“ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು…

“ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು ಅಲ್-ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸರ್ವಸ್ತುತಿ) ಅತಿಶ್ರೇಷ್ಠ ಪ್ರಾರ್ಥನೆಯಾಗಿದೆ.”

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು ಅಲ್-ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸರ್ವಸ್ತುತಿ) ಅತಿಶ್ರೇಷ್ಠ ಪ್ರಾರ್ಥನೆಯಾಗಿದೆ.”

[حسن] [رواه الترمذي والنسائي في الكبرى وابن ماجه]

الشرح

ಲಾಇಲಾಹ ಇಲ್ಲಲ್ಲಾಹ್ ಅತಿಶ್ರೇಷ್ಠ ಸ್ಮರಣೆ (ದಿಕ್ರ್) ಮತ್ತು ಅಲ್-ಹಮ್ದುಲಿಲ್ಲಾಹ್ ಅತಿಶ್ರೇಷ್ಠ ಪ್ರಾರ್ಥನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಲಾಇಲಾಹ ಇಲ್ಲಲ್ಲಾಹ್ ಎಂದರೆ ಆರಾಧನೆಗೆ ಅಲ್ಲಾಹು ಮಾತ್ರ ಅರ್ಹನು ಎಂದು ನಂಬುವುದು. ಅಲ್-ಹಮ್ದುಲ್ಲಿಲ್ಲಾಹ್ ಎಂದರೆ ಅಲ್ಲಾಹು ಮಾತ್ರ ಅನುಗ್ರಹದಾತನು ಮತ್ತು ಅವನು ಎಲ್ಲಾ ಸಂಪೂರ್ಣ ಮತ್ತು ಸುಂದರ ವರ್ಣನೆಗಳಿಗೆ ಅರ್ಹನಾಗಿದ್ದಾನೆ ಎಂದು ನಂಬುವುದು.

فوائد الحديث

ಲಾಇಲಾಹ ಇಲ್ಲಲ್ಲಾಹ್ ಎಂದು ಹೇಳುತ್ತಾ ಅಲ್ಲಾಹನನ್ನು ಸ್ಮರಿಸುವುದು ಮತ್ತು ಅಲ್-ಹಮ್ದುಲಿಲ್ಲಾಹ್ ಎಂದು ಅಲ್ಲಾಹನನ್ನು ಕರೆದು ಪ್ರಾರ್ಥಿಸುವುದನ್ನು ಹೆಚ್ಚಿಸಬೇಕೆಂಬ ಒತ್ತಾಯ ಈ ಹದೀಸಿನಲ್ಲಿದೆ.

التصنيفات

Timeless Dhikr