ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು…

ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ

ಮತರ್ ಬಿನ್ ಉಕಾಮಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ."

[Sahih/Authentic.] [At-Tirmidhi]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಒಬ್ಬ ವ್ಯಕ್ತಿ ಇಂತಿಂತಹ ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಮತ್ತು ನಿರ್ಣಯಿಸಿದರೆ ಆತ ಆ ಊರಿನಲ್ಲಿ ಇಲ್ಲದಿದ್ದರೂ, ಆ ಊರಿಗೆ ಹೋಗುವ ಅಗತ್ಯವನ್ನು ಉಂಟು ಮಾಡಿ ಅವನ ಆತ್ಮವನ್ನು ಆ ಊರಿನಲ್ಲಿ ವಶಪಡಿಸುತ್ತಾನೆ.

فوائد الحديث

ಈ ಹದೀಸ್ ಸರ್ವಶಕ್ತನಾದ ಅಲ್ಲಾಹನ ಈ ವಚನವನ್ನು ದೃಢೀಕರಿಸುತ್ತದೆ: "ಮತ್ತು ತಾನು ಯಾವ ಊರಿನಲ್ಲಿ ಸಾಯುತ್ತೇನೆ ಎಂದು ಯಾವುದೇ ವ್ಯಕ್ತಿಗೂ ತಿಳಿದಿಲ್ಲ."