إعدادات العرض
1- ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ