إعدادات العرض
ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ
ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ತುಚ್ಛವಾಗಿ ಕಾಣುವ ಪಾಪಗಳ ಉದಾಹರಣೆಯು ಒಂದು ಕಣಿವೆಯ ಒಳಭಾಗದಲ್ಲಿ ಇಳಿದುಕೊಂಡ ಒಂದು ಗುಂಪು ಜನರಂತಿದೆ. ಅವರಲ್ಲೊಬ್ಬನು ಒಂದು ಕಡ್ಡಿಯನ್ನು ತಂದನು, ಇನ್ನೊಬ್ಬನು ಒಂದು ಕಡ್ಡಿಯನ್ನು ತಂದನು. ಹೀಗೆ (ಕಡ್ಡಿಗಳನ್ನು ಸಂಗ್ರಹಿಸಿ) ಅವರು ತಮ್ಮ ರೊಟ್ಟಿಯನ್ನು ಬೇಯಿಸಿದರು. ಖಂಡಿತವಾಗಿಯೂ, ತುಚ್ಛವಾಗಿ ಕಾಣುವ ಪಾಪಗಳು, ಯಾವಾಗ ಅವುಗಳಿಗಾಗಿ ಮನುಷ್ಯನು ಹಿಡಿಯಲ್ಪಡುತ್ತಾನೋ (ವಿಚಾರಣೆಗೆ ಒಳಪಡುತ್ತಾನೋ), ಅವು ಅವನನ್ನು ನಾಶಮಾಡುತ್ತವೆ".
الترجمة
العربية Tiếng Việt অসমীয়া Nederlands Indonesia Kiswahili Hausa සිංහල English ગુજરાતી Magyar ქართული Română Русский Português ไทย తెలుగు मराठी دری Türkçe አማርኛ বাংলা Kurdî Malagasy Македонски Tagalog ភាសាខ្មែរ Українська ਪੰਜਾਬੀ پښتو Moore Wolof മലയാളം हिन्दी Svenska Bosanski தமிழ் 中文 မြန်မာالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಚಿಕ್ಕ ಪಾಪಗಳನ್ನು ಮಾಡುವುದನ್ನು ದೊಡ್ಡ ವಿಷಯವಾಗಿ ಕಾಣದಿರುವುದರ ಬಗ್ಗೆ ಮತ್ತು ಅವುಗಳನ್ನು ಹೆಚ್ಚಾಗಿ ಮಾಡುವುದರ ಬಗ್ಗೆ ಎಚ್ಚರಿಸಿದ್ದಾರೆ. ಏಕೆಂದರೆ ಅವು ಒಟ್ಟುಗೂಡಿದಾಗ ನಾಶಮಾಡುತ್ತವೆ. ಅದಕ್ಕೆ ಅವರು ಒಂದು ಉದಾಹರಣೆಯನ್ನು ನೀಡಿದರು: ಒಂದು ಗುಂಪು ಜನರು ಒಂದು ಕಣಿವೆಯ ಒಳಭಾಗದಲ್ಲಿ ಇಳಿದುಕೊಂಡರು. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ಸಣ್ಣ ಕಡ್ಡಿಯನ್ನು ತಂದರು. ಕೊನೆಗೆ ಅವರು ಸಂಗ್ರಹಿಸಿದ ಕಡ್ಡಿಗಳನ್ನು ಒಟ್ಟುಗೂಡಿಸಿ ಅವರು ತಮ್ಮ ರೊಟ್ಟಿಯನ್ನು ಬೇಯಿಸಿದರು. ಖಂಡಿತವಾಗಿಯೂ, ಕೀಳಾಗಿ ಕಾಣುವ ಪಾಪಗಳು, ಯಾವಾಗ ಅವುಗಳಿಗಾಗಿ ಮನುಷ್ಯನು ಹಿಡಿಯಲ್ಪಡುತ್ತಾನೋ ಮತ್ತು ಅವುಗಳಿಂದ ಪಶ್ಚಾತ್ತಾಪ ಪಡುವುದಿಲ್ಲವೋ ಅಥವಾ ಅಲ್ಲಾಹು ಅವನನ್ನು ಕ್ಷಮಿಸುವುದಿಲ್ಲವೋ, ಅವು ಅವನನ್ನು ನಾಶಮಾಡಿ ಬಿಡುತ್ತವೆ.فوائد الحديث
ಮನಮುಟ್ಟುವಂತೆ ತಿಳಿಸಿಕೊಡಲು ಮತ್ತು ವಿವರಣೆಯನ್ನು ಹೆಚ್ಚಿಸಲು ಉದಾಹರಣೆಗಳನ್ನು ನೀಡುವ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಶೈಲಿಯನ್ನು ತಿಳಿಸಲಾಗಿದೆ.
ತುಚ್ಛವಾಗಿ ಕಾಣಲಾಗುವ ಚಿಕ್ಕ ಪಾಪಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅವುಗಳಿಗೆ ಪ್ರಾಯಶ್ಚಿತ್ತ ನೀಡುವುದಕ್ಕಾಗಿ ತ್ವರೆ ಮಾಡಲು ಪ್ರೋತ್ಸಾಹಿಸಲಾಗಿದೆ.
"ತುಚ್ಛವಾಗಿ ಕಾಣುವ ಪಾಪಗಳು" ಹಲವು ಅರ್ಥಗಳನ್ನು ಒಳಗೊಳ್ಳಬಹುದು:
ಮೊದಲನೆಯದು: ದಾಸನು ಮಾಡುವ ಚಿಕ್ಕ ಪಾಪಗಳೆಂದು ಭಾವಿಸಿ ಮಾಡುವ ಪಾಪಗಳು. ಆದರೆ ಅವು ಅಲ್ಲಾಹುವಿನ ಬಳಿ ಮಹಾಪಾಪಗಳಾಗಿರುತ್ತವೆ. ಎರಡನೆಯದು: ದಾಸನು ಮಾಡುವ ಚಿಕ್ಕ ಪಾಪಗಳು. ಅವನು ಅವುಗಳ ಬಗ್ಗೆ ಜಾಗರೂಕತೆ ವಹಿಸುವುದಿಲ್ಲ ಮತ್ತು ಅವುಗಳಿಗಾಗಿ ಪಶ್ಚಾತ್ತಾಪ ಪಡುವುದೂ ಇಲ್ಲ. ಆಗ ಈ ಚಿಕ್ಕ ಪಾಪಗಳು ಒಟ್ಟುಗೂಡಿ ಕೊನೆಗೆ ಅವನನ್ನು ನಾಶಮಾಡುತ್ತವೆ. ಮೂರನೆಯದು: ದಾಸನು ಮಾಡುವ ಚಿಕ್ಕ ಪಾಪಗಳು. ಅವನು ಅವುಗಳ ಬಗ್ಗೆ ಜಾಗರೂಕತೆ ವಹಿಸುವುದಿಲ್ಲ. ಆಗ ಅವು ಅವನನ್ನು ವಿನಾಶಕಾರಿ ಮಹಾಪಾಪಗಳಲ್ಲಿ ಬೀಳಲು ಕಾರಣವಾಗುತ್ತವೆ.
التصنيفات
ಪಾಪಗಳ ಖಂಡನೆ