್ಜನನಾದ ಮೃತ ವ್ಯಕ್ತಿಯು ಸಮಾಧಿ ಮಾಡುವ ಮೊದಲೇ ಶುಭ ಸೂಚನೆಗಳನ್ನು ಕಾಣುತ್ತಾನೆ, ಮತ್ತು ಸತ್ಯನಿಷೇಧಿಯು ಭಯಭೀತನಾಗುತ್ತಾನೆ ಮತ್ತು ಅದಕ್ಕೆ ವಿರುದ್ಧವಾದುದನ್ನು ಕಾಣುತ್ತಾನೆ.
ಕೆಲವು ಧ್ವನಿಗಳನ್ನು ಮನುಷ್ಯೇತರ ಜೀವಿಗಳು ಕೇಳುತ್ತವೆ. ಆದರೆ ಮನುಷ್ಯನಿಗೆ ಅವುಗಳನ್ನು ಕೇಳಲು ಸಾಧ್ಯವಾಗುವುದಿಲ್ಲ.
ಮೃತದೇಹವನ್ನು ಪುರುಷರು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದು ಸುನ್ನತ್ ಆಗಿದೆ. ಮಹಿಳೆಯರಿಗೆ ಇದು ಸುನ್ನತ್ ಇಲ್ಲ. ಏಕೆಂದರೆ ಮಹಿಳೆಯರು ಮೃತದೇಹವನ್ನು ಹಿಂಬಾಲಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ.
