ಚಿನ್ನವನ್ನು ಚಿನ್ನಕ್ಕೆ, ಬೆಳ್ಳಿಯನ್ನು ಬೆಳ್ಳಿಗೆ, ಗೋಧಿಯನ್ನು ಗೋಧಿಗೆ, ಬಾರ್ಲಿಯನ್ನು ಬಾರ್ಲಿಗೆ, ಖರ್ಜೂರವನ್ನು ಖರ್ಜೂರಕ್ಕೆ,…

ಚಿನ್ನವನ್ನು ಚಿನ್ನಕ್ಕೆ, ಬೆಳ್ಳಿಯನ್ನು ಬೆಳ್ಳಿಗೆ, ಗೋಧಿಯನ್ನು ಗೋಧಿಗೆ, ಬಾರ್ಲಿಯನ್ನು ಬಾರ್ಲಿಗೆ, ಖರ್ಜೂರವನ್ನು ಖರ್ಜೂರಕ್ಕೆ, ಉಪ್ಪನ್ನು ಉಪ್ಪಿಗೆ, ಸಮಾನವಾಗಿರುವ ವಸ್ತುವಿಗೆ, ಕೈಯಿಂದ ಕೈಗೆ (ಮಾರಾಟ ಮಾಡಬೇಕು). ಈ ವರ್ಗಗಳು ಬೇರೆ ಬೇರೆಯಾಗಿದ್ದರೆ, ಅದು ಕೈಯಿಂದ ಕೈಗೆ ಆಗಿದ್ದರೆ ನೀವು ಇಚ್ಛಿಸುವಂತೆ ಮಾರಾಟ ಮಾಡಬಹುದು

ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಚಿನ್ನವನ್ನು ಚಿನ್ನಕ್ಕೆ, ಬೆಳ್ಳಿಯನ್ನು ಬೆಳ್ಳಿಗೆ, ಗೋಧಿಯನ್ನು ಗೋಧಿಗೆ, ಬಾರ್ಲಿಯನ್ನು ಬಾರ್ಲಿಗೆ, ಖರ್ಜೂರವನ್ನು ಖರ್ಜೂರಕ್ಕೆ, ಉಪ್ಪನ್ನು ಉಪ್ಪಿಗೆ, ಸಮಾನವಾಗಿರುವ ವಸ್ತುವಿಗೆ, ಕೈಯಿಂದ ಕೈಗೆ (ಮಾರಾಟ ಮಾಡಬೇಕು). ಈ ವರ್ಗಗಳು ಬೇರೆ ಬೇರೆಯಾಗಿದ್ದರೆ, ಅದು ಕೈಯಿಂದ ಕೈಗೆ ಆಗಿದ್ದರೆ ನೀವು ಇಚ್ಛಿಸುವಂತೆ ಮಾರಾಟ ಮಾಡಬಹುದು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಡ್ಡಿ ಸಂಬಂಧಿತ ಆರು ವಸ್ತುಗಳ ಸರಿಯಾದ ಮಾರಾಟ ವಿಧಾನವನ್ನು ವಿವರಿಸಿದ್ದಾರೆ. ಅವು ಚಿನ್ನ, ಬೆಳ್ಳಿ, ಗೋಧಿ, ಬಾರ್ಲಿ, ಖರ್ಜೂರ ಮತ್ತು ಉಪ್ಪು. ಇವು ಒಂದೇ ವರ್ಗದ್ದಾಗಿದ್ದರೆ, ಉದಾಹರಣೆಗೆ ಚಿನ್ನವನ್ನು ಚಿನ್ನಕ್ಕೆ ಮತ್ತು ಬೆಳ್ಳಿಯನ್ನು ಬೆಳ್ಳಿಗೆ ಮಾರಾಟ ಮಾಡುವುದು... ಆಗ ಎರಡು ಷರತ್ತುಗಳು ಅನ್ವಯವಾಗುತ್ತವೆ: ಮೊದಲನೆಯದು: ತೂಕದಲ್ಲಿ ಸಮಾನವಾಗಿರುವುದು. ಅವು ಚಿನ್ನ ಮತ್ತು ಬೆಳ್ಳಿಯಂತಹ ತೂಕದಿಂದ ಮಾರಾಟವಾಗುವ ವಸ್ತುಗಳಾಗಿದ್ದರೆ. ಅಥವಾ ಅಳತೆಯಲ್ಲಿ ಸಮಾನವಾಗಿರುವುದು. ಅವು ಗೋಧಿ, ಬಾರ್ಲಿ, ಖರ್ಜೂರ ಮತ್ತು ಉಪ್ಪಿನಂತಹ ಅಳತೆಯಿಂದ ಮಾರಾಟವಾಗುವ ವಸ್ತುಗಳಾಗಿದ್ದರೆ. ಎರಡನೆಯದು: ಮಾರಾಟಗಾರನು ಬೆಲೆಯನ್ನು ಮತ್ತು ಖರೀದಿದಾರನು ವಸ್ತುವನ್ನು ಮಾರಾಟ ಒಪ್ಪಂದ ನಡೆದ ಸ್ಥಳದಲ್ಲಿಯೇ ಪಡೆದುಕೊಳ್ಳಬೇಕು. ಈ ವರ್ಗಗಳು ಬೇರೆ ಬೇರೆಯಾಗಿದ್ದರೆ, ಉದಾಹರಣೆಗೆ ಚಿನ್ನವನ್ನು ಬೆಳ್ಳಿಗೆ ಮತ್ತು ಖರ್ಜೂರವನ್ನು ಗೋಧಿಗೆ ಮಾರಾಟ ಮಾಡುವುದಾದರೆ, ಕೇವಲ ಒಂದು ಷರತ್ತು ಅನ್ವಯವಾಗುತ್ತದೆ. ಅಂದರೆ, ಮಾರಾಟದ ಒಪ್ಪಂದ ನಡೆದ ಸ್ಥಳದಲ್ಲಿಯೇ ಮಾರಾಟಗಾರನು ಬೆಲೆಯನ್ನು ಮತ್ತು ಖರೀದಿದಾರನು ವಸ್ತುವನ್ನು ಪಡೆದುಕೊಳ್ಳುವುದು. ಇಲ್ಲದಿದ್ದರೆ, ಮಾರಾಟವು ಅಸಿಂಧುವಾಗುತ್ತದೆ ಮತ್ತು ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ ಸಮಾನವಾಗಿ ನಿಷಿದ್ಧ ಬಡ್ಡಿಯಲ್ಲಿ ಒಳಪಡುತ್ತಾರೆ.

فوائد الحديث

ಬಡ್ಡಿ ಸಂಬಂಧಿತ ವಸ್ತುಗಳನ್ನು ಮತ್ತು ಅವುಗಳ ಮಾರಾಟದ ವಿಧಾನವನ್ನು ತಿಳಿಸಲಾಗಿದೆ.

ಬಡ್ಡಿ ಆಧಾರಿತ ಮಾರಾಟವನ್ನು ನಿಷೇಧಿಸಲಾಗಿದೆ.

ಬಡ್ಡಿಯ ಕಾರಣದ ವಿಷಯದಲ್ಲಿ ಕರೆನ್ಸಿ ನೋಟುಗಳು ಚಿನ್ನ ಮತ್ತು ಬೆಳ್ಳಿಯ ನಿಯಮವನ್ನೇ ಹೊಂದಿವೆ.

ಬಡ್ಡಿ ಸಂಬಂಧಿತ ಆರು ವರ್ಗಗಳ ವಸ್ತುಗಳನ್ನು ಮಾರಾಟ ಮಾಡುವುದು ಮತ್ತು ಖರೀದಿಸುವುದು ಮೂರು ವಿಭಿನ್ನ ಅವಸ್ಥೆಗಳನ್ನು ಹೊಂದಿವೆ: 1- ಬಡ್ಡಿ ಸಂಬಂಧಿತ ವಸ್ತುವನ್ನು ಅದೇ ವರ್ಗದ ಇನ್ನೊಂದು ಬಡ್ಡಿ ಸಂಬಂಧಿತ ವಸ್ತುವಿಗೆ ಮಾರಾಟ ಮಾಡುವಾಗ, ಅಂದರೆ, ಉದಾಹರಣೆಗೆ ಚಿನ್ನವನ್ನು ಚಿನ್ನಕ್ಕೆ ಮತ್ತು ಖರ್ಜೂರವನ್ನು ಖರ್ಜೂರಕ್ಕೆ... ಮಾರಾಟ ಮಾಡುವಾಗ, ಆ ಪ್ರಕ್ರಿಯೆ ಸಿಂಧುವಾಗಲು ಎರಡು ಷರತ್ತುಗಳು ಅನ್ವಯವಾಗುತ್ತವೆ: ತೂಕ ಅಥವಾ ಅಳತೆಯಲ್ಲಿ ಸಮಾನವಾಗಿರುವುದು ಮತ್ತು ಒಪ್ಪಂದ ನಡೆದ ಸ್ಥಳದಲ್ಲಿ ತಕ್ಷಣ ವಿನಿಮಯ ಮಾಡಿಕೊಳ್ಳುವುದು. 2- ಬಡ್ಡಿ ಸಂಬಂಧಿತ ವಸ್ತುವನ್ನು ಬಡ್ಡಿಯ ಅದೇ ಕಾರಣವನ್ನು ಹೊಂದಿರುವ ಬೇರೆ ವರ್ಗಕ್ಕೆ ಸೇರಿದ ಬಡ್ಡಿ ಸಂಬಂಧಿತ ವಸ್ತುವಿಗೆ ಮಾರಾಟ ಮಾಡುವಾಗ, ಅಂದರೆ ಉದಾಹರಣೆಗೆ ಚಿನ್ನವನ್ನು ಬೆಳ್ಳಿಗೆ ಮತ್ತು ಗೋಧಿಯನ್ನು ಬಾರ್ಲಿಗೆ ಮಾರಾಟ ಮಾಡುವಾಗ, ಅದಕ್ಕೆ ಸಮಾನವಾಗಿರಬೇಕೆಂಬ ಷರತ್ತು ಇಲ್ಲ. ಆದರೆ ಅದಕ್ಕೆ ತಕ್ಷಣ ವಿನಿಮಯ ಮಾಡಿಕೊಳ್ಳಬೇಕೆಂಬ ಷರತ್ತು ಇದೆ. 3- ಬಡ್ಡಿ ಸಂಬಂಧಿತ ವಸ್ತುವನ್ನು ಬಡ್ಡಿಯ ಬೇರೆ ಕಾರಣವನ್ನು ಹೊಂದಿರುವ ಬೇರೆ ವರ್ಗದ ಬಡ್ಡಿ ಸಂಬಂಧಿತ ವಸ್ತುವಿನೊಂದಿಗೆ ಮಾರಾಟ ಮಾಡುವಾಗ, ಅಂದರೆ ಉದಾಹರಣೆಗೆ ಚಿನ್ನವನ್ನು ಖರ್ಜೂರಕ್ಕೆ ಮಾರಾಟ ಮಾಡುವಾಗ, ಅದಕ್ಕೆ ತಕ್ಷಣ ವಿನಿಮಯ ಮಾಡಿಕೊಳ್ಳಬೇಕು ಅಥವಾ ಸಮಾನವಾಗಿರಬೇಕೆಂಬ ಎರಡೂ ಷರತ್ತುಗಳಿಲ್ಲ.

ಬಡ್ಡಿ ಸಂಬಂಧಿತವಲ್ಲದ ವಸ್ತುಗಳನ್ನು, ಅಥವಾ ಒಂದು ಬಡ್ಡಿ ಸಂಬಂಧಿತ ಮತ್ತು ಇನ್ನೊಂದು ಬಡ್ಡಿ ಸಂಬಂಧಿತವಲ್ಲದ ವಸ್ತುಗಳನ್ನು ಮಾರಾಟ ಮಾಡುವಾಗ ಮತ್ತು ಖರೀದಿಸುವಾಗ, ಅದಕ್ಕೆ ತಕ್ಷಣ ವಿನಿಮಯ ಮಾಡಿಕೊಳ್ಳಬೇಕು ಅಥವಾ ಸಮಾನವಾಗಿರಬೇಕು ಎಂಬ ಷರತ್ತುಗಳಿಲ್ಲ. ಉದಾಹರಣೆಗೆ ಸ್ಥಿರಾಸ್ತಿಯನ್ನು ಚಿನ್ನಕ್ಕೆ ಮಾರಾಟ ಮಾಡುವುದು.

التصنيفات

Usury