إعدادات العرض
ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ…
ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." [ಆಲು ಇಮ್ರಾನ್:7] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ."
الترجمة
العربية English မြန်မာ Svenska Čeština ગુજરાતી አማርኛ Yorùbá Nederlands اردو Español Bahasa Indonesia ئۇيغۇرچە বাংলা Türkçe Bosanski සිංහල हिन्दी Tiếng Việt Hausa മലയാളം తెలుగు Kiswahili ไทย پښتو অসমীয়া Shqip دری Ελληνικά Български Fulfulde Italiano Кыргызча Lietuvių Malagasy Română Kinyarwanda Српски тоҷикӣ O‘zbek नेपाली Kurdî Wolof Moore Français Oromoo Українська Tagalog Azərbaycan தமிழ் bm Deutsch ქართული Português Македонски Magyar Русский 中文 فارسیالشرح
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." ಈ ವಚನದಲ್ಲಿ ಸರ್ವಶಕ್ತನಾದ ಅಲ್ಲಾಹು ತಿಳಿಸುವುದೇನೆಂದರೆ, ತನ್ನ ಪ್ರವಾದಿಗೆ ಕುರ್‌ಆನನ್ನು ಅವತೀರ್ಣಗೊಳಿಸಿದವನು ಅವನೇ ಆಗಿದ್ದಾನೆ. ಅದರಲ್ಲಿ ಸ್ಪಷ್ಟವಾದ ಅರ್ಥವನ್ನು ಹೊಂದಿರುವ ವಚನಗಳಿವೆ. ಆ ವಚನಗಳಲ್ಲಿರುವ ನಿಯಮಗಳು ಸ್ಪಷ್ಟವಾಗಿದ್ದು ಯಾವುದೇ ಗೊಂದಲಗಳಿಲ್ಲ. ಅವು ಗ್ರಂಥದ ಮೂಲ ಪರಾಮರ್ಶೆಯಾಗಿವೆ. ಭಿನ್ನಮತ ಉಂಟಾಗುವಾಗ ಆ ವಚನಗಳನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ, ಅದರಲ್ಲಿ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವ ಕೆಲವು ವಚನಗಳಿವೆ. ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಅವು ಗೊಂದಲಕಾರಿಯಾಗಿವೆ. ಅಥವಾ ಅವು ಇತರ ವಚನಗಳಿಗೆ ವಿರುದ್ಧವಾಗಿದೆಯೆಂದು ಅವರು ಭಾವಿಸುತ್ತಾರೆ. ನಂತರ ಈ ವಚನಗಳೊಂದಿಗೆ ಜನರು ಹೇಗೆ ವರ್ತಿಸುತ್ತಾರೆಂದು ವಿವರಿಸುತ್ತಾ ಅಲ್ಲಾಹು ಹೇಳುತ್ತಾನೆ: ಸತ್ಯದಿಂದ ದೂರ ಸರಿಯುವ ಮನಸ್ಥಿತಿಯಿರುವವರು ಸ್ಪಷ್ಟ ಅರ್ಥವನ್ನು ಹೊಂದಿರುವ ವಚನಗಳನ್ನು ಬಿಟ್ಟು ಹೋಲಿಕೆಯಿರುವ ಮತ್ತು ಹಲವು ಅರ್ಥಗಳ ಸಾಧ್ಯತೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಅವರು ಅದರ ಮೂಲಕ ಸಂಶಯಗಳನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸಲು ಬಯಸುತ್ತಾರೆ. ಅವರು ತಮ್ಮ ಮನಸ್ಸಿಗೆ ಹೊಂದಿಕೊಳ್ಳುವಂತೆ ಅವುಗಳನ್ನು ವ್ಯಾಖ್ಯಾನಿಸಲು ಬಯಸುತ್ತಾರೆ. ಆದರೆ ಜ್ಞಾನದಲ್ಲಿ ಸದೃಢರಾಗಿರುವವರು ಈ ಹೋಲಿಕೆಗಳನ್ನು ಅರ್ಥ ಮಾಡಿಕೊಂಡು, ಸ್ಪಷ್ಟ ಅರ್ಥವಿರುವ ವಚನಗಳನ್ನು ಬಳಸಿ ಇವುಗಳ ಸರಿಯಾದ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಅವರು ಅದರಲ್ಲಿ ಮತ್ತು ಅವೆಲ್ಲವೂ ಅಲ್ಲಾಹನಿಂದ ಅವತೀರ್ಣವಾದ ವಚನಗಳೆಂದು ನಂಬಿಕೆಯಿಡುತ್ತಾರೆ. ಏಕೆಂದರೆ, ಅಲ್ಲಾಹನ ವಚನಗಳಲ್ಲಿ ಯಾವುದೇ ಗೊಂದಲವಿರಲು ಸಾಧ್ಯವಿಲ್ಲ, ಮತ್ತು ಅವು ವಿರೋಧಾಸ್ಪದವಾಗಿರಲೂ ಸಾಧ್ಯವಿಲ್ಲ. ಆದರೆ ಆರೋಗ್ಯವಂತ ಬುದ್ಧಿಯನ್ನು ಹೊಂದಿರುವವರ ಹೊರತು ಇನ್ನಾರೂ ಇದರಿಂದ ಉಪದೇಶ ಪಡೆಯುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಹೇಳುವುದೇನೆಂದರೆ, ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ನೀನೇನಾದರೂ ನೋಡಿದರೆ, ಅಲ್ಲಾಹು ಈ ವಚನದಲ್ಲಿ ಹೇಳಿದ "ಹೃದಯದಲ್ಲಿ ವಕ್ರತೆ ಇರುವವರು" ಅವರೇ ಆಗಿದ್ದಾರೆ ಎಂದು ತಿಳಿದುಕೋ. ಅವರ ಬಗ್ಗೆ ಎಚ್ಚರವಾಗಿರು ಮತ್ತು ಅವರ ಮಾತುಗಳಿಗೆ ಕಿವಿಗೊಡಬೇಡ.فوائد الحديث
ಪವಿತ್ರ ಕುರ್‌ಆನಿನ ಸ್ಪಷ್ಟ ವಚನಗಳು ಎಂದರೆ ಸ್ಪಷ್ಟವಾದ ಅರ್ಥವನ್ನು ಹೊಂದಿರುವ ವಚನಗಳು. ಹೋಲಿಕೆ ಇರುವ ವಚನಗಳು ಎಂದರೆ ಒಂದಕ್ಕಿಂತ ಹೆಚ್ಚು ಅರ್ಥದ ಸಂಭಾವ್ಯತೆ ಇರುವ ಮತ್ತು ಸೂಕ್ಷ್ಮ ಪರಿಶೋಧನೆ ಮತ್ತು ಪಾಂಡಿತ್ಯದ ಅಗತ್ಯವಿರುವ ವಚನಗಳು.
ವಕ್ರ ಮತ್ತು ನೂತನವಾದದ ಜನರೊಂದಿಗೆ ಹಾಗೂ ಜನರಲ್ಲಿ ಸಂಶಯಗಳನ್ನು ಹುಟ್ಟಿಸಿ ದಾರಿ ತಪ್ಪಿಸಲು ಬಯಸುವವರೊಂದಿಗೆ ಸೇರಬಾರದೆಂದು ಇದರಲ್ಲಿ ಎಚ್ಚರಿಕೆಯಿದೆ.
ವಚನದ ಕೊನೆಯಲ್ಲಿ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." ಇದು ವಕ್ರ ಜನರ ಛೀಮಾರಿ ಮತ್ತು ಬುದ್ಧಿವಂತರ ಪ್ರಶಂಸೆಯಾಗಿದೆ. ಅಂದರೆ, ಆಲೋಚಿಸದ, ಉಪದೇಶವನ್ನು ಸ್ವೀಕರಿಸದ ಮತ್ತು ಮೋಹಗಳನ್ನು ಹಿಂಬಾಲಿಸುವ ಜನರು ಬುದ್ಧಿವಂತರಲ್ಲ.
ಹೋಲಿಕೆಯಿರುವ ವಚನಗಳನ್ನು ಹಿಂಬಾಲಿಸುವುದು ಹೃದಯದ ವಕ್ರತೆಗೆ ಕಾರಣವಾಗುತ್ತದೆ.
ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಹೋಲಿಕೆಯಿರುವ ವಚನಗಳನ್ನು ಅರ್ಥವು ಸ್ಪಷ್ಟವಾಗಿರುವ ಸ್ಪಷ್ಟ ವಚನಗಳೆಡೆಗೆ ಮರಳಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
ಜನರನ್ನು ಪರೀಕ್ಷಿಸಿ ಸತ್ಯವಿಶ್ವಾಸಿಗಳನ್ನು ಮತ್ತು ದುರ್ಮಾರ್ಗಿಗಳನ್ನು ಬೇರ್ಪಡಿಸಿ ತಿಳಿಯಲು ಸರ್ವಶಕ್ತನಾದ ಅಲ್ಲಾಹು ಕುರ್‌ಆನಿನ ಕೆಲವು ವಚನಗಳನ್ನು ಸ್ಪಷ್ಟ ವಚನಗಳಾಗಿ ಮತ್ತು ಇತರ ಕೆಲವು ವಚನಗಳನ್ನು ಹೋಲಿಕೆಯುಳ್ಳದ್ದಾಗಿ ಮಾಡಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
ಕುರ್‌ಆನಿನಲ್ಲಿ ಹೋಲಿಕೆಯಿರುವ ವಚನಗಳಿರುವುದರಿಂದ, ಇತರ ಜನರ ಮೇಲೆ ವಿದ್ವಾಂಸರಿಗಿರುವ ಶ್ರೇಷ್ಠತೆಯು ಬಹಿರಂಗವಾಗುತ್ತದೆ, ಬುದ್ಧಿಯ ಪರಿಮಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬುದ್ಧಿಯ ಪರಿಮಿತಿಯನ್ನು ಅರ್ಥ ಮಾಡಿಕೊಂಡು ಸೃಷ್ಟಿಕರ್ತನಾದ ಅಲ್ಲಾಹನಿಗೆ ಶರಣಾಗಲು ಸಾಧ್ಯವಾಗುತ್ತದೆ.
ಜ್ಞಾನದಲ್ಲಿ ಸದೃಢರಾದವರ ಶ್ರೇಷ್ಠತೆ ಮತ್ತು ಸದೃಢರಾಗಬೇಕಾದ ಅನಿವಾರ್ಯತೆಯನ್ನು ಈ ಹದೀಸ್ ತಿಳಿಸುತ್ತದೆ.
"ವಮಾ ಯಅ್‌ಲಮು ತಅ್‌ವೀಲಹೂ ಇಲ್ಲಲ್ಲಾಹು ವರ್‍ರಾಸಿಖೂನ ಫಿಲ್ ಇಲ್ಮ್"—ಇದರಲ್ಲಿ ಅಲ್ಲಾಹು ಎಂಬಲ್ಲಿ ಪಠಣವನ್ನು ನಿಲ್ಲಿಸುವ ವಿಷಯದಲ್ಲಿ ವ್ಯಾಖ್ಯಾನಕಾರರಿಗೆ ಎರಡು ಅಭಿಪ್ರಾಯಗಳಿವೆ: "ಅಲ್ಲಾಹು" ಎಂಬಲ್ಲಿ ಪಠಣವನ್ನು ನಿಲ್ಲಿಸಿದರೆ ವಚನದಲ್ಲಿರುವ "ತಅ್‌ವೀಲ್" ಎಂಬ ಪದಕ್ಕೆ ಒಂದು ವಸ್ತುವಿನ ತಿರುಳಿನ ಬಗ್ಗೆಯಿರುವ ಜ್ಞಾನ ಎಂಬ ಅರ್ಥ ಬರುತ್ತದೆ. ಈ ಜ್ಞಾನವು ಅಲ್ಲಾಹನಿಗೆ ಮಾತ್ರವಿದ್ದು ಅದನ್ನು ತಿಳಿಯುವ ಯಾವುದೇ ಮಾರ್ಗವು ಮನುಷ್ಯರಿಗೆ ಲಭ್ಯವಿಲ್ಲ. ಉದಾಹರಣೆಗೆ, ಆತ್ಮ ಪ್ರಳಯ ಮುಂತಾದವುಗಳ ಜ್ಞಾನ ಇತ್ಯಾದಿ. ಜ್ಞಾನದಲ್ಲಿ ಸದೃಢರಾಗಿರುವವರು ಅದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಅದರ ನಿಜಸ್ಥಿತಿಯನ್ನು ಅಲ್ಲಾಹನಿಗೆ ಮರಳಿಸಿ ಅಲ್ಲಾಹನಿಗೆ ಶರಣಾಗುತ್ತಾರೆ ಮತ್ತು ಸುರಕ್ಷಿತ ನಿಲುವನ್ನು ಹೊಂದುತ್ತಾರೆ. "ಅಲ್ಲಾಹು" ಎಂಬಲ್ಲಿ ಪಠಣವನ್ನು ನಿಲ್ಲಿಸದೆ ಮುಂದುವರಿಸಿದರೆ ವಚನದಲ್ಲಿರುವ "ತಅ್‌ವೀಲ್" ಎಂಬ ಪದಕ್ಕೆ ವ್ಯಾಖ್ಯಾನ ಮತ್ತು ವಿವರಣೆ ಎಂಬ ಅರ್ಥ ಬರುತ್ತದೆ. ಅಂದರೆ, ಅವುಗಳ ವ್ಯಾಖ್ಯಾನ ಮತ್ತು ವಿವರಣೆಯನ್ನು ಅಲ್ಲಾಹು ತಿಳಿದಿದ್ದಾನೆ, ಹಾಗೆಯೇ ಜ್ಞಾನದಲ್ಲಿ ಸದೃಢರಾಗಿರುವವರೂ ತಿಳಿದಿದ್ದಾರೆ. ಅವರು ಅವುಗಳಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಅವುಗಳನ್ನು ಸ್ಪಷ್ಟ ಅರ್ಥಗಳಿರುವ ವಚನಗಳಿಗೆ ಮರಳಿಸುತ್ತಾರೆ.