ಯಾರು ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಾರೋ, ಅವರನ್ನು…

ಯಾರು ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಾರೋ, ಅವರನ್ನು ಅಲ್ಲಾಹು ನರಕದಿಂದ ರಕ್ಷಿಸುತ್ತಾನೆ

ಪ್ರವಾದಿ ಪತ್ನಿ ಉಮ್ಮು ಹಬೀಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಾರೋ, ಅವರನ್ನು ಅಲ್ಲಾಹು ನರಕದಿಂದ ರಕ್ಷಿಸುತ್ತಾನೆ."

[صحيح] [رواه أبو داود والترمذي والنسائي وابن ماجه وأحمد]

الشرح

ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ಐಚ್ಛಿಕ ನಮಾಝ್‌ಗಳನ್ನು ತಪ್ಪದೆ ನಿರ್ವಹಿಸುವವರಿಗೆ, ಅವರನ್ನು ಅಲ್ಲಾಹು ನರಕದಿಂದ ರಕ್ಷಿಸುತ್ತಾನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಭಸುದ್ದಿ ನೀಡಿದ್ದಾರೆ.

فوائد الحديث

ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ.

ರವಾತಿಬ್ ಕಬ್ಲಿಯ್ಯ - ಅಂದರೆ ಕಡ್ಡಾಯ ನಮಾಝ್‌ಗೆ ಮೊದಲು ನಿರ್ವಹಿಸುವ ಐಚ್ಛಿಕ ನಮಾಝ್‌ಗಳು - ನಿರ್ವಹಿಸುವುದರಲ್ಲಿ ಕೆಲವು ಯುಕ್ತಿಗಳಿವೆ. ಅದರಲ್ಲೊಂದು ಏನೆಂದರೆ: ಕಡ್ಡಾಯ ನಮಾಝ್‌ಗೆ ಪ್ರವೇಶಿಸುವ ಮೊದಲು ನಮಾಝ್ ಮಾಡುವವರ ಮನಸ್ಸನ್ನು ಆರಾಧನೆಗೆ ಸಿದ್ಧಪಡಿಸುವುದು. ರವಾತಿಬ್ ಬಅದಿಯ್ಯ (ಕಡ್ಡಾಯ ನಮಾಝ್‌ನ ನಂತರ ನಿರ್ವಹಿಸುವ ಐಚ್ಛಿಕ ನಮಾಝ್‌ಗಳು) ನಿರ್ವಹಿಸುವುದರಲ್ಲಿರುವ ಯುಕ್ತಿಯೇನೆಂದರೆ, ಅದು ಕಡ್ಡಾಯ ನಮಾಝ್‌ನಲ್ಲಿ ಸಂಭವಿಸಿದ ನ್ಯೂನತೆಗಳನ್ನು ಸರಿಪಡಿಸುತ್ತದೆ.

ರವಾತಿಬ್‌ ನಮಾಝ್‌ಗಳಿಗೆ ಮಹಾನ್ ಪ್ರಯೋಜನಗಳಿವೆ: ಸತ್ಕರ್ಮಗಳನ್ನು ಹೆಚ್ಚಿಸುವುದು, ಪಾಪಗಳನ್ನು ಮನ್ನಿಸುವುದು, ಮತ್ತು ದರ್ಜೆಗಳನ್ನು ಏರಿಸುವುದು.

ಈ ಹದೀಸಿನಂತೆ ಭರವಸೆ ನೀಡುವ ಹದೀಸುಗಳ ವಿಷಯದಲ್ಲಿ ಅಹ್ಲುಸ್ಸುನ್ನತ್‌ನ ನಿಯಮವೇನೆಂದರೆ: ಇವು ತೌಹೀದ್‌ನಲ್ಲಿ ಮರಣ ಹೊಂದುವವರಿಗೆ ಮಾತ್ರ ಅನ್ವಯವಾಗುತ್ತವೆ. ಇದರ ಅರ್ಥವು ಅವರು ನರಕದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದಾಗಿದೆ. ಏಕೆಂದರೆ ತೌಹೀದ್‌ನಲ್ಲಿದ್ದು ಪಾಪಗಳನ್ನು ಮಾಡುವವರು ಶಿಕ್ಷೆಗೆ ಅರ್ಹರಾಗುತ್ತಾರೆ. ಆದರೆ ಅವರಿಗೆ ಶಿಕ್ಷೆಯಾದರೂ ಕೂಡ ಅವರು ನರಕದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ.

التصنيفات

Regular Sunnah (Recommended) Prayers