ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಅ್ ನಿಂದ ಐದು ಮುದ್ದ್ ವರೆಗಿನ ನೀರಿನಲ್ಲಿ ಸ್ನಾನ…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಅ್ ನಿಂದ ಐದು ಮುದ್ದ್ ವರೆಗಿನ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಒಂದು ಮುದ್ದ್ ನೀರಿನಲ್ಲಿ ವುದೂ ನಿರ್ವಹಿಸುತ್ತಿದ್ದರು

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಅ್ ನಿಂದ ಐದು ಮುದ್ದ್ ವರೆಗಿನ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಒಂದು ಮುದ್ದ್ ನೀರಿನಲ್ಲಿ ವುದೂ ನಿರ್ವಹಿಸುತ್ತಿದ್ದರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಗಾಗಿ (ಜನಾಬತ್) ಒಂದು ಸಾಅ್ ನಿಂದ ಐದು ಮುದ್ದ್ ವರೆಗಿನ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಒಂದು ಮುದ್ದ್ ನೀರಿನಲ್ಲಿ ವುದೂ ನಿರ್ವಹಿಸುತ್ತಿದ್ದರು. ಒಂದು ಸಾಅ್ ಎಂದರೆ ನಾಲ್ಕು ಮುದ್ದ್ ಗಳು. ಒಂದು ಮುದ್ದ್ ಎಂದರೆ ಒಬ್ಬ ಸಾಮಾನ್ಯ ಗಾತ್ರದ ವ್ಯಕ್ತಿಯ ಎರಡು ಅಂಗೈಗಳನ್ನು ಸೇರಿಸಿದರೆ ತುಂಬುವಷ್ಟು ಪ್ರಮಾಣ.

فوائد الحديث

ವುದೂ ಮತ್ತು ಸ್ನಾನ ಮಾಡುವಾಗ ಮಿತತ್ವ ಪಾಲಿಸುವುದು ಮತ್ತು ನೀರನ್ನು ಪೋಲು ಮಾಡದಿರುವುದು ಧಾರ್ಮಿಕ ನಿಯಮವಾಗಿದೆ. ನೀರು ಹೇರಳವಾಗಿ ಲಭ್ಯವಿದ್ದರೂ ಸಹ.

ವುದೂ ಮತ್ತು ಸ್ನಾನ ಮಾಡುವಾಗ ಅಗತ್ಯಕ್ಕೆ ತಕ್ಕಷ್ಟು ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸುವುದು ಅಪೇಕ್ಷಣೀಯವಾಗಿದೆ. ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಾಗಿದೆ.

ಒಟ್ಟು ಸಾರಾಂಶವೇನೆಂದರೆ, ನೀರನ್ನು ಅಗತ್ಯಕ್ಕಿಂತ ಹೆಚ್ಚು ಅಥವಾ ಅಗತ್ಯಕ್ಕಿಂತ ಕಡಿಮೆ ಬಳಸದೆ, ವುದೂ ಮತ್ತು ಸ್ನಾನವನ್ನು ಅದರ ಐಚ್ಛಿಕ ಕಾರ್ಯಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸುತ್ತಾ ಪೂರ್ಣವಾಗಿ ನಿರ್ವಹಿಸಬೇಕು. ಇದರ ಜೊತೆಗೆ ನೀರಿನ ಬಾಹುಳ್ಯ, ಅಭಾವ ಮುಂತಾದವುಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು.

ದೊಡ್ಡ ಅಶುದ್ಧಿ (ಜನಾಬತ್) ಯಲ್ಲಿರುವವರು ಎಂದರೆ, ವೀರ್ಯ ಸ್ಖಲನವಾದವರು ಅಥವಾ ಸಂಭೋಗ ಮಾಡಿದವರು. ಇದನ್ನು ಜನಾಬತ್ (ದೂರವಿರುವವರು) ಎಂದು ಕರೆಯಲಾಗಿರುವುದು ಏಕೆಂದರೆ, ಆ ಸ್ಥಿತಿಯಲ್ಲಿರುವವರು ಶುದ್ಧಿಯಾಗುವ ತನಕ ನಮಾಝ್ ಮತ್ತು ಇತರ ಆರಾಧನಾ ಕರ್ಮಗಳಿಂದ ದೂರವಿರುತ್ತಾರೆ.

ಸಾಅ್ ಎಂದರೆ (ಅರಬ್ಬರು ಬಳಸುವ ಒಂದು) ಸುಪರಿಚಿತ ಅಳತೆ. ಇಲ್ಲಿ ಉದ್ದೇಶಿಸಲಾಗಿರುವುದು ಪ್ರವಾದಿಯವರು ಬಳಸುತ್ತಿದ್ದ ಸಾಅ್. ಅಂದರೆ, 480 ಮಿಸ್ಕಾಲ್ ಉತ್ತಮ ಜಾತಿಯ ಗೋಧಿ. ಲೀಟರ್ ಅಳತೆಯಲ್ಲಿ 3 ಲೀಟರ್.

ಮುದ್ದ್ ಎಂದರೆ ಧಾರ್ಮಿಕವಾಗಿ ಬಳಸುವ ಒಂದು ಅಳತೆ. ಇದು ಒಬ್ಬ ಸಾಮಾನ್ಯ ಗಾತ್ರದ ವ್ಯಕ್ತಿ ತನ್ನ ಎರಡು ಅಂಗೈಗಳನ್ನು ಜೋಡಿಸಿದರೆ ತುಂಬುವಷ್ಟು ಪ್ರಮಾಣ. ಕರ್ಮಶಾಸ್ತ್ರಜ್ಞರ ಸರ್ವಾನುಮತದ ಅಂಗೀಕಾರದಂತೆ ಒಂದು ಮುದ್ದ್ ಎಂದರೆ ಸಾಅ್ ನ ಕಾಲು ಭಾಗ. ಅಂದರೆ ಸುಮಾರು 750 ಮಿ.ಲೀ.

التصنيفات

Recommended Acts and Manners of Ablution