ಅಶಾಂತಿಯ ಸಮಯದಲ್ಲಿ ಆರಾಧನೆ ಮಾಡುವುದು ಎಂದರೆ ನನ್ನ ಬಳಿಗೆ ಹಿಜ್ರ (ವಲಸೆ) ಮಾಡಿದಂತೆ

ಅಶಾಂತಿಯ ಸಮಯದಲ್ಲಿ ಆರಾಧನೆ ಮಾಡುವುದು ಎಂದರೆ ನನ್ನ ಬಳಿಗೆ ಹಿಜ್ರ (ವಲಸೆ) ಮಾಡಿದಂತೆ

ಮಅಕಿಲ್ ಇಬ್ನ್ ಯಸಾರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಶಾಂತಿಯ ಸಮಯದಲ್ಲಿ ಆರಾಧನೆ ಮಾಡುವುದು ಎಂದರೆ ನನ್ನ ಬಳಿಗೆ ಹಿಜ್ರ (ವಲಸೆ) ಮಾಡಿದಂತೆ."

[صحيح] [رواه مسلم]

الشرح

ಗಲಭೆ, ಕೊಲೆ, ಅಶಾಂತಿ, ಮತ್ತು ಅರಾಜಕತೆಯ ಸಮಯದಲ್ಲಿ ಆರಾಧನೆ ಮಾಡುತ್ತಿರಲು ಮತ್ತು ಅದಕ್ಕೆ ಅಂಟಿಕೊಳ್ಳಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಆ ಸಮಯದಲ್ಲಿ ಮಾಡುವ ಆರಾಧನೆಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹಿಜ್ರ (ವಲಸೆ) ಮಾಡಿದ್ದಕ್ಕೆ ಸಿಗುವ ಪ್ರತಿಫಲವು ದೊರೆಯುತ್ತದೆ. ಏಕೆಂದರೆ ಆ ಸಮಯದಲ್ಲಿ ಜನರು ಆರಾಧನೆಯ ಬಗ್ಗೆ ನಿರ್ಲಕ್ಷ್ಯರಾಗುತ್ತಾರೆ ಮತ್ತು ಇತರ ಕಾರ್ಯಗಳಲ್ಲಿ ಮಗ್ನರಾಗುತ್ತಾರೆ. ಕೆಲವು ಬೆರಳೆಣಿಕೆಯ ಜನರು ಮಾತ್ರ ತಮ್ಮನ್ನು ಆರಾಧನೆಗಳಿಗೆ ಅರ್ಪಿಸಿಕೊಳ್ಳುತ್ತಾರೆ.

فوائد الحديث

ಪರೀಕ್ಷೆಗಳ ಸಮಯದಲ್ಲಿ, ಪರೀಕ್ಷೆಗಳಿಂದ ರಕ್ಷಣೆ ಪಡೆಯಲು ಮತ್ತು ಅಶಾಂತಿಯಿಂದ ಬಚಾವಾಗಲು ಅಲ್ಲಾಹನ ಆರಾಧನೆಯಲ್ಲಿ ತೊಡಗಿಕೊಳ್ಳಬೇಕೆಂದು ಮತ್ತು ಅವನ ಕಡೆಗೆ ತಿರುಗಬೇಕೆಂದು ಪ್ರೋತ್ಸಾಹಿಸಲಾಗಿದೆ.

ಪರೀಕ್ಷೆಗಳ ಮತ್ತು ನಿರ್ಲಕ್ಷ್ಯದ ಸಮಯದಲ್ಲಿ ಆರಾಧನೆ ಮಾಡುವ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ಮುಸಲ್ಮಾನನು ಪರೀಕ್ಷೆಗಳು ಮತ್ತು ನಿರ್ಲಕ್ಷ್ಯದ ಸ್ಥಳಗಳಿಂದ ದೂರವಿರಬೇಕು.

التصنيفات

Merits of Good Deeds