ಯಾರು ತನ್ನ ಸಹೋದರನಿಗೆ ಅವನ ಗೌರವಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೇ ವಿಷಯದಲ್ಲಿ ಅನ್ಯಾಯ ಮಾಡಿದ್ದಾನೋ, ಅವನು ಇಂದೇ, ಅದನ್ನು…

ಯಾರು ತನ್ನ ಸಹೋದರನಿಗೆ ಅವನ ಗೌರವಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೇ ವಿಷಯದಲ್ಲಿ ಅನ್ಯಾಯ ಮಾಡಿದ್ದಾನೋ, ಅವನು ಇಂದೇ, ಅದನ್ನು ಅವನಿಂದ ಪರಿಹರಿಸಿಕೊಳ್ಳಲಿ. (ಅಂದರೆ) ಯಾವ ದಿನ ದೀನಾರ್ (ಚಿನ್ನದ ನಾಣ್ಯ) ಮತ್ತು ದಿರ್ಹಮ್ (ಬೆಳ್ಳಿಯ ನಾಣ್ಯ) ಗಳು ಇರುವುದಿಲ್ಲವೋ ಆ ದಿನ ಬರುವ ಮೊದಲು

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ತನ್ನ ಸಹೋದರನಿಗೆ ಅವನ ಗೌರವಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೇ ವಿಷಯದಲ್ಲಿ ಅನ್ಯಾಯ ಮಾಡಿದ್ದಾನೋ, ಅವನು ಇಂದೇ, ಅದನ್ನು ಅವನಿಂದ ಪರಿಹರಿಸಿಕೊಳ್ಳಲಿ. (ಅಂದರೆ) ಯಾವ ದಿನ ದೀನಾರ್ (ಚಿನ್ನದ ನಾಣ್ಯ) ಮತ್ತು ದಿರ್ಹಮ್ (ಬೆಳ್ಳಿಯ ನಾಣ್ಯ) ಗಳು ಇರುವುದಿಲ್ಲವೋ ಆ ದಿನ ಬರುವ ಮೊದಲು. (ಏಕೆಂದರೆ, ಆ ದಿನ) ಒಂದು ವೇಳೆ ಅವನ ಬಳಿ ಸತ್ಕರ್ಮಗಳಿದ್ದರೆ, ಅವನ ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅವನಿಂದ ತೆಗೆದುಕೊಳ್ಳಲಾಗುವುದು. ಇನ್ನು ಒಂದು ವೇಳೆ ಅವನ ಬಳಿ ಸತ್ಕರ್ಮಗಳು ಇಲ್ಲದಿದ್ದರೆ, ಅವನ ಸಂಗಡಿಗನ (ಅನ್ಯಾಯಕ್ಕೊಳಗಾದವನ) ಪಾಪಗಳಿಂದ (ಕೆಲವನ್ನು) ತೆಗೆದು ಅವನ ಮೇಲೆ ಹೇರಲಾಗುವುದು".

[صحيح] [رواه البخاري]

الشرح

ಗೌರವ, ಸಂಪತ್ತು ಅಥವಾ ರಕ್ತದ ವಿಷಯದಲ್ಲಿ ತನ್ನ ಮುಸ್ಲಿಂ ಸಹೋದರನಿಗೆ ಅನ್ಯಾಯ ಮಾಡಿದ ಪ್ರತಿಯೊಬ್ಬನೂ, ತಾನು ಅನ್ಯಾಯ ಮಾಡಿದವನಿಂದ, ಈ ಪ್ರಪಂಚದಲ್ಲಿರುವಾಗಲೇ, ಪುನರುತ್ಥಾನ ದಿನ ಬರುವ ಮೊದಲು ಕ್ಷಮೆಯನ್ನು ಕೇಳಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದರು. ಏಕೆಂದರೆ, ಆ ದಿನ ಅನ್ಯಾಯ ಮಾಡಿದವನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಚಿನ್ನದ ದೀನಾರ್ ಅಥವಾ ಬೆಳ್ಳಿಯ ದಿರ್ಹಮ್ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ಆ ದಿನ ಪ್ರತಿಫಲವು ಪುಣ್ಯಗಳ ಮತ್ತು ಪಾಪಗಳ ಮೂಲಕವಿರುತ್ತದೆ. ಅಂದರೆ, ಅನ್ಯಾಯಕ್ಕೊಳಗಾದವನು ತನಗೆ ಆದ ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅನ್ಯಾಯಗಾರನ ಪುಣ್ಯಗಳಿಂದ ಕೆಲವನ್ನು ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಅನ್ಯಾಯಗಾರನ ಬಳಿ ಪುಣ್ಯಗಳಿಲ್ಲದಿದ್ದರೆ, ಅನ್ಯಾಯಕ್ಕೊಳಗಾದವನ ಪಾಪಗಳನ್ನು ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅನ್ಯಾಯಗಾರನ ಮೇಲೆ ಹಾಕಲಾಗುತ್ತದೆ.

فوائد الحديث

ಅನ್ಯಾಯ ಮತ್ತು ದೌರ್ಜನ್ಯದಿಂದ ದೂರವಿರಲು ಆಸಕ್ತಿ ವಹಿಸಬೇಕೆಂದು ತಿಳಿಸಲಾಗಿದೆ.

ಇತರರಿಗೆ ಸಲ್ಲಬೇಕಾದ ಹಕ್ಕುಗಳಿಂದ ತನ್ನ ಜವಾಬ್ದಾರಿಯನ್ನು ಮುಕ್ತಗೊಳಿಸುವುದಕ್ಕಾಗಿ ತ್ವರೆ ಮಾಡಲು ಪ್ರೋತ್ಸಾಹಿಸಲಾಗಿದೆ.

ಜನರಿಗೆ ಅನ್ಯಾಯ ಮಾಡುವುದು ಮತ್ತು ಅವರಿಗೆ ನೋವು ನೀಡುವುದು ಸತ್ಕರ್ಮಗಳನ್ನು ನಿರರ್ಥಕಗೊಳಿಸುತ್ತದೆ ಮತ್ತು ಅವುಗಳ ಫಲವನ್ನು ನಾಶಮಾಡುತ್ತದೆ.

ಮನುಷ್ಯರ ಹಕ್ಕುಗಳನ್ನು ಅವುಗಳ ಹಕ್ಕುದಾರರಿಗೆ ಹಿಂತಿರುಗಿಸದೆ ಅಲ್ಲಾಹು ಕ್ಷಮಿಸುವುದಿಲ್ಲವೆಂದು ತಿಳಿಸಲಾಗಿದೆ.

ದೀನಾರ್ ಮತ್ತು ದಿರ್ಹಮ್ ಈ ಪ್ರಪಂಚದಲ್ಲಿ ಪ್ರಯೋಜನಗಳನ್ನು ಪಡೆಯುವ ಸಾಧನಗಳಾಗಿವೆ. ಆದರೆ, ಪುನರುತ್ಥಾನ ದಿನದಂದು (ವಿನಿಮಯವು) ಪುಣ್ಯಗಳು ಮತ್ತು ಪಾಪಗಳ ಮೂಲಕವಿರುತ್ತದೆ.

ಕೆಲವು ವಿದ್ವಾಂಸರು 'ಇರ್ದ್' (ಮಾನ-ಗೌರವ) ದ ವಿಷಯದಲ್ಲಿ ಹೇಳುತ್ತಾರೆ: "ಒಂದು ವೇಳೆ ಅನ್ಯಾಯಕ್ಕೊಳಗಾದವನಿಗೆ (ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು) ತಿಳಿದಿಲ್ಲದಿದ್ದರೆ, ಅವನಿಗೆ ತಿಳಿಸುವ ಅಗತ್ಯವಿಲ್ಲ. ಉದಾಹರಣೆಗೆ, ಒಬ್ಬನು ಅವನನ್ನು ಕೆಲವು ಸಭೆಗಳಲ್ಲಿ ಬೈದು ನಂತರ ಪಶ್ಚಾತ್ತಾಪಪಟ್ಟರೆ, ಅವನಿಗೆ ಅದನ್ನು ತಿಳಿಸುವ ಅಗತ್ಯವಿಲ್ಲ. ಬದಲಿಗೆ, ಅವನು ಅವನಿಗಾಗಿ (ಅಲ್ಲಾಹನಲ್ಲಿ) ಕ್ಷಮೆ ಯಾಚಿಸಬೇಕು, ಅವನಿಗಾಗಿ ಪ್ರಾರ್ಥಿಸಬೇಕು, ಮತ್ತು ಯಾವ ಸಭೆಗಳಲ್ಲಿ ಅವನನ್ನು ಬೈಯುತ್ತಿದ್ದನೋ ಅದೇ ಸಭೆಗಳಲ್ಲಿ ಅವನನ್ನು ಒಳ್ಳೆಯದರಿಂದ ಹೊಗಳಬೇಕು. ಈ ಮೂಲಕ ಅವನು ಅದರಿಂದ (ಆ ಪಾಪದಿಂದ) ಮುಕ್ತನಾಗುತ್ತಾನೆ."

التصنيفات

The Hereafter Life