ಯಾರು ತಮ್ಮ ಪತ್ನಿಯ ಗುದದ್ವಾರದಲ್ಲಿ ಸಂಭೋಗಿಸುತ್ತಾರೋ ಅವರು ಶಾಪಗ್ರಸ್ತರಾಗಿದ್ದಾರೆ

ಯಾರು ತಮ್ಮ ಪತ್ನಿಯ ಗುದದ್ವಾರದಲ್ಲಿ ಸಂಭೋಗಿಸುತ್ತಾರೋ ಅವರು ಶಾಪಗ್ರಸ್ತರಾಗಿದ್ದಾರೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ತಮ್ಮ ಪತ್ನಿಯ ಗುದದ್ವಾರದಲ್ಲಿ ಸಂಭೋಗಿಸುತ್ತಾರೋ ಅವರು ಶಾಪಗ್ರಸ್ತರಾಗಿದ್ದಾರೆ."

[حسن] [رواه أبو داود والنسائي في الكبرى وأحمد]

الشرح

ಗಂಡ ತನ್ನ ಹೆಂಡತಿಯ ಗುದದ್ವಾರದಲ್ಲಿ ಸಂಭೋಗಿಸುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡಿದ್ದಾರೆ ಮತ್ತು ಅವನು ಅಲ್ಲಾಹನ ದಯೆಯಿಂದ ಹೊರಹಾಕಲ್ಪಟ್ಟ ಶಾಪಗ್ರಸ್ತನಾಗಿದ್ದಾನೆ ಎಂದಿದ್ದಾರೆ. ಗುದದ್ವಾರದಲ್ಲಿ ಸಂಭೋಗಿಸುವುದು ಮಹಾಪಾಪವಾಗಿದೆ.

فوائد الحديث

ಮಹಿಳೆಯರನ್ನು ಗುದದ್ವಾರದಲ್ಲಿ ಸಂಭೋಗಿಸುವುದನ್ನು ನಿಷೇಧಿಸಲಾಗಿದೆ.

ಗುದದ್ವಾರ ಸಂಭೋಗವನ್ನು ಹೊರತುಪಡಿಸಿ ಪತ್ನಿಯ ದೇಹದ ಇತರ ಭಾಗಗಳಿಂದ ಆನಂದ ಪಡೆಯುವುದು ಅನುಮತಿಸಲಾಗಿದೆ.

ಮುಸ್ಲಿಂ ಪುರುಷನು ಅಲ್ಲಾಹು ಆದೇಶಿಸಿದಂತೆ ಮಹಿಳೆಯರನ್ನು ಅವರ ಯೋನಿಯಿಂದ ಸಂಭೋಗಿಸಬೇಕು. ಗುದದ್ವಾರದಿಂದ ಸಂಭೋಗಿಸುವುದು ಫಿತ್ರ (ಸಹಜ ಪ್ರವೃತ್ತಿ) ವನ್ನು ಹಾಳು ಮಾಡುತ್ತದೆ, ಸಂತಾನವನ್ನು ವ್ಯರ್ಥಗೊಳಿಸುತ್ತದೆ, ಆರೋಗ್ಯಕರ ಪ್ರಕೃತಿಗೆ ವಿರುದ್ಧವಾಗಿದೆ, ಮತ್ತು ಪತಿಪತ್ನಿ ಇಬ್ಬರಿಗೂ ಗಂಭೀರ ಹಾನಿಗಳನ್ನು ಉಂಟುಮಾಡುತ್ತದೆ.

التصنيفات

Manners of Marriage