ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು…

ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲು ಮತ್ತು ಅದನ್ನು ಇತರರಿಗೆ ತಿಳಿಸಲು ಅವರು ನಿರ್ದೇಶಿಸಿದರು. ಆದರೆ ಒಬ್ಬ ವ್ಯಕ್ತಿ ತಾನು ಇಷ್ಟಪಡದಿರುವ ಮತ್ತು ತನ್ನನ್ನು ಬೇಸರಗೊಳಿಸುವ ಕನಸನ್ನು ಕಂಡರೆ, ಅದು ಶೈತಾನನಿಂದಾಗಿದೆ. ಆದ್ದರಿಂದ, ಅವನು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.

فوائد الحديث

ಕನಸುಗಳ ವಿಧಗಳು: 1. ಒಳ್ಳೆಯ ಕನಸು. ಇದು ಮನುಷ್ಯನು ಕಾಣುವ ಅಥವಾ ಅವನಿಗೆ ತೋರಿಸಲಾಗುವ ಸತ್ಯ ಕನಸು ಮತ್ತು ಅಲ್ಲಾಹನ ಕಡೆಯ ಶುಭ ಸಮಾಚಾರವಾಗಿದೆ. 2. ಸ್ವತಹ ಮಾತು. ಇದು ಮನುಷ್ಯನು ಎಚ್ಚರವಾಗಿರುವಾಗ ಸ್ವತಹವಾಗಿ ಮಾತನಾಡುವುದು. 3. ಮನುಷ್ಯನನ್ನು ಉದ್ವೇಗಕ್ಕೆ ಒಳಪಡಿಸಲು ಶೈತಾನನು ಉಂಟುಮಾಡುವ ವ್ಯಥೆ, ಭಯ ಮತ್ತು ದಿಗಿಲುಗಳು.

ಉತ್ತಮ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಮೂರು ವಿಷಯಗಳನ್ನು ನೆರವೇರಿಸುವುದಾಗಿದೆ: ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸುವುದು. ಅದಕ್ಕಾಗಿ ಸಂತೋಷಪಡುವುದು ಮತ್ತು ಅದನ್ನು ಇತರರಿಗೆ ತಿಳಿಸುವುದು. ಆದರೆ ಪ್ರೀತಿಸುವವರಿಗೆ ಮಾತ್ರ ತಿಳಿಸುವುದು, ಪ್ರೀತಿಸದವರಿಗೆ ತಿಳಸದಿರುವುದು.

ಕೆಟ್ಟ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಐದು ಶಿಷ್ಟಾಚಾರಗಳನ್ನು ನೆರವೇರಿಸುವುದಾಗಿದೆ: ಅದರ ಕೆಡುಕಿನಿಂದ ಮತ್ತು ಶೈತಾನನ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವುದು. ನಿದ್ರೆಯಿಂದ ಎದ್ದಾಗ ಎಡಕ್ಕೆ ಮೂರು ಬಾರಿ ಲಘುವಾಗಿ ಉಗುಳುವುದು. ಅದನ್ನು ಯಾರಿಗೂ ತಿಳಿಸದಿರುವುದು. ಪುನಃ ನಿದ್ರೆಗೆ ಮರಳಲು ಬಯಸಿದರೆ, ಮೊದಲು ಯಾವ ಬದಿಯಲ್ಲಿ ಮಲಗಿದ್ದನೋ ಆ ಬದಿಯಿಂದ ಇನ್ನೊಂದು ಬದಿಗೆ ಸರಿದು ಮಲಗುವುದು. ಹೀಗೆ ಮಾಡಿದರೆ ಆ ಕನಸು ಹಾನಿ ಮಾಡುವುದಿಲ್ಲ.

ಇಬ್ನ್ ಹಜರ್ ಹೇಳಿದರು: "ಇದರಲ್ಲಿನ ಯುಕ್ತಿಯೇನೆಂದರೆ, ಅವನು ಒಳ್ಳೆಯ ಕನಸನ್ನು ಕಂಡು, ಅದನ್ನು ಅವನು ಇಷ್ಟಪಡದವರಿಗೆ ಹೇಳಿದರೆ, ಅವರು ದ್ವೇಷದಿಂದ ಅಥವಾ ಅಸೂಯೆಯಿಂದ, ಅವನು ಇಷ್ಟಪಡದ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಬಹುದು. ಆಗ ಅದು ಅವರು ವ್ಯಾಖ್ಯಾನಿಸಿದಂತೆ ಸಂಭವಿಸಬಹುದು ಅಥವಾ ಅವನು ಅದರ ದುಃಖ ಮತ್ತು ವ್ಯಥೆಯಿಂದ ಸ್ವತಃ ಏನಾದರೂ ಮಾಡಲು ಆತುರಪಡಬಹುದು. ಈ ಕಾರಣದಿಂದಲೇ, ಅದನ್ನು ಇಷ್ಟಪಡದವರಿಗೆ ಹೇಳಬಾರದೆಂದು ಆಜ್ಞಾಪಿಸಲಾಗಿದೆ."

ಅನುಗ್ರಹಗಳು ದೊರೆಯುವಾಗ ಮತ್ತು ಅನುಕೂಲತೆಗಳು ನವೀಕರಣವಾಗುವಾಗ ಅಲ್ಲಾಹನನ್ನು ಸ್ತುತಿಸಬೇಕು. ಏಕೆಂದರೆ ಅದು ಅವುಗಳು ಶಾಶ್ವತವಾಗಿ ನೆಲೆನಿಲ್ಲಲು ಕಾರಣವಾಗುತ್ತದೆ.

التصنيفات

Manners of Visions