إعدادات العرض
ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು…
ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'
ಝೈದ್ ಬಿನ್ ಸಾಬಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'"
الترجمة
العربية বাংলা Bosanski English Español فارسی Bahasa Indonesia Tagalog Türkçe اردو 中文 हिन्दी Français Tiếng Việt සිංහල Hausa Português Kurdî Русский Kiswahili অসমীয়া ગુજરાતી Nederlands മലയാളം Română Magyar ქართული Oromoo Mooreالشرح
ಕೆಲವು ಸಹಾಬಾಗಳು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ ಜೊತೆ ಸಹರಿ ಸೇವಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝ್ ನಿರ್ವಹಿಸಲು ಹೊರಟರು. ಆಗ ಅನಸ್ ಝೈದ್ ಬಿನ್ ಸಾಬಿತ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರೊಡನೆ ಕೇಳಿದರು: "ಅದಾನ್ ಮತ್ತು ಸಹರಿಯ ನಡುವಿನ ಸಮಯದ ಪ್ರಮಾಣ ಎಷ್ಟು?" ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಸುಮಾರು ಐವತ್ತು ಮಧ್ಯಮ ಆಯತ್‌ಗಳನ್ನು ಪಠಿಸುವಷ್ಟು ಸಮಯ. ಅವು ಉದ್ದವೂ ಅಲ್ಲ ಮತ್ತು ಚಿಕ್ಕದೂ ಅಲ್ಲ. ಹಾಗೆಯೇ ಅದು ವೇಗದ ಪಠಣವೂ ಅಲ್ಲ, ನಿಧಾನದ ಪಠಣವೂ ಅಲ್ಲ."فوائد الحديث
ಸಹರಿಯನ್ನು ಫಜ್ರ್‌ಗೆ ಸ್ವಲ್ಪ ಮೊದಲಿನ ತನಕ ವಿಳಂಬಗೊಳಿಸುವುದು ಶ್ರೇಷ್ಠವಾಗಿದೆ. ಏಕೆಂದರೆ, ಅದು ವಿಳಂಬವಾದರೆ ದೇಹಕ್ಕೆ ಅದರ ಪ್ರಯೋಜನವು ದೊಡ್ಡದಾಗಿರುತ್ತದೆ ಮತ್ತು ದಿನದಲ್ಲಿ ಅದರ ಉಪಯುಕ್ತತೆಯು ಹೆಚ್ಚಾಗಿರುತ್ತದೆ.
ಸಹಾಬಾಗಳು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಯುವುದಕ್ಕಾಗಿ ಅವರ ಜೊತೆಗೂಡಲು ಉತ್ಸಾಹ ತೋರುತ್ತಿದ್ದರು.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರೊಂದಿಗೆ ಉತ್ತಮ ಸಹವಾಸವನ್ನು ಹೊಂದಿದ್ದರು. ಅವರು ಅವರ ಜೊತೆಗೆ ಕುಳಿತು ಊಟ ಮಾಡುತ್ತಿದ್ದರು.
ಫಜ್ರ್‌ನ ಉದಯವು ತಿನ್ನುವುದನ್ನು ನಿಲ್ಲಿಸುವ ಸಮಯವಾಗಿದೆ.
"ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು" ಎಂದರೆ, ಸಹರಿ ಮತ್ತು ಇಕಾಮತ್‌ನ ನಡುವೆ ಎಷ್ಟು ಸಮಯವಿತ್ತು ಎಂದರ್ಥ. ಏಕೆಂದರೆ ಅವರು ಇನ್ನೊಂದು ಹದೀಸಿನಲ್ಲಿ ಹೀಗೆ ಕೇಳುತ್ತಾರೆ: "ಅವರು ಸಹರಿ ಮುಗಿಸಿದ ನಂತರ ಮತ್ತು ಅವರು ನಮಾಝ್‌ಗೆ ಪ್ರವೇಶಿಸುವುದರ ನಡುವೆ ಎಷ್ಟು ಸಮಯವಿತ್ತು." ಹದೀಸ್‌ಗಳು ಪರಸ್ಪರ ಒಂದಕ್ಕೊಂದು ವಿವರಣೆಯಾಗಿವೆ.
ಮುಹಲ್ಲಬ್ ಹೇಳಿದರು: ಇದರಲ್ಲಿ ಸಮಯವನ್ನು ದೇಹದ ಕೆಲಸಗಳಿಂದ ಅಂದಾಜು ಮಾಡಲಾಗಿದೆ. ಅರಬರು ಸಮಯವನ್ನು ಕೆಲಸಗಳಿಂದ ಅಂದಾಜು ಮಾಡುತ್ತಿದ್ದರು. ಉದಾಹರಣೆಗೆ ಅವರು ಹೇಳುತ್ತಿದ್ದರು: "ಒಂದು ಕುರಿಯ ಹಾಲನ್ನು ಕರೆಯುವಷ್ಟು ಸಮಯ," ಮತ್ತು "ಒಂದು ಒಂಟೆಯನ್ನು ಕಡಿಯುವಷ್ಟು ಸಮಯ." ಆದ್ದರಿಂದ, ಆ ಸಮಯವು ಕುರ್‌ಆನ್ ಪಠಿಸುವ ಆರಾಧನೆಯ ಸಮಯವಾಗಿದೆ ಎಂದು ಸೂಚಿಸುವುದಕ್ಕಾಗಿ ಝೈದ್ ಬಿನ್ ಸಾಬಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅದನ್ನು ಕುರ್‌ಆನ್ ಪಠಣದಿಂದ ಅಂದಾಜು ಮಾಡಲು ಬಯಸಿದರು. ಒಂದು ವೇಳೆ ಅವರು ಕೆಲಸವಲ್ಲದ ಇನ್ನೊಂದರಿಂದ ಅಂದಾಜು ಮಾಡುತ್ತಿದ್ದರೆ ಅವರು ಉದಾಹರಣೆಗೆ ಹೀಗೆ ಹೇಳುತ್ತಿದ್ದರು: "ಒಂದು ಮೆಟ್ಟಿಲು ಹತ್ತುವಷ್ಟು ಸಮಯ," ಅಥವಾ "ತಾಸಿನ ಐದನೇ ಒಂದರ ಮೂರನೇ ಒಂದು ಭಾಗ."
ಇಬ್ನ್ ಅಬೀ ಜಮ್ರಾ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಯಾವುದು ಸೂಕ್ತವೆಂದು ನೋಡುತ್ತಿದ್ದರು ಮತ್ತು ಅದನ್ನು ಮಾಡುತ್ತಿದ್ದರು. ಏಕೆಂದರೆ ಅವರು ಸಹರಿ ಸೇವಿಸದಿರುತ್ತಿದ್ದರೆ ಅವರ ಅನುಯಾಯಿಗಳು ಅವರನ್ನು ಅನುಸರಿಸುತ್ತಿದ್ದರು ಮತ್ತು ಕೆಲವರಿಗೆ ಅದು ಕಷ್ಟವಾಗುತ್ತಿತ್ತು. ಇನ್ನು ಅವರು ಮಧ್ಯರಾತ್ರಿಯಲ್ಲಿ ಸಹರಿಯನ್ನು ಸೇವಿಸಿದರೆ ಗಾಢ ನಿದ್ರೆ ಮಾಡುವ ಪರಿಪಾಠವಿರುವ ಕೆಲವರಿಗೆ ಅದು ಕಷ್ಟವಾಗುತ್ತಿತ್ತು. ಇದು ಅವರಿಗೆ ಫಜ್ರ್ ನಮಾಝ್ ನಷ್ಟವಾಗಲು ಕಾರಣವಾಗುತ್ತಿತ್ತು ಅಥವಾ ಅವರು ರಾತ್ರಿ ಜಾಗರಣೆ ಮಾಡಬೇಕಾದ ಅಗತ್ಯ ಬರುತ್ತಿತ್ತು.
التصنيفات
Recommended Acts of Fasting