إعدادات العرض
ಯಾರು ನಮ್ಮ (ರೀತಿಯಲ್ಲಿ) ನಮಾಝನ್ನು ನಿರ್ವಹಿಸುತ್ತಾನೋ, ನಮ್ಮ ಕಿಬ್ಲಾವನ್ನು (ಕಾಬಾವನ್ನು) ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ…
ಯಾರು ನಮ್ಮ (ರೀತಿಯಲ್ಲಿ) ನಮಾಝನ್ನು ನಿರ್ವಹಿಸುತ್ತಾನೋ, ನಮ್ಮ ಕಿಬ್ಲಾವನ್ನು (ಕಾಬಾವನ್ನು) ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು ತಿನ್ನುತ್ತಾನೋ, ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ರಕ್ಷಣೆ ಮತ್ತು ಅವನ ರಸೂಲರ ರಕ್ಷಣೆ ಇದೆ. ಆದ್ದರಿಂದ ನೀವು ಅಲ್ಲಾಹನ ರಕ್ಷಣೆಯ ವಿಷಯದಲ್ಲಿ ಅವನಿಗೆ ದ್ರೋಹ ಮಾಡಬೇಡಿ
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ನಮ್ಮ (ರೀತಿಯಲ್ಲಿ) ನಮಾಝನ್ನು ನಿರ್ವಹಿಸುತ್ತಾನೋ, ನಮ್ಮ ಕಿಬ್ಲಾವನ್ನು (ಕಾಬಾವನ್ನು) ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು ತಿನ್ನುತ್ತಾನೋ, ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ರಕ್ಷಣೆ ಮತ್ತು ಅವನ ರಸೂಲರ ರಕ್ಷಣೆ ಇದೆ. ಆದ್ದರಿಂದ ನೀವು ಅಲ್ಲಾಹನ ರಕ್ಷಣೆಯ ವಿಷಯದಲ್ಲಿ ಅವನಿಗೆ ದ್ರೋಹ ಮಾಡಬೇಡಿ."
الترجمة
العربية Português دری Македонски Magyar Tiếng Việt ქართული বাংলা Kurdî ไทย অসমীয়া Indonesia Nederlands ਪੰਜਾਬੀ Kiswahili Hausa ភាសាខ្មែរ English ગુજરાતી Tagalog Русский मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಯಾರು ಧರ್ಮದ ಬಾಹ್ಯ ಆಚರಣೆಗಳಿಗೆ ಬದ್ಧನಾಗಿರುತ್ತಾನೋ — ಅಂದರೆ ನಮ್ಮ ನಮಾಝಿನಂತೆಯೇ ನಮಾಝ್ ಮಾಡುತ್ತಾನೋ, ನಮ್ಮ ಕಿಬ್ಲಾವಾದ ಕಾಬಾವನ್ನು ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು (ಅದು ಧರ್ಮಸಮ್ಮತ ಎಂದು ನಂಬಿ) ತಿನ್ನುತ್ತಾನೋ — ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ಮತ್ತು ಅವನ ರಸೂಲರ ಅಭಯ ಮತ್ತು ಒಪ್ಪಂದವಿದೆ. ಆದ್ದರಿಂದ ಅವನ ವಿಷಯದಲ್ಲಿ ನೀವು ಅಲ್ಲಾಹನ ಅಭಯ ಮತ್ತು ಒಪ್ಪಂದವನ್ನು ಮುರಿಯಬೇಡಿ.فوائد الحديث
ಇಬ್ನ್ ರಜಬ್ ಹೇಳುತ್ತಾರೆ: ಕೇವಲ ಶಹಾದತ್ (ಸತ್ಯಸಾಕ್ಷ್ಯ) ವಚನಗಳನ್ನು ಹೇಳಿದಾಕ್ಷಣ ಜೀವಕ್ಕೆ ರಕ್ಷಣೆ ಸಿಗುವುದಿಲ್ಲ (ಅಂದರೆ ಅವನನ್ನು ಕೊಲ್ಲುವುದು ಹರಾಮ್ ಆಗುವುದಿಲ್ಲ), ಬದಲಾಗಿ ಅವನು ಅದರ ಹಕ್ಕುಗಳನ್ನು ಪೂರೈಸುವವರೆಗೆ ಎಂದು ಈ ಹದೀಸ್ ಸೂಚಿಸುತ್ತದೆ. ಅದರ ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದುದು ನಮಾಝ್. ಆದ್ದರಿಂದ ನಮಾಝನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಇನ್ನೊಂದು ಹದೀಸ್‌ನಲ್ಲಿ ನಮಾಝಿನ ಜೊತೆಗೆ ಝಕಾತ್ ಅನ್ನು ಸೇರಿಸಲಾಗಿದೆ.
ಜನರ ವಿಷಯಗಳನ್ನು ಅವರ ಬಾಹ್ಯ ವರ್ತನೆಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆಯೇ ಹೊರತು ಆಂತರಿಕ ವಿಷಯಗಳ ಆಧಾರದ ಮೇಲಲ್ಲ. ಯಾರು ಧರ್ಮದ ಆಚರಣೆಗಳನ್ನು ಪ್ರಕಟಪಡಿಸುತ್ತಾನೋ, ಅವನಿಗೆ ಧರ್ಮದ ನಿಯಮಗಳು ಅನ್ವಯವಾಗುತ್ತದೆ; ಅವನಿಂದ ಇದಕ್ಕೆ ವಿರುದ್ಧವಾದುದು ಕಂಡುಬಾರದ ಹೊರತು.
ಇಬ್ನ್ ರಜಬ್ ಹೇಳುತ್ತಾರೆ: ಕಿಬ್ಲಾವನ್ನು ಅಭಿಮುಖೀಕರಿಸುವುದನ್ನು ಪ್ರಸ್ತಾಪಿಸಿರುವುದು ಏನನ್ನು ಸೂಚಿಸುತ್ತದೆ ಎಂದರೆ, ಪ್ರವಾದಿಯವರ ಮೇಲೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್‌ನಲ್ಲಿ) ವಿಧಿಸಲಾದ ಮುಸ್ಲಿಮರ ನಮಾಝನ್ನೇ ನಿರ್ವಹಿಸುವುದು ಕಡ್ಡಾಯವಾಗಿದೆ. ಅದು ಕಾಬಾದ ಕಡೆಗೆ ತಿರುಗಿ ನಿರ್ವಹಿಸುವ ನಮಾಝ್ ಆಗಿದೆ. ಹಾಗಲ್ಲದೆ, ಯಹೂದಿಗಳಂತೆ ಬೈತುಲ್ ಮುಕದ್ದಸ್ ಕಡೆಗೆ (ಅದು ರದ್ದುಗೊಂಡ ನಂತರವೂ) ಅಥವಾ ಕ್ರೈಸ್ತರಂತೆ ಪೂರ್ವದ ಕಡೆಗೆ ತಿರುಗಿ ನಮಾಝ್ ಮಾಡುವವನು ಮುಸ್ಲಿಮ್ ಅಲ್ಲ; ಅವನು ಏಕದೇವತ್ವದ ಸಾಕ್ಷ್ಯ ನುಡಿದಿದ್ದರೂ ಸರಿ.
ನಮಾಝಿನಲ್ಲಿ ಕಿಬ್ಲಾವನ್ನು ಅಭಿಮುಖೀಕರಿಸುವುದು ಎಷ್ಟು ಮಹತ್ವದ್ದಾಗಿದೆ ಎಂಬುದಕ್ಕೆ ಇದರಲ್ಲಿ ಪುರಾವೆಯಿದೆ. ಏಕೆಂದರೆ ನಮಾಝಿನ ಇತರ ಷರತ್ತುಗಳಾದ ಶುಚಿತ್ವ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಿಲ್ಲ (ಕೇವಲ ಕಿಬ್ಲಾವನ್ನು ಉಲ್ಲೇಖಿಸಲಾಗಿದೆ).
ಇಬ್ನ್ ರಜಬ್ ಹೇಳುತ್ತಾರೆ: ಮುಸ್ಲಿಮರು ವಧೆ ಮಾಡಿದ ಪ್ರಾಣಿಯನ್ನು ತಿನ್ನುವುದನ್ನು ಪ್ರಸ್ತಾಪಿಸಿರುವುದು ಏನನ್ನು ಸೂಚಿಸುತ್ತದೆ ಎಂದರೆ, ಇಸ್ಲಾಂ ಧರ್ಮದ ಎಲ್ಲಾ ಬಾಹ್ಯ ಆಚರಣೆಗಳಿಗೆ ಬದ್ಧರಾಗಿರುವುದು ಕಡ್ಡಾಯವಾಗಿದೆ. ಅದರಲ್ಲಿ ಅತ್ಯಂತ ಮುಖ್ಯವಾದುದು ಮುಸ್ಲಿಮರು ವಧೆ ಮಾಡಿದ ಪ್ರಾಣಿಯನ್ನು ತಿನ್ನುವುದು ಮತ್ತು ವಧೆ ಮಾಡುವ ವಿಧಾನದಲ್ಲಿ ಅವರಿಗೆ ಹೊಂದಿಕೆಯಾಗುವುದು. ಯಾರು ಇದನ್ನು ನಿರಾಕರಿಸುತ್ತಾನೋ ಅವನು ಮುಸ್ಲಿಮ್ ಅಲ್ಲ.
