ತಿಳಿದಿರಲಿ! ಖಂಡಿತವಾಗಿಯೂ ಈ ಪ್ರಪಂಚವು ಶಾಪಗ್ರಸ್ತವಾಗಿದೆ. ಅದರಲ್ಲಿರುವುದೂ ಶಾಪಗ್ರಸ್ತವಾಗಿದೆ. ಅಲ್ಲಾಹನ ಸ್ಮರಣೆ ಮತ್ತು…

ತಿಳಿದಿರಲಿ! ಖಂಡಿತವಾಗಿಯೂ ಈ ಪ್ರಪಂಚವು ಶಾಪಗ್ರಸ್ತವಾಗಿದೆ. ಅದರಲ್ಲಿರುವುದೂ ಶಾಪಗ್ರಸ್ತವಾಗಿದೆ. ಅಲ್ಲಾಹನ ಸ್ಮರಣೆ ಮತ್ತು ಅದಕ್ಕೆ ಸಂಬಂಧಿಸಿದವುಗಳು, ಆಲಿಮ್ (ವಿದ್ವಾಂಸ) ಅಥವಾ ಮುತಅಲ್ಲಿಮ್ (ವಿದ್ಯಾರ್ಥಿ) ಯನ್ನು ಹೊರತುಪಡಿಸಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ತಿಳಿದಿರಲಿ! ಖಂಡಿತವಾಗಿಯೂ ಈ ಪ್ರಪಂಚವು ಶಾಪಗ್ರಸ್ತವಾಗಿದೆ. ಅದರಲ್ಲಿರುವುದೂ ಶಾಪಗ್ರಸ್ತವಾಗಿದೆ. ಅಲ್ಲಾಹನ ಸ್ಮರಣೆ ಮತ್ತು ಅದಕ್ಕೆ ಸಂಬಂಧಿಸಿದವುಗಳು, ಆಲಿಮ್ (ವಿದ್ವಾಂಸ) ಅಥವಾ ಮುತಅಲ್ಲಿಮ್ (ವಿದ್ಯಾರ್ಥಿ) ಯನ್ನು ಹೊರತುಪಡಿಸಿ".

[حسن] [رواه الترمذي وابن ماجه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಈ ಪ್ರಪಂಚ ಮತ್ತು ಅದರಲ್ಲಿರುವುದು ಅಲ್ಲಾಹನಿಗೆ ಅಪ್ರಿಯವಾಗಿದೆ, ನಿಂದನೀಯವಾಗಿದೆ, ತೊರೆಯಲಾಗಿದೆ, ದೂರವಾಗಿದೆ. ಅದರಲ್ಲಿರುವುದೆಲ್ಲವೂ ತೊರೆಯಲಾಗಿದ್ದು, ಪ್ರಶಂಸಾರ್ಹವಲ್ಲ. ಏಕೆಂದರೆ ಅದು ಮತ್ತು ಅದರಲ್ಲಿರುವ ಎಲ್ಲವೂ ಅಲ್ಲಾಹನಿಂದ ವಿಮುಖಗೊಳಿಸುತ್ತವೆ ಮತ್ತು ಅವನಿಂದ ದೂರ ಮಾಡುತ್ತವೆ. ಆದರೆ, ಅಲ್ಲಾಹನ ಸ್ಮರಣೆ ಮತ್ತು ಅದಕ್ಕೆ ಹತ್ತಿರವಿರುವ ಮತ್ತು ಅದನ್ನು ಹೋಲುವ, ಅಲ್ಲಾಹು ಪ್ರೀತಿಸುವ ವಿಷಯಗಳು, ಅಥವಾ ಧಾರ್ಮಿಕ ಜ್ಞಾನವುಳ್ಳ, ಅದನ್ನು ಜನರಿಗೆ ಕಲಿಸುವ ವಿದ್ವಾಂಸ, ಅಥವಾ ಅದನ್ನು ಕಲಿಯುವ ವಿದ್ಯಾರ್ಥಿಯನ್ನು ಹೊರತುಪಡಿಸಿ.

فوائد الحديث

ಇಹಲೋಕವನ್ನು ಸಂಪೂರ್ಣವಾಗಿ ಶಪಿಸುವುದು ಅನುಮತಿಸಲಾಗಿಲ್ಲ. ಏಕೆಂದರೆ ಹಾಗೆ ಮಾಡುವುದನ್ನು ನಿಷೇಧಿಸುವ ಇತರ ಹದೀಸ್‌ಗಳು ಬಂದಿವೆ. ಆದರೆ, ಅದರಲ್ಲಿ ಯಾವುದು ಅಲ್ಲಾಹನಿಂದ ದೂರ ಮಾಡುತ್ತದೆಯೋ ಮತ್ತು ಅವನ ವಿಧೇಯತೆಯಿಂದ ವಿಮುಖಗೊಳಿಸುತ್ತದೆಯೋ ಅದನ್ನು ಶಪಿಸಲು ಅನುಮತಿಯಿದೆ.

ಈ ಪ್ರಪಂಚದಲ್ಲಿರುವ ಎಲ್ಲವೂ ಆಟ ಮತ್ತು ವಿನೋದವಾಗಿದೆ, ಅಲ್ಲಾಹನ ಸ್ಮರಣೆ ಮತ್ತು ಅದಕ್ಕೆ ಕಾರಣವಾಗುವ ಹಾಗೂ ಸಹಾಯಕವಾಗುವ ವಿಷಯಗಳನ್ನು ಹೊರತುಪಡಿಸಿ.

ಜ್ಞಾನ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ಇಬ್ನ್ ತೈಮಿಯ್ಯ ಹೇಳುತ್ತಾರೆ: "ಅದರಲ್ಲಿ (ಇಹಲೋಕದಲ್ಲಿ) ನಿಂದನೀಯವಾದುದು ಯಾವುದೆಂದರೆ, ಸ್ವತಃ ಹರಾಮ್ ಆಗಿರುವಂಥದ್ದು, ಅಥವಾ ಹಲಾಲ್ ಆಗಿದ್ದು ಅದನ್ನು ಅಧಿಕವಾಗಿ ಸಂಗ್ರಹಿಸಲು ಮತ್ತು ಹೆಮ್ಮೆ ಪಡಲು ಬಳಸಿಕೊಳ್ಳುವಂಥದ್ದು. ಅಂದರೆ ಯಾವುದು ಜಂಭ ತೋರಿಸುವ ಮತ್ತು ತರ್ಕ ಮಾಡುವ ಉದ್ದೇಶದಿಂದ ಸಂಪಾದಿಸಲಾಗುತ್ತದೆಯೋ ಅದು. ಬುದ್ಧಿವಂತರ ದೃಷ್ಟಿಯಲ್ಲಿ ಇವೆಲ್ಲವೂ ಅಪ್ರಿಯ ವಿಷಯಗಳಾಗಿವೆ."

التصنيفات

Condemning Love of the World