إعدادات العرض
ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ…
ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ ಕೆಟ್ಟ ಕನಸನ್ನು ಕಂಡರೆ, ಅವರು ತಮ್ಮ ಎಡಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಏಕೆಂದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ
ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ ಕೆಟ್ಟ ಕನಸನ್ನು ಕಂಡರೆ, ಅವರು ತಮ್ಮ ಎಡಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಏಕೆಂದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."
الترجمة
العربية বাংলা English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල ئۇيغۇرچە Kurdî Kiswahili Português தமிழ் Nederlands অসমীয়া ગુજરાતી پښتو Hausa ไทย മലയാളം नेपाली ქართული Magyar తెలుగు Bosanski Македонски Svenskaالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಕೆಟ್ಟ ಕನಸುಗಳು, ಅಂದರೆ ಒಬ್ಬರು ಇಷ್ಟಪಡದ ಮತ್ತು ಅವರಿಗೆ ದುಃಖವನ್ನುಂಟುಮಾಡುವ ಕನಸುಗಳು ಶೈತಾನನಿಂದ ಬರುತ್ತವೆ. ಆದ್ದರಿಂದ, ಯಾರಾದರೂ ತಾವು ಇಷ್ಟಪಡದ ಕನಸನ್ನು ಕಂಡರೆ, ಅವರು ತಮ್ಮ ಎಡಭಾಗಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.فوائد الحديث
"ರುಅ್‌ಯಾ" (ಒಳ್ಳೆಯ ಕನಸು) ಮತ್ತು "ಹುಲುಮ್" (ಕೆಟ್ಟ ಕನಸು) ನಿದ್ರಿಸುತ್ತಿರುವ ವ್ಯಕ್ತಿಯು ತನ್ನ ನಿದ್ರೆಯಲ್ಲಿ ಕಾಣುವುದನ್ನು ವ್ಯಕ್ತಪಡಿಸುತ್ತವೆ. ಸಾಮಾನ್ಯವಾಗಿ ಒಳ್ಳೆಯ ಮತ್ತು ಸುಂದರವಾದ ಕನಸುಗಳನ್ನು ಉಲ್ಲೇಖಿಸಲು "ರುಅ್‌ಯಾ" ಎಂಬ ಪದವನ್ನು ಬಳಸಲಾಗುತ್ತದೆ. ಹಾಗೆಯೇ ಸಾಮಾನ್ಯವಾಗಿ ಕೆಟ್ಟ ಮತ್ತು ನೀಚ ಕನಸುಗಳನ್ನು ಉಲ್ಲೇಖಿಸಲು "ಹುಲುಮ್" ಎಂಬ ಪದವನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಇವುಗಳಲ್ಲಿ ಒಂದನ್ನು ಇನ್ನೊಂದರ ಸ್ಥಾನದಲ್ಲಿ ಬಳಸುವುದೂ ಇದೆ.
ಕನಸುಗಳ ವಿಧಗಳು: 1. ಒಳ್ಳೆಯ ಕನಸು. ಇದು ಮನುಷ್ಯನು ಕಾಣುವ ಅಥವಾ ಅವನಿಗೆ ತೋರಿಸಲಾಗುವ ಸತ್ಯ ಕನಸು ಮತ್ತು ಅಲ್ಲಾಹನ ಕಡೆಯ ಶುಭ ಸಮಾಚಾರವಾಗಿದೆ. 2. ಸ್ವತಹ ಮಾತು. ಇದು ಮನುಷ್ಯನು ಎಚ್ಚರವಾಗಿರುವಾಗ ಸ್ವತಹವಾಗಿ ಮಾತನಾಡುವುದು. 3. ಮನುಷ್ಯನನ್ನು ಉದ್ವೇಗಕ್ಕೆ ಒಳಪಡಿಸಲು ಶೈತಾನನು ಉಂಟುಮಾಡುವ ವ್ಯಥೆ, ಭಯ ಮತ್ತು ದಿಗಿಲುಗಳು.
ಉತ್ತಮ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಮೂರು ವಿಷಯಗಳನ್ನು ನೆರವೇರಿಸುವುದಾಗಿದೆ: ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸುವುದು. ಅದಕ್ಕಾಗಿ ಸಂತೋಷಪಡುವುದು ಮತ್ತು ಅದನ್ನು ಇತರರಿಗೆ ತಿಳಿಸುವುದು. ಆದರೆ ಪ್ರೀತಿಸುವವರಿಗೆ ಮಾತ್ರ ತಿಳಿಸುವುದು, ಪ್ರೀತಿಸದವರಿಗೆ ತಿಳಸದಿರುವುದು.
ಕೆಟ್ಟ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಐದು ಶಿಷ್ಟಾಚಾರಗಳನ್ನು ನೆರವೇರಿಸುವುದಾಗಿದೆ: ಅದರ ಕೆಡುಕಿನಿಂದ ಮತ್ತು ಶೈತಾನನ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವುದು. ನಿದ್ರೆಯಿಂದ ಎದ್ದಾಗ ಎಡಕ್ಕೆ ಮೂರು ಬಾರಿ ಲಘುವಾಗಿ ಉಗುಳುವುದು. ಅದನ್ನು ಯಾರಿಗೂ ತಿಳಿಸದಿರುವುದು. ಪುನಃ ನಿದ್ರೆಗೆ ಮರಳಲು ಬಯಸಿದರೆ, ಮೊದಲು ಯಾವ ಬದಿಯಲ್ಲಿ ಮಲಗಿದ್ದಿರೋ ಆ ಬದಿಯಿಂದ ಇನ್ನೊಂದು ಬದಿಗೆ ಸರಿದು ಮಲಗುವುದು. ಹೀಗೆ ಮಾಡಿದರೆ ಆ ಕನಸು ಹಾನಿ ಮಾಡುವುದಿಲ್ಲ.
التصنيفات
Manners of Visions