ನಿಶ್ಚಯವಾಗಿಯೂ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವವರು (ಮುಸ್ಲಿಮರು) ತನ್ನನ್ನು ಆರಾಧಿಸುವರು ಎಂಬ ಬಗ್ಗೆ…

ನಿಶ್ಚಯವಾಗಿಯೂ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವವರು (ಮುಸ್ಲಿಮರು) ತನ್ನನ್ನು ಆರಾಧಿಸುವರು ಎಂಬ ಬಗ್ಗೆ ಶೈತಾನನು ನಿರಾಶನಾಗಿದ್ದಾನೆ. ಆದರೆ, ಅವರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವೆನು ಎಂಬುದರ ಬಗ್ಗೆ ಅವನು ನಿರಾಶನಾಗಿಲ್ಲ

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಶ್ಚಯವಾಗಿಯೂ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವವರು (ಮುಸ್ಲಿಮರು) ತನ್ನನ್ನು ಆರಾಧಿಸುವರು ಎಂಬ ಬಗ್ಗೆ ಶೈತಾನನು ನಿರಾಶನಾಗಿದ್ದಾನೆ. ಆದರೆ, ಅವರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವೆನು ಎಂಬುದರ ಬಗ್ಗೆ ಅವನು ನಿರಾಶನಾಗಿಲ್ಲ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವ ಸತ್ಯವಿಶ್ವಾಸಿಗಳು ತನ್ನನ್ನು ಆರಾಧಿಸಲು ಮತ್ತು ವಿಗ್ರಹಗಳಿಗೆ ಸಾಷ್ಟಾಂಗ ಮಾಡಲು ಮರಳಿ ಬರುವರೆಂಬ ಬಗ್ಗೆ ಇಬ್ಲೀಸನು ನಿರಾಶನಾಗಿದ್ದಾನೆ. ಆದರೆ, ಆವನು ನಿರೀಕ್ಷೆಯನ್ನು ಕಳೆದುಕೊಂಡಿಲ್ಲ. ವಿವಾದಗಳು, ದ್ವೇಷ, ಯುದ್ಧಗಳು, ಗೊಂದಲಗಳು ಮುಂತಾದವುಗಳ ಮೂಲಕ ಅವರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವುದರಲ್ಲಿ ಅವನು ತನ್ನ ಪ್ರಯತ್ನ, ಶ್ರಮ ಮತ್ತು ಹೋರಾಟವನ್ನು ಕೈಬಿಟ್ಟಿಲ್ಲ.

فوائد الحديث

ಶೈತಾನನನ್ನು ಪೂಜಿಸುವುದು ಎಂದರೆ ವಿಗ್ರಹಗಳನ್ನು ಪೂಜಿಸುವುದಾಗಿದೆ. ಏಕೆಂದರೆ, ಅದನ್ನು ಅವನೇ ಆಜ್ಞಾಪಿಸುತ್ತಾನೆ ಮತ್ತು ಅದಕ್ಕಾಗಿ ಕರೆಯುತ್ತಾನೆ. ಅಲ್ಲಾಹು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ರನ್ನು ಉಲ್ಲೇಖಿಸಿ ಹೇಳಿದ ಈ ವಚನ ಇದಕ್ಕೆ ಪುರಾವೆಯಾಗಿದೆ: "ಅಪ್ಪಾಜಿ! ಶೈತಾನನನ್ನು ಆರಾಧಿಸಬೇಡಿ...”

ಮುಸ್ಲಿಮರ ನಡುವೆ ವಿವಾದಗಳು, ದ್ವೇಷ, ಯುದ್ಧಗಳು ಮತ್ತು ಗೊಂದಲಗಳನ್ನು ಪ್ರಚೋದಿಸಲು ಶೈತಾನನು ಪ್ರಯತ್ನಿಸುತ್ತಾನೆ.

ಇಸ್ಲಾಮಿನಲ್ಲಿ ನಮಾಝ್‌ನ ಪ್ರಯೋಜನಗಳಲ್ಲಿ ಒಂದು ಏನೆಂದರೆ, ಅದು ಮುಸ್ಲಿಮರ ನಡುವೆ ಪ್ರೀತಿಯನ್ನು ಕಾಪಾಡುತ್ತದೆ ಮತ್ತು ಅವರ ನಡುವೆ ಭ್ರಾತೃತ್ವದ ಬಾಂಧವ್ಯವನ್ನು ಬಲಪಡಿಸುತ್ತದೆ.

ಎರಡು ಸಾಕ್ಷ್ಯವಚನಗಳ ನಂತರ ನಮಾಝ್ ಧರ್ಮದ ಶ್ರೇಷ್ಠ ಚಿಹ್ನೆಯಾಗಿದೆ. ಈ ಕಾರಣದಿಂದಲೇ ಇಲ್ಲಿ ಮುಸ್ಲಿಮರನ್ನು "ಮುಸಲ್ಲೀನ್" (ನಮಾಝ್ ಮಾಡುವವರು) ಎಂದು ಕರೆಯಲಾಗಿದೆ.

ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಇತರ ದೇಶಗಳಿಗಿಲ್ಲದ ವಿಶಿಷ್ಟ ಗುಣಲಕ್ಷಣಗಳಿವೆ.

“ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವವರು ತನ್ನನ್ನು ಆರಾಧಿಸುವರೆಂಬ ಬಗ್ಗೆ ಶೈತಾನನು ನಿರಾಶನಾಗಿದ್ದಾನೆ" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದರೂ ಸಹ, ಅರೇಬಿಯನ್ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ವಿಗ್ರಹ ಪೂಜೆ ನಡೆಯುತ್ತಿದೆಯಲ್ಲವೇ ಎಂದು ಯಾರಾದರೂ ಕೇಳಿದರೆ ಅದಕ್ಕಿರುವ ಉತ್ತರವು: ಇದು ಮುಸ್ಲಿಮರು ನಿರಂತರ ವಿಜಯ ಗಳಿಸುವುದನ್ನು ಮತ್ತು ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ಕಂಡಾಗ ಶೈತಾನನ ಮನದಲ್ಲಿ ಮೂಡಿದ ನಿರಾಶೆಯನ್ನು ವ್ಯಕ್ತಪಡಿಸುತ್ತದೆ. ಈ ಹದೀಸ್ ಶೈತಾನನ ಊಹೆ ಮತ್ತು ನಿರೀಕ್ಷೆಯ ಬಗ್ಗೆ ತಿಳಿಸುತ್ತದೆ. ನಂತರ, ಅಲ್ಲಾಹನ ಯುಕ್ತಿ ಮತ್ತು ವಿವೇಚನೆಗೆ ಅನುಗುಣವಾಗಿ ನಿಜಸ್ಥಿತಿಯು ಇದಕ್ಕೆ ವಿರುದ್ಧವಾಗಿ ಸಂಭವಿಸಿದೆ.

التصنيفات

Blameworthy Morals