ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು…

ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವರ್ಗದ ಕೆಲವು ಸುಖಗಳ ಬಗ್ಗೆ ತಿಳಿಸಿದ್ದಾರೆ. ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಬಹಳ ದೊಡ್ಡದಾದ, ಒಳಗೆ ವಿಶಾಲವಾದ, ಒಂದೇ ಮುತ್ತಿನಿಂದ ಮಾಡಿದ ಒಳಗೆ ಟೊಳ್ಳಾದ ಗುಡಾರವಿರುತ್ತದೆ. ಅದರ ಅಗಲ ಮತ್ತು ಉದ್ದ ಆಕಾಶದಲ್ಲಿ ಅರವತ್ತು ಮೈಲಿಗಳು. ಅದರ ನಾಲ್ಕು ಮೂಲೆಗಳ ಪ್ರತಿಯೊಂದು ಬದಿಯಲ್ಲಿ, ದಿಕ್ಕಿನಲ್ಲಿ ಮತ್ತು ಕೋನದಲ್ಲಿ ಅವನಿಗೆ ಪತ್ನಿಯರಿರುತ್ತಾರೆ. ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ.

فوائد الحديث

ಸ್ವರ್ಗವಾಸಿಗಳ ಸುಖದ ವೈಭವವನ್ನು ವಿವರಿಸಲಾಗಿದೆ.

ಅಲ್ಲಾಹನು ಅವರಿಗಾಗಿ ಸಿದ್ಧಪಡಿಸಿರುವ ಸುಖವನ್ನು ವಿವರಿಸುವ ಮೂಲಕ ಸತ್ಕರ್ಮಗಳನ್ನು ಮಾಡಲು ಪ್ರೋತ್ಸಾಹಿಸಲಾಗಿದೆ.

التصنيفات

Descriptions of Paradise and Hell