ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ…

ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ ಕೇಳಿದನು: "ರಾತ್ರಿ ನಮಾಝ್‌ನ ಬಗ್ಗೆ ನೀವೇನು ಹೇಳುತ್ತೀರಿ?". ಅವರು (ಪ್ರವಾದಿ) ಹೇಳಿದರು: "(ಅದು) ಎರಡೆರಡು ರಕಅತ್‌ಗಳು

ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ ಕೇಳಿದನು: "ರಾತ್ರಿ ನಮಾಝ್‌ನ ಬಗ್ಗೆ ನೀವೇನು ಹೇಳುತ್ತೀರಿ?". ಅವರು (ಪ್ರವಾದಿ) ಹೇಳಿದರು: "(ಅದು) ಎರಡೆರಡು ರಕಅತ್‌ಗಳು. ಬೆಳಗಾಗುವುದೆಂದು (ಫಜ್ರ್ ನಮಾಝಿನ ಸಮಯವಾಗುವುದೆಂದು) ಭಯವಾದರೆ, ಒಂದು ರಕಅತ್ ನಿರ್ವಹಿಸಬೇಕು. ಅದು ಅದಕ್ಕೂ ಮುನ್ನ ನಿರ್ವಹಿಸಿದ ನಮಾಝ್ ಅನ್ನು 'ವಿತ್ರ್' (ಬೆಸ ಸಂಖ್ಯೆ) ಗೊಳಿಸುತ್ತದೆ". ಅವರು (ಇಬ್ನ್ ಉಮರ್) ಹೇಳುತ್ತಿದ್ದರು: "ನಿಮ್ಮ (ರಾತ್ರಿಯ) ನಮಾಝ್‌ನ ಕೊನೆಯದನ್ನು ವಿತ್ರ್ ಗೊಳಿಸಿರಿ". ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಆದೇಶಿಸಿದ್ದಾರೆ.

[صحيح] [متفق عليه]

الشرح

ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಮೇಲೆ ಪ್ರವಚನ ನೀಡುತ್ತಿರುವಾಗ ಕೇಳಿದನು: ಓ ಅಲ್ಲಾಹನ ಸಂದೇಶವಾಹಕರೇ, ರಾತ್ರಿ ನಮಾಝ್ ಮಾಡುವುದು ಹೇಗೆಂದು ನನಗೆ ಕಲಿಸಿಕೊಡಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ನಮಾಝ್ ಮಾಡು ಮತ್ತು ಪ್ರತಿ ಎರಡು ರಕಅತ್‌ಗಳಿಗೆ ಸಲಾಮ್ ಹೇಳಿ (ಮುಗಿಸು). ಬೆಳಗಾಗುವುದೆಂದು (ಫಜ್ರ್ ಸಮಯವಾಗುವುದೆಂದು) ನಿನಗೆ ಭಯವಾದರೆ, ಒಂದು ರಕಅತ್ ನಿರ್ವಹಿಸು, ಅದು ನೀನು ನಿರ್ವಹಿಸಿದ ನಮಾಝ್ ಅನ್ನು ನಿನಗಾಗಿ ವಿತ್ರ್ (ಬೆಸ) ಗೊಳಿಸುತ್ತದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಮಾಝ್‌ನ ಕೊನೆಯ ಭಾಗವನ್ನು ವಿತ್ರ್ ಗೊಳಿಸುವಂತೆ ಉಪದೇಶಿಸುತ್ತಿದ್ದರು.

فوائد الحديث

ರಾತ್ರಿ ನಮಾಝ್‌ನ ಮೂಲ ನಿಯಮವೇನೆಂದರೆ, ವಿತ್ರ್ ಹೊರತುಪಡಿಸಿ (ಉಳಿದ ನಮಾಝ್‌ಗಳಲ್ಲಿ) ಪ್ರತಿ ಎರಡು ರಕಅತ್‌ಗಳಿಗೆ ಸಲಾಮ್ ಹೇಳುವುದು.

ರಾತ್ರಿ ನಮಾಝ್‌ಗೆ ನಿರ್ದಿಷ್ಟ ಸಂಖ್ಯೆಯ ರಕಅತ್‌ಗಳಿಲ್ಲ. ಏಕೆಂದರೆ (ಹದೀಸ್‌ನಲ್ಲಿ) ಅದರ ಬಗ್ಗೆ ಅನಿರ್ಬಂಧಿತವಾಗಿ ಉಲ್ಲೇಖಿಸಲಾಗಿದೆ.

ಇಮಾಮ್ ನವವಿ ಹೇಳುತ್ತಾರೆ: "ರಾತ್ರಿ ಮತ್ತು ಹಗಲಿನ ನಮಾಝ್ ಎರಡೆರಡು (ರಕಅತ್‌ಗಳು)". ಈ ಹದೀಸ್ ಶ್ರೇಷ್ಠ ರೂಪವನ್ನು ವಿವರಿಸುತ್ತದೆ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕು. ಅಂದರೆ, ಪ್ರತಿ ಎರಡು ರಕಅತ್‌ಗಳಿಗೆ ಸಲಾಮ್ ಹೇಳುವುದು. ರಾತ್ರಿಯ ಮತ್ತು ಹಗಲಿನ ನಫಿಲ್ (ಐಚ್ಛಿಕ) ನಮಾಝ್‌ಗಳಲ್ಲಿ ಪ್ರತಿ ಎರಡು ರಕಅತ್‌ಗಳಿಗೆ ಸಲಾಮ್ ಹೇಳುವುದು ಅಪೇಕ್ಷಿತವಾಗಿದೆ.

ಇಮಾಮ್ ನವವಿ ಹೇಳುತ್ತಾರೆ: ವಿತ್ರ್ ಅನ್ನು ರಾತ್ರಿ ನಮಾಝ್‌ನ ಕೊನೆಯಲ್ಲಿ ಮಾಡುವುದು ಸುನ್ನತ್ ಆಗಿದೆ, ಮತ್ತು ಅದರ ಸಮಯವು ಫಜ್ರ್ ಉದಯಿಸುವುದರೊಂದಿಗೆ ಮುಗಿಯುತ್ತದೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ. ಇದು ನಮ್ಮ ಮಝ್‌ಹಬ್‌ನ (ಶಾಫಿಈ) ಪ್ರಸಿದ್ಧ ಅಭಿಪ್ರಾಯವಾಗಿದೆ ಮತ್ತು ಬಹುಪಾಲು ವಿದ್ವಾಂಸರು ಇದನ್ನೇ ಹೇಳಿದ್ದಾರೆ.

التصنيفات

Voluntary Night Prayer (Qiyaam)