ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ…

ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ."

[صحيح] [متفق عليه]

الشرح

ಪ್ರವಾದಿಯವರು ಇಲ್ಲಿ ವಿವರಿಸುವುದೇನೆಂದರೆ, ಉಪವಾಸ ಕಡ್ಡಾಯವಾಗಿರಲಿ ಅಥವಾ ಐಚ್ಛಿಕವಾಗಿರಲಿ, ಉಪವಾಸದಲ್ಲಿದ್ದಾಗ ಯಾರಾದರು ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಬೇಕು ಮತ್ತು ಮುರಿಯಬಾರದು. ಏಕೆಂದರೆ ಅವನು ಉಪವಾಸವನ್ನು ಮುರಿಯಲು ಉದ್ದೇಶಿಸಿರಲಿಲ್ಲ. ಬದಲಿಗೆ, ಅದು ಅಲ್ಲಾಹು ಅವನಿಗೆ ಒದಗಿಸಿದ ಆಹಾರವಾಗಿದೆ ಮತ್ತು ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದವನು.

فوائد الحديث

ಯಾರಾದರೂ ಮರೆತು ತಿಂದರೆ ಅಥವಾ ಕುಡಿದರೆ ಅವನ ಉಪವಾಸವು ಸಿಂಧುವಾಗುತ್ತದೆ.

ಯಾರಾದರೂ ಮರೆತು ತಿಂದರೆ ಅಥವಾ ಕುಡಿದರೆ ಅವನಿಗೆ ಯಾವುದೇ ಪಾಪವಿಲ್ಲ. ಏಕೆಂದರೆ ಅವನು ಇದನ್ನು ತನ್ನ ಸ್ವಂತ ಇಚ್ಛೆಯಿಂದ ಮಾಡಿಲ್ಲ.

ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ದಯೆಯನ್ನು, ಅವನು ಅವರಿಗೆ ವಿಷಯಗಳನ್ನು ಹೇಗೆ ಸುಗಮಗೊಳಿಸುತ್ತಾನೆ ಮತ್ತು ಅವರ ಕಷ್ಟ ಮತ್ತು ತೊಂದರೆಗಳನ್ನು ಹೇಗೆ ನಿವಾರಿಸುತ್ತಾನೆ ಎಂಬುದನ್ನು ತಿಳಿಸಲಾಗಿದೆ.

ಉಪವಾಸದಲ್ಲಿರುವ ವ್ಯಕ್ತಿಯು ಉಪವಾಸವನ್ನು ಅಸಿಂಧುಗೊಳಿಸುವ ಯಾವುದೇ ವಿಷಯಗಳಿಂದ ತನ್ನ ಉಪವಾಸವನ್ನು ಮೂರು ಷರತ್ತುಗಳು ಅನ್ವಯವಾಗದ ಹೊರತು ಮುರಿಯುವುದಿಲ್ಲ: 1. ಅರಿವು: ಅವನು ಅರಿವಿಲ್ಲದೆ ಮಾಡಿದರೆ ಉಪವಾಸ ಮುರಿಯುವುದಿಲ್ಲ. 2. ನೆನಪು: ಅವನು ಮರೆತು ಮಾಡಿದರೆ ಅವನ ಉಪವಾಸವು ಸಿಂಧುವಾಗುತ್ತದೆ ಮತ್ತು ಅವನು ಅದನ್ನು ಪುನಃ ಆಚರಿಸುವ ಅಗತ್ಯವಿಲ್ಲ. 3. ಸ್ವಯಂ ಪ್ರೇರಣೆಯಿಂದ ಮಾಡುವುದು ಮತ್ತು ಇತರರ ಬಲವಂತಕ್ಕೊಳಗಾಗದಿರುವುದು: ಅಂದರೆ ಅವನು ಉಪವಾಸ ಮುರಿಯುವ ವಸ್ತುಗಳನ್ನು ಸ್ವಯಂಪ್ರೇರಿತವಾಗಿ ಸೇವಿಸುವುದು.

التصنيفات

Nullifiers of Fasting