ಒಬ್ಬ ವ್ಯಕ್ತಿ ಸಾಲಿನಲ್ಲಿ ಒಬ್ಬಂಟಿಯಾಗಿ ನಿಂತು ನಮಾಝ್ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು…

ಒಬ್ಬ ವ್ಯಕ್ತಿ ಸಾಲಿನಲ್ಲಿ ಒಬ್ಬಂಟಿಯಾಗಿ ನಿಂತು ನಮಾಝ್ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದರು. ಅವರು ಆತನಿಗೆ ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು

ವಾಬಿಸ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಒಬ್ಬ ವ್ಯಕ್ತಿ ಸಾಲಿನಲ್ಲಿ ಒಬ್ಬಂಟಿಯಾಗಿ ನಿಂತು ನಮಾಝ್ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದರು. ಅವರು ಆತನಿಗೆ ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು."

[حسن] [رواه أبو داود والترمذي وابن ماجه وأحمد]

الشرح

ಒಬ್ಬ ವ್ಯಕ್ತಿ ಸಾಲಿನ ಹಿಂದೆ ಒಬ್ಬಂಟಿಯಾಗಿ ನಮಾಝ್ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದರು. ಅವರು ಆತನಿಗೆ ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು. ಏಕೆಂದರೆ ಆತನ ನಮಾಝ್ ಈ ಸ್ಥಿತಿಯಲ್ಲಿ ಸಿಂಧುವಾಗುವುದಿಲ್ಲ.

فوائد الحديث

ಜಮಾಅತ್ ನಮಾಝ್‌ಗೆ ಬೇಗನೆ ಹೊರಡಲು ಮತ್ತು ಮುಂದಿನ ಸಾಲಿಗೆ ಹೋಗಲು ಪ್ರೋತ್ಸಾಹಿಸಲಾಗಿದೆ. ಸಾಲಿನ ಹಿಂದೆ ಒಬ್ಬಂಟಿಯಾಗಿ ನಮಾಝ್ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಇದರಿಂದ ನಮಾಝ್ ಅಸಿಂಧುವಾಗುವ ಅಪಾಯವಿದೆ.

ಇಬ್ನ್ ಹಜರ್ ಹೇಳಿದರು: ಒಬ್ಬ ವ್ಯಕ್ತಿಯು ಸಾಲಿನ ಹಿಂದೆ ಒಬ್ಬಂಟಿಯಾಗಿ ನಮಾಝ್ ಅನ್ನು ಪ್ರಾರಂಭಿಸಿ, ನಂತರ ಆತ ರುಕೂವಿನಿಂದ ಏಳುವ ಮೊದಲು ಬೇರೆ ಯಾರಾದರೂ ಸಾಲಿನಲ್ಲಿ ಪ್ರವೇಶಿಸಿದರೆ, ಆತ ಆ ನಮಾಝನ್ನು ಪುನರಾವರ್ತಿಸುವುದು ಕಡ್ಡಾಯವಲ್ಲ. ಅಬೂ ಬಕ್ರ، ರವರ ಹದೀಸಿನಲ್ಲಿ ಇದನ್ನು ಸೂಚಿಸಲಾಗಿದೆ. ಇಲ್ಲದಿದ್ದರೆ ವಾಬಿಸಾ ಅವರ ಹದೀಸಿನ ಸಾಮಾನ್ಯ ಅರ್ಥದ ಪ್ರಕಾರ ಆ ನಮಾಝನ್ನು ಪುನರಾವರ್ತಿಸುವುದು ಕಡ್ಡಾಯವಾಗುತ್ತದೆ.

التصنيفات

Rulings of the Imam and Followers in Prayer