إعدادات العرض
'ಲಾ ಇಲಾಹ ಇಲ್ಲಲ್ಲಾಹ್, ವಹ್‌ದಹೂ ಲಾ ಶರೀಕ ಲಹೂ, ಲಹುಲ್-ಮುಲ್ಕು ವ ಲಹುಲ್-ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್' (ಅಲ್ಲಾಹನ ಹೊರತು…
'ಲಾ ಇಲಾಹ ಇಲ್ಲಲ್ಲಾಹ್, ವಹ್‌ದಹೂ ಲಾ ಶರೀಕ ಲಹೂ, ಲಹುಲ್-ಮುಲ್ಕು ವ ಲಹುಲ್-ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್' (ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ, ಸಾರ್ವಭೌಮತ್ವ ಅವನದೇ ಮತ್ತು ಎಲ್ಲಾ ಸ್ತುತಿಗಳೂ ಅವನಿಗೆ, ಮತ್ತು ಅವನು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು) ಎಂದು ಒಂದು ದಿನದಲ್ಲಿ ನೂರು ಬಾರಿ ಯಾರು ಹೇಳುತ್ತಾರೋ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "'ಲಾ ಇಲಾಹ ಇಲ್ಲಲ್ಲಾಹ್, ವಹ್‌ದಹೂ ಲಾ ಶರೀಕ ಲಹೂ, ಲಹುಲ್-ಮುಲ್ಕು ವ ಲಹುಲ್-ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್' (ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ, ಸಾರ್ವಭೌಮತ್ವ ಅವನದೇ ಮತ್ತು ಎಲ್ಲಾ ಸ್ತುತಿಗಳೂ ಅವನಿಗೆ, ಮತ್ತು ಅವನು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು) ಎಂದು ಒಂದು ದಿನದಲ್ಲಿ ನೂರು ಬಾರಿ ಯಾರು ಹೇಳುತ್ತಾರೋ, ಅವನಿಗೆ ಹತ್ತು ಗುಲಾಮರನ್ನು ಸ್ವತಂತ್ರಗೊಳಿಸಿದ್ದಕ್ಕೆ ಸಮಾನವಾದ (ಪ್ರತಿಫಲ) ಇರುತ್ತದೆ. ಅವನಿಗೆ ನೂರು ಪುಣ್ಯಗಳು ದಾಖಲಿಸಲಾಗುತ್ತದೆ, ಮತ್ತು ಅವನಿಂದ ನೂರು ಪಾಪಗಳನ್ನು ಅಳಿಸಲಾಗುತ್ತದೆ. ಆ ದಿನ ಸಂಜೆಯಾಗುವವರೆಗೆ ಅದು (ಅವನಿಗೆ) ಶೈತಾನನಿಂದ ರಕ್ಷಾಕವಚವಾಗಿರುತ್ತದೆ. ಅದಕ್ಕಿಂತ ಹೆಚ್ಚು (ಬಾರಿ ಹೇಳಿದವನ) ಹೊರತು ಬೇರೆ ಯಾರೂ ಅದಕ್ಕಿಂತ ಉತ್ತಮವಾದುದನ್ನು ತರುವುದಿಲ್ಲ".
الترجمة
العربية Tiếng Việt Magyar ქართული සිංහල Kiswahili Română অসমীয়া ไทย Hausa English Português मराठी دری አማርኛ বাংলা ភាសាខ្មែរ Kurdî Nederlands ગુજરાતી Македонски Indonesia Tagalog ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, (ಲಾ ಇಲಾಹ) ಸತ್ಯವಾದ ಆರಾಧ್ಯನಿಲ್ಲ (ಇಲ್ಲಲ್ಲಾಹ್) ಅಲ್ಲಾಹನ ಹೊರತು, (ವಹ್‌ದಹೂ ಲಾ ಶರೀಕ ಲಹೂ) ಅವನು ಏಕೈಕನು, ಅವನಿಗೆ ಅವನ ದೈವತ್ವ, ಪ್ರಭುತ್ವ, ಹೆಸರು ಮತ್ತು ಗುಣಲಕ್ಷಣಗಳಲ್ಲಿ ಯಾವುದೇ ಸಹಭಾಗಿಗಳಿಲ್ಲ, (ಲಹುಲ್ ಮುಲ್ಕ್) ಸಾರ್ವಭೌಮತ್ವ, ಅಧಿಕಾರ ಮತ್ತು ಸಂಪೂರ್ಣ ನಿರ್ವಹಣೆಯು ಅವನದ್ದೇ ಆಗಿದೆ, (ವ ಲಹುಲ್ ಹಮ್ದು) ಅವನು ಸೃಷ್ಟಿಸುವ ಮತ್ತು ವಿಧಿಸುವ ಎಲ್ಲದರಲ್ಲೂ ಎಲ್ಲಾ ಸ್ತುತಿಗಳೂ ಅವನಿಗೆ ಸಲ್ಲುತ್ತವೆ, (ವ ಹುವ ಅಲಾ ಕುಲ್ಲಿ ಶೈಇನ್ ಖದೀರ್) ಮತ್ತು ಅವನು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು, ಅವನನ್ನು ತಡೆಯುವ ಮತ್ತು ಪ್ರತಿರೋಧಿಸುವ ಶಕ್ತಿ ಯಾರಿಗೂ ಇಲ್ಲ, ಮತ್ತು ಅವನು ಬಯಸದೇ ಇರುವುದು ಸಂಭವಿಸುವುದಿಲ್ಲ. ಯಾರು ಈ ಧಿಕ್ರ್ ಅನ್ನು ಒಂದು ದಿನದಲ್ಲಿ ನೂರು ಬಾರಿ ಪುನರಾವರ್ತಿಸುತ್ತಾರೋ, ಅವನಿಗೆ ಅಲ್ಲಾಹನ ಬಳಿ ಹತ್ತು ಗುಲಾಮರನ್ನು ಸ್ವತಂತ್ರಗೊಳಿಸಿದಷ್ಟು ಪ್ರತಿಫಲ ದಾಖಲಾಗುತ್ತದೆ. ಅವನಿಗೆ ನೂರು ಪುಣ್ಯಗಳು ಮತ್ತು ಸ್ವರ್ಗದಲ್ಲಿ ದರ್ಜೆಗಳು ದಾಖಲಾಗುತ್ತದೆ. ಅವನಿಂದ ನೂರು ಪಾಪಗಳನ್ನು ಅಳಿಸಿಹಾಕಲಾಗುತ್ತದೆ ಮತ್ತು ನಿವಾರಿಸಲಾಗುತ್ತದೆ. ಆ ದಿನ ಸಂಜೆಯಾಗಿ ಸೂರ್ಯ ಮುಳುಗುವವರೆಗೆ ಶೈತಾನನಿಂದ, ಅವನ ವಂಚನೆಯಿಂದ ಮತ್ತು ಅವನ ಆಧಿಪತ್ಯದಿಂದ ಅದು ಅವನಿಗೆ ಒಂದು ರಕ್ಷಾಕವಚ, ಕಾಪಾಡುವಿಕೆ, ತಡೆ ಮತ್ತು ಕೋಟೆಯಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಹೇಳಿದವನ ಹೊರತು ಪುನರುತ್ಥಾನ ದಿನದಂದು ಯಾರೂ ಅದಕ್ಕಿಂತ ಉತ್ತಮವಾದುದನ್ನು ತರುವುದಿಲ್ಲ.فوائد الحديث
ತೌಹೀದ್‌ನ (ಏಕದೇವತ್ವದ) ವಚನದ ಶ್ರೇಷ್ಠತೆ ಮತ್ತು ಅದರ ಮಹತ್ತರವಾದ ಪ್ರತಿಫಲವನ್ನು ತಿಳಿಸಲಾಗಿದೆ.
ಅಲ್ಲಾಹನು ತನ್ನ ದಾಸರ ಮೇಲೆ ಹೊಂದಿರುವ ವಿಶಾಲವಾದ ಅನುಗ್ರಹವನ್ನು ತಿಳಿಸಲಾಗಿದೆ. ಹೇಗೆಂದರೆ ಅವನು ಪ್ರತಿಯೊಬ್ಬನಿಗೂ ಸುಲಭವಾದ ಧಿಕ್ರ್ ಅನ್ನು ನಿಯಮಗೊಳಿಸಿದ್ದಾನೆ, ಮತ್ತು ಅದಕ್ಕಾಗಿ ಮಹಾನ್ ಪ್ರತಿಫಲವನ್ನು ನಿಗದಿಪಡಿಸಿದ್ದಾನೆ.
ಒಬ್ಬನು ಈ ತಹ್ಲೀಲ್ ಅನ್ನು ಒಂದು ದಿನದಲ್ಲಿ ನೂರು ಬಾರಿಗಿಂತ ಹೆಚ್ಚು ಹೇಳಿದರೆ, ಅವನಿಗೆ ನೂರು ಬಾರಿ ಹೇಳಿದ್ದಕ್ಕೆ ಹದೀಸ್‌ನಲ್ಲಿ ಉಲ್ಲೇಖಿಸಲಾದ ಪ್ರತಿಫಲ ದೊರೆಯುತ್ತದೆ, ಮತ್ತು ಹೆಚ್ಚುವರಿ (ಪಠಣ) ಕ್ಕೆ ಬೇರೆ ಪ್ರತಿಫಲ ದೊರೆಯುತ್ತದೆ. ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಹೇಳುವುದನ್ನು, ದಾಟುವುದನ್ನು ನಿಷೇಧಿಸಲಾದ ದಿಕ್ರ್‌ಗಳಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಅಂತಹ ಹೆಚ್ಚಳದಲ್ಲಿ ಯಾವುದೇ ಶ್ರೇಷ್ಠತೆಯಿಲ್ಲ ಅಥವಾ ಅದು ಅದರ ಪ್ರತಿಫಲವನ್ನು ನಿಷ್ಫಲಗೊಳಿಸಬಹುದು.
ಇಮಾಮ್ ನವವಿ ಹೇಳುತ್ತಾರೆ: "ಹದೀಸ್‌ನ ಸ್ಪಷ್ಟ ಅರ್ಥವೇನೆಂದರೆ, ಈ ಹದೀಸ್‌ನಲ್ಲಿ ಉಲ್ಲೇಖಿಸಲಾದ ಈ ಪ್ರತಿಫಲವು, ಯಾರು ಈ ತಹ್ಲೀಲ್ ಅನ್ನು ಒಂದು ದಿನದಲ್ಲಿ ನೂರು ಬಾರಿ ಹೇಳುತ್ತಾರೋ ಅವರಿಗೆ ದೊರೆಯುತ್ತದೆ. ಅವನು ಅದನ್ನು ನಿರಂತರವಾಗಿ ಹೇಳಿದರೂ ಅಥವಾ ಬೇರೆ ಬೇರೆಯಾಗಿ ಹೇಳಿದರೂ, ಅಥವಾ ಕೆಲವು ಭಾಗವನ್ನು ದಿನದ ಆರಂಭದಲ್ಲಿ ಮತ್ತು ಕೆಲವು ಭಾಗವನ್ನು ದಿನದ ಕೊನೆಯಲ್ಲಿ ಹೇಳಿದರೂ ಸಹ. ಆದರೆ, ಅತ್ಯುತ್ತಮವಾದ ರೀತಿ ಅದನ್ನು ದಿನದ ಆರಂಭದಲ್ಲಿ ನಿರಂತರವಾಗಿ ಹೇಳುವುದು. ಇದರಿಂದ ಅದು ಅವನ ಸಂಪೂರ್ಣ ದಿನಕ್ಕೆ ರಕ್ಷಾಕವಚವಾಗಿರುತ್ತದೆ.
