ಯಾರಿಗೂ ಹತ್ತಕ್ಕಿಂತ ಹೆಚ್ಚು ಚಾಟಿಯೇಟುಗಳನ್ನು ನೀಡಬಾರದು. ಅಲ್ಲಾಹುವಿನ ಕಾನೂನುಗಳ ಉಲ್ಲಂಘನೆಯಲ್ಲಿ ವಿಧಿಸಲಾಗುವ ಶಿಕ್ಷೆಯ…

ಯಾರಿಗೂ ಹತ್ತಕ್ಕಿಂತ ಹೆಚ್ಚು ಚಾಟಿಯೇಟುಗಳನ್ನು ನೀಡಬಾರದು. ಅಲ್ಲಾಹುವಿನ ಕಾನೂನುಗಳ ಉಲ್ಲಂಘನೆಯಲ್ಲಿ ವಿಧಿಸಲಾಗುವ ಶಿಕ್ಷೆಯ ಹೊರತು

ಅಬೂ ಬುರ್ದಾ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಯಾರಿಗೂ ಹತ್ತಕ್ಕಿಂತ ಹೆಚ್ಚು ಚಾಟಿಯೇಟುಗಳನ್ನು ನೀಡಬಾರದು. ಅಲ್ಲಾಹುವಿನ ಕಾನೂನುಗಳ ಉಲ್ಲಂಘನೆಯಲ್ಲಿ ವಿಧಿಸಲಾಗುವ ಶಿಕ್ಷೆಯ ಹೊರತು."

[صحيح] [متفق عليه]

الشرح

ಒಬ್ಬನಿಗೆ ಹತ್ತು ಚಾಟಿಯೇಟುಗಳಿಗಿಂತ ಹೆಚ್ಚು ಹೊಡೆಯುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದು ಪಾಪಗಳಿಗಾಗಿ ವಿಧಿಸಲಾದ ಶಿಕ್ಷೆಯಲ್ಲದ ಹೊರತು. ಇಲ್ಲಿನ ಉದ್ದೇಶವು ಶರಿಯತ್‌ನಲ್ಲಿ ವಿಧಿಸಲಾದ ನಿರ್ದಿಷ್ಟ ಸಂಖ್ಯೆಯ ಚಾಟಿಯೇಟು ನೀಡುವುದು, ಹೊಡೆಯುವುದು ಅಥವಾ ನಿರ್ದಿಷ್ಟ ಶಿಕ್ಷೆಯನ್ನು ನಿಷೇಧಿಸುವುದಲ್ಲ. ಬದಲಿಗೆ ಶಿಸ್ತಿಗಾಗಿ ಹೊಡೆಯುವಾಗ ಹತ್ತು ಚಾಟಿಯೇಟಿಗಿಂತ ಹೆಚ್ಚಿಸಬಾರದು. ಉದಾಹರಣೆಗೆ ಹೆಂಡತಿ ಮತ್ತು ಮಕ್ಕಳಿಗೆ ಹೊಡೆಯುವುದು.

فوائد الحديث

ಸರ್ವಶಕ್ತನಾದ ಅಲ್ಲಾಹು ಆದೇಶಿಸಿದ ಅಥವಾ ನಿಷೇಧಿಸಿದ ಅವನ ಕಾನೂನುಗಳು ಉಲ್ಲಂಘನೆಯಾಗದಂತೆ ಅವುಗಳನ್ನು ತಡೆಯಲು ಶಿಕ್ಷೆಗಳಿವೆ. ಒಂದೋ ಅವುಗಳನ್ನು ಶರಿಯತ್‌ನಿಂದಲೇ ನಿರ್ಧರಿಸಲಾಗುತ್ತದೆ ಅಥವಾ ಆಡಳಿತಗಾರನು ಜನರ ಹಿತವನ್ನು ಆಧರಿಸಿ ನಿರ್ಧರಿಸುತ್ತಾನೆ.

ಶಿಸ್ತು ಕಲಿಸುವುದು ಮಾರ್ಗನಿರ್ದೇಶನ ಮತ್ತು ಭಯಪಡಿಸುವಿಕೆಯ ಪ್ರಮಾಣಕ್ಕೆ ತಕ್ಕಂತೆ ಲಘುವಾಗಿರಬೇಕು. ಅಗತ್ಯವಿದ್ದರೆ ಹತ್ತು ಚಾಟಿಯೇಟಿಗಿಂತ ಹೆಚ್ಚು ಹೊಡೆಯಬಾರದು. ಹೊಡೆಯದೆ ಶಿಸ್ತು ಕಲಿಸುವುದು ಹೆಚ್ಚು ಶ್ರೇಷ್ಠವಾಗಿದೆ. ಅಂದರೆ, ಮಾರ್ಗನಿರ್ದೇಶನ, ಶಿಕ್ಷಣ, ಸೂಚನೆ ಮತ್ತು ಪ್ರೋತ್ಸಾಹದ ಮೂಲಕ ಶಿಸ್ತು ಕಲಿಸಬೇಕು. ಏಕೆಂದರೆ ಅದು ಸ್ವೀಕಾರವಾಗಲು ಮತ್ತು ಶಿಕ್ಷಣದಲ್ಲಿ ಮೃದುತ್ವ ಇರಲು ಹೆಚ್ಚು ಕಾರಣವಾಗುತ್ತದೆ. ಈ ವಿಷಯದಲ್ಲಿ ಪರಿಸ್ಥಿತಿಗಳು ಬಹಳಷ್ಟು ಬದಲಾವಣೆಯಾಗುತ್ತವೆ. ಆದ್ದರಿಂದ ಹೆಚ್ಚು ಸೂಕ್ತವಾದದ್ದನ್ನು ಆರಿಸಬೇಕು.

التصنيفات

Rulings of Discretionary Punishments