إعدادات العرض
ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ…
ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದಕ್ಕೆ ಕಾರಣವೇನು?” ಅವರು ಉತ್ತರಿಸಿದರು: "ನೀವು ಹೆಚ್ಚುಹೆಚ್ಚಾಗಿ ಶಪಿಸುತ್ತೀರಿ ಮತ್ತು ನಿಮ್ಮ ಗಂಡನಿಗೆ ಕೃತಘ್ನರಾಗುತ್ತೀರಿ. ಬುದ್ಧಿ ಮತ್ತು ಧರ್ಮದಲ್ಲಿ ನಿಮಗಿಂತಲೂ ಹೆಚ್ಚು ಕೊರತೆಯಿರುವವರನ್ನು ನಾನು ನೋಡಿಲ್ಲ. ಆದರೂ ನೀವು ದೃಢಮನಸ್ಸಿನ ಪುರುಷನ ಬುದ್ಧಿಯನ್ನು ಕದಡಬಲ್ಲಿರಿ
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದುಲ್ ಅದ್‌ಹಾ ಅಥವಾ ಈದುಲ್ ಫಿತ್ರ್ ಹಬ್ಬದ ದಿನದಂದು ಈದ್‌ಗಾಹ್‌ಗೆ ಹೊರಟರು. ನಂತರ ಮಹಿಳೆಯರ ಬಳಿಗೆ ಹೋಗಿ ಹೇಳಿದರು: "ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದಕ್ಕೆ ಕಾರಣವೇನು?” ಅವರು ಉತ್ತರಿಸಿದರು: "ನೀವು ಹೆಚ್ಚುಹೆಚ್ಚಾಗಿ ಶಪಿಸುತ್ತೀರಿ ಮತ್ತು ನಿಮ್ಮ ಗಂಡನಿಗೆ ಕೃತಘ್ನರಾಗುತ್ತೀರಿ. ಬುದ್ಧಿ ಮತ್ತು ಧರ್ಮದಲ್ಲಿ ನಿಮಗಿಂತಲೂ ಹೆಚ್ಚು ಕೊರತೆಯಿರುವವರನ್ನು ನಾನು ನೋಡಿಲ್ಲ. ಆದರೂ ನೀವು ದೃಢಮನಸ್ಸಿನ ಪುರುಷನ ಬುದ್ಧಿಯನ್ನು ಕದಡಬಲ್ಲಿರಿ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನಮ್ಮ ಧರ್ಮ ಮತ್ತು ಬುದ್ಧಿಗಳಲ್ಲಿನ ಕೊರತೆಯೇನು?” ಅವರು ಉತ್ತರಿಸಿದರು: "ಮಹಿಳೆಯ ಸಾಕ್ಷ್ಯವು ಪುರುಷನ ಸಾಕ್ಷ್ಯದ ಅರ್ಧದಷ್ಟಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಬುದ್ಧಿಯ ಕೊರತೆಯಿಂದಾಗಿದೆ. ಅವಳು ಮುಟ್ಟಾದಾಗ ನಮಾಝ್ ಮತ್ತು ಉಪವಾಸವನ್ನು ಬಿಟ್ಟುಬಿಡುವುದಿಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಧರ್ಮದ ಕೊರತೆಯಿಂದಾಗಿದೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português සිංහල Nederlands Tiếng Việt অসমীয়া ગુજરાતી Kiswahili پښتو മലയാളം नेपाली Magyar ქართული తెలుగు Македонски Svenska Moore Română Українська ไทย मराठी ਪੰਜਾਬੀ دری አማርኛ Wolof ភាសាខ្មែរالشرح
ಒಮ್ಮೆ ಈದ್ ಹಬ್ಬದ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದ್‌ಗಾಹ್‌ಗೆ ಹೊರಟರು. ಅವರು ಮಹಿಳೆಯರಿಗೆ ವಿಶೇಷವಾಗಿ ಉಪದೇಶ ನೀಡುವೆನೆಂದು ವಾಗ್ದಾನ ಮಾಡಿದ್ದರು. ಆದ್ದರಿಂದ ಅವರು ಆ ದಿನ ಆ ವಾಗ್ದಾನವನ್ನು ಪೂರೈಸುತ್ತಾ ಹೇಳಿದರು: ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ, ಮತ್ತು ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುವುದನ್ನು ಹೆಚ್ಚಿಸಿರಿ. ಏಕೆಂದರೆ ಅವು ಪಾಪಗಳನ್ನು ನಿವಾರಿಸುವ ಬಹುದೊಡ್ಡ ಸಾಧನಗಳಾಗಿವೆ. ಏಕೆಂದರೆ, ನಾನು ಇಸ್ರಾದ ರಾತ್ರಿಯಲ್ಲಿ ನರಕವಾಸಿಗಳಲ್ಲಿ ನಿಮ್ಮನ್ನೇ ಹೆಚ್ಚಾಗಿ ನೋಡಿದ್ದೇನೆ. ಆಗ ಅವರಲ್ಲಿದ್ದ ಬುದ್ಧಿವಂತೆ, ವಿಚಾರವಂತೆ ಮತ್ತು ಗಾಂಭೀರ್ಯವುಳ್ಳ ಮಹಿಳೆ ಕೇಳಿದಳು: ಓ ಅಲ್ಲಾಹನ ಸಂದೇಶವಾಹಕರೇ, ನಾವೇ ನರಕವಾಸಿಗಳಲ್ಲಿ ಹೆಚ್ಚಾಗಿರಲು ಕಾರಣವೇನು? ಅವರು ಉತ್ತರಿಸಿದರು: “ಅದಕ್ಕೆ ಕೆಲವು ಕಾರಣಗಳಿವೆ: ನೀವು ಶಾಪ ಮತ್ತು ನಿಂದನೆಯನ್ನು ಹೆಚ್ಚಿಸುತ್ತೀರಿ, ಮತ್ತು ಗಂಡನ ಹಕ್ಕನ್ನು ನಿಷೇಧಿಸುತ್ತೀರಿ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಈ ರೀತಿ ವರ್ಣಿಸಿದರು: ಮಹಿಳೆಯರಿಗೆ ಬುದ್ಧಿ ಮತ್ತು ಧರ್ಮದಲ್ಲಿ ಕೊರತೆಯಿದ್ದರೂ ಸಹ, ಅವರು ಒಬ್ಬ ಬುದ್ಧಿವಂತ, ವಿಚಾರಶೀಲ, ದೃಢಸಂಕಲ್ಪದ ಮತ್ತು ತನ್ನ ವಿಷಯವನ್ನು ನಿಯಂತ್ರಿಸಬಲ್ಲ ಪುರುಷನನ್ನು ಸೋಲಿಸುವಷ್ಟು ಪ್ರಬಲರಾಗಿದ್ದಾರೆ. ಅವಳು ಕೇಳಿದಳು: “ಓ ಅಲ್ಲಾಹನ ಸಂದೇಶವಾಹಕರೇ! ಬುದ್ಧಿ ಮತ್ತು ಧರ್ಮದ ಕೊರತೆ ಎಂದರೆ ಏನು?” ಅವರು ಉತ್ತರಿಸಿದರು: “ಬುದ್ಧಿಯ ಕೊರತೆಯೆಂದರೆ ಇಬ್ಬರು ಮಹಿಳೆಯರ ಸಾಕ್ಷ್ಯವು ಒಬ್ಬ ಪುರುಷನ ಸಾಕ್ಷ್ಯಕ್ಕೆ ಸಮಾನವಾಗಿದೆ. ಇದು ಬುದ್ಧಿಯ ಕೊರತೆಯಾಗಿದೆ. ಧರ್ಮದ ಕೊರತೆಯೆಂದರೆ ಸತ್ಕರ್ಮಗಳಲ್ಲಿನ ಕೊರತೆಯಾಗಿದೆ. ಏಕೆಂದರೆ ಮಹಿಳೆಯರು ಮುಟ್ಟಿನ ಕಾರಣದಿಂದ ಅನೇಕ ರಾತ್ರಿ ಮತ್ತು ಹಗಲುಗಳನ್ನು ನಮಾಝ್ ಮಾಡದೆ ಮತ್ತು ರಮದಾನ್ ತಿಂಗಳ ದಿನಗಳಾದರೆ ಉಪವಾಸ ಆಚರಿಸದೆ ಕಳೆಯುತ್ತಾರೆ. ಇದು ಧರ್ಮದ ಕೊರತೆಯಾಗಿದೆ. ಆದರೆ, ಈ ಕಾರಣಕ್ಕಾಗಿ ಅವರನ್ನು ದೂಷಿಸಲಾಗುವುದಿಲ್ಲ ಅಥವಾ ಶಿಕ್ಷಿಸಲಾಗುವುದಿಲ್ಲ. ಏಕೆಂದರೆ ಅದು ಅವರ ಸೃಷ್ಟಿಯ ಮೂಲವಾಗಿದೆ. ಉದಾಹರಣೆಗೆ, ಮನುಷ್ಯನು ಹಣವನ್ನು ಪ್ರೀತಿಸುವವನಾಗಿ, ತನ್ನ ಕೆಲಸಕಾರ್ಯಗಳಲ್ಲಿ ಆತುರಪಡುವವನಾಗಿ ಮತ್ತು ಅಜ್ಞಾನಿಯಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಆದ್ದರಿಂದ ಇವುಗಳಿಂದ ವಂಚಿತರಾಗದಿರುವುದಕ್ಕಾಗಿ ಇವುಗಳ ಬಗ್ಗೆ ಎಚ್ಚರಿಸಲು ಇದನ್ನು ತಿಳಿಸಲಾಗಿದೆ.فوائد الحديث
ಮಹಿಳೆಯರು ಈದ್ ನಮಾಝ್‌ಗೆ ಹೋಗುವುದು ಮತ್ತು ಅವರಿಗೆ ವಿಶೇಷವಾಗಿ ಉಪದೇಶ ನೀಡುವುದು ಅಪೇಕ್ಷಣೀಯವಾಗಿದೆ.
ಗಂಡನಿಗೆ ಕೃತಘ್ನತೆ ತೋರುವುದು ಮತ್ತು ಹೆಚ್ಚುಹೆಚ್ಚಾಗಿ ಶಪಿಸುವುದು ಮಹಾಪಾಪಗಳಾಗಿವೆ. ಏಕೆಂದರೆ, ನರಕ ಶಿಕ್ಷೆಯ ಬೆದರಿಕೆ ನೀಡಿರುವುದು ಆ ಪಾಪವು ಮಹಾಪಾಪವಾಗಿದೆಯೆಂದು ಸೂಚಿಸುತ್ತದೆ.
ಇದರಲ್ಲಿ ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ ಎಂದು ವಿವರಿಸಲಾಗಿದೆ. ಯಾರು ತಮ್ಮ ಆರಾಧನೆಯನ್ನು ಹೆಚ್ಚಿಸುತ್ತಾರೋ ಅವರ ಈಮಾನ್ ಮತ್ತು ಧರ್ಮವು ಹೆಚ್ಚಾಗುತ್ತದೆ. ಯಾರು ತಮ್ಮ ಆರಾಧನೆಯನ್ನು ಕಡಿಮೆ ಮಾಡುತ್ತಾರೋ ಅವರ ಧರ್ಮವು ಕಡಿಮೆಯಾಗುತ್ತದೆ.
ನವವಿ ಹೇಳಿದರು: “ಬುದ್ಧಿಯಲ್ಲಿ ಏರಿಳಿತ ಉಂಟಾಗುತ್ತದೆ. ಹಾಗೆಯೇ ಈಮಾನ್‌ನಲ್ಲಿಯೂ ಸಹ. ಮಹಿಳೆಯರಲ್ಲಿನ ಕೊರತೆಯನ್ನು ಉಲ್ಲೇಖಿಸಿರುವುದು ಅವರನ್ನು ದೂಷಿಸುವುದಕ್ಕಲ್ಲ. ಏಕೆಂದರೆ ಅದು ಸೃಷ್ಟಿಯ ಮೂಲವಾಗಿದೆ. ಬದಲಿಗೆ, ಅವರು ಅವುಗಳಿಂದ ವಂಚಿತರಾಗದಿರುವುದಕ್ಕಾಗಿ ಅವುಗಳ ಬಗ್ಗೆ ಎಚ್ಚರಿಸಲು ಇದನ್ನು ತಿಳಿಸಲಾಗಿದೆ. ಆದ್ದರಿಂದಲೇ, ನರಕದ ಶಿಕ್ಷೆಯನ್ನು ಕೃತಘ್ನತೆ ಮತ್ತು ಇತರ ವಿಷಯಗಳಿಗೆ ಜೋಡಿಸಲಾಗಿದೆಯೇ ಹೊರತು ಕೊರತೆಗೆ ಜೋಡಿಸಲಾಗಿಲ್ಲ. ಧರ್ಮದ ಕೊರತೆಯು ಪಾಪಕ್ಕೆ ಕಾರಣವಾಗುವ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅದು ಅದಕ್ಕಿಂತಲೂ ವಿಶಾಲವಾಗಿದೆ.”
ಮಾತು ಸರಿಯಾಗಿ ಅರ್ಥವಾಗದಿದ್ದರೆ, ವಿದ್ಯಾರ್ಥಿ ಗುರುವನ್ನು ಮತ್ತು ಅನುಯಾಯಿ ಮುಖಂಡನನ್ನು ಪ್ರಶ್ನಿಸಬಹುದೆಂದು ಇದರಲ್ಲಿ ಸೂಚನೆಯಿದೆ.
ಮಹಿಳೆಯ ಸಾಕ್ಷ್ಯವು ಪುರುಷನ ಸಾಕ್ಷ್ಯದ ಅರ್ಧದಷ್ಟು ಎಂದು ಇಲ್ಲಿ ತಿಳಿಸಲಾಗಿದೆ. ಇದಕ್ಕೆ ಕಾರಣ ಅವರ ಜ್ಞಾಪಕದ ಕೊರತೆಯಾಗಿದೆ.
“... ಕೊರತೆಯಿರುವವರನ್ನು ನಾನು ನೋಡಿಲ್ಲ…” ಎಂಬ ಮಾತನ್ನು ವಿವರಿಸುತ್ತಾ ಇಬ್ನ್ ಹಜರ್ ಹೇಳಿದರು: "ನನಗೆ ಕಂಡುಬರುವಂತೆ, ಅದು ಅವರು ನರಕವಾಸಿಗಳಲ್ಲಿ ಹೆಚ್ಚಾಗುವುದಕ್ಕಿರುವ ಕಾರಣಗಳಲ್ಲಿ ಒಂದಾಗಿರಬಹುದು. ಏಕೆಂದರೆ, ಅವರು ದೃಢಸಂಕಲ್ಪದ ಪುರುಷನ ಬುದ್ಧಿಯನ್ನು ಕದಡಿ, ಅವನು ಮಾಡಬಾರದ್ದನ್ನು ಮಾಡಲು ಅಥವಾ ಹೇಳಲು ಕಾರಣವಾದರೆ, ಅವರು ಕೂಡ ಅವನ ಪಾಪದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮ ಪಾಪವನ್ನು ಹೆಚ್ಚಿಸುತ್ತಾರೆ."
ಮುಟ್ಟಿನ ಸಮಯದಲ್ಲಿ ಮತ್ತು ಹೆರಿಗೆಯಾಗಿ ರಕ್ತ ನಿಲ್ಲುವ ತನಕ ಮಹಿಳೆಯರಿಗೆ ನಮಾಝ್ ಮತ್ತು ಉಪವಾಸವು ನಿಷಿದ್ಧವಾಗಿದೆ. ನಂತರ ಅವರು ಶುದ್ಧರಾದ ನಂತರ ಕೇವಲ ಉಪವಾಸವನ್ನು ಮಾತ್ರ ನಿರ್ವಹಿಸಿದರೆ ಸಾಕು.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಗುಣವನ್ನು ತಿಳಿಸಲಾಗಿದೆ. ಏಕೆಂದರೆ, ಅವರು ಮಹಿಳೆಯರ ಪ್ರಶ್ನೆಗಳಿಗೆ ಅವಹೇಳನ ಅಥವಾ ದೂಷಣೆಯಿಲ್ಲದ ತಾಳ್ಮೆಯಿಂದ ಉತ್ತರಿಸಿದ್ದಾರೆ.
ಇಬ್ನ್ ಹಜರ್ ಹೇಳಿದರು: “ದಾನವು ಶಿಕ್ಷೆಯನ್ನು ತಡೆಗಟ್ಟುತ್ತದೆ. ಅದು ಸೃಷ್ಟಿಗಳ ನಡುವಿನ ಪಾಪಗಳನ್ನು ನಿವಾರಿಸುತ್ತದೆ."
ನವವಿ ಹೇಳಿದರು: “ಮಹಿಳೆಯರಲ್ಲಿ ಧರ್ಮದ ಕೊರತೆಗೆ ಅವರು ಮುಟ್ಟಿನ ಸಮಯದಲ್ಲಿ ನಮಾಝ್ ಮತ್ತು ಉಪವಾಸವನ್ನು ಬಿಟ್ಟುಬಿಡುವುದು ಕಾರಣವಾಗಿದೆ. ಯಾರು ತಮ್ಮ ಆರಾಧನೆಯನ್ನು ಹೆಚ್ಚಿಸುತ್ತಾರೋ ಅವರ ಈಮಾನ್ ಮತ್ತು ಧರ್ಮವು ಹೆಚ್ಚಾಗುತ್ತದೆ. ಯಾರು ತಮ್ಮ ಆರಾಧನೆಯನ್ನು ಕಡಿಮೆ ಮಾಡುತ್ತಾರೋ ಅವರ ಧರ್ಮವು ಕಡಿಮೆಯಾಗುತ್ತದೆ. ಕೆಲವೊಮ್ಮೆ ಧರ್ಮದ ಕೊರತೆಯು ಪಾಪಕ್ಕೆ ಕಾರಣವಾಗುವ ರೀತಿಯಲ್ಲಿರಬಹುದು. ಉದಾಹರಣೆಗೆ ಕೆಲವು ಮಹಿಳೆಯರು ಯಾವುದೇ ಸ್ಪಷ್ಟ ಕಾರಣಗಳಿಲ್ಲದೆ ನಮಾಝ್, ಉಪವಾಸ ಅಥವಾ ಇತರ ಕಡ್ಡಾಯ ಆರಾಧನೆಗಳನ್ನು ಬಿಟ್ಟುಬಿಡುತ್ತಾರೆ. ಕೆಲವೊಮ್ಮೆ ಅದು ಯಾವುದೇ ಪಾಪವಿಲ್ಲದ ರೀತಿಯಲ್ಲಿರಬಹುದು. ಉದಾಹರಣೆಗೆ ಕೆಲವು ಮಹಿಳೆಯರು ತಮಗೆ ಕಡ್ಡಾಯವಲ್ಲದಿದ್ದರೂ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಜುಮಾ ನಮಾಝ್‌ಗೆ ಅಥವಾ ಯುದ್ಧಕ್ಕೆ ಹೋಗುವುದನ್ನು ಬಿಟ್ಟುಬಿಡುತ್ತಾರೆ. ಕೆಲವೊಮ್ಮೆ ಅದು ಅವಳಿಗೆ ಕಡ್ಡಾಯವಾಗಿರುವ ರೀತಿಯಲ್ಲಿರಬಹುದು. ಉದಾಹರಣೆಗೆ ಮುಟ್ಟಾದ ಮಹಿಳೆ ನಮಾಝ್ ಮತ್ತು ಉಪವಾಸವನ್ನು ಬಿಟ್ಟುಬಿಡುತ್ತಾಳೆ."