ಈ ಪ್ರಪಂಚವು ಸತ್ಯವಿಶ್ವಾಸಿಯ ಸೆರೆಮನೆಯಾಗಿದೆ ಮತ್ತು ಸತ್ಯನಿಷೇಧಿಯ ಸ್ವರ್ಗವಾಗಿದೆ

ಈ ಪ್ರಪಂಚವು ಸತ್ಯವಿಶ್ವಾಸಿಯ ಸೆರೆಮನೆಯಾಗಿದೆ ಮತ್ತು ಸತ್ಯನಿಷೇಧಿಯ ಸ್ವರ್ಗವಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ಪ್ರಪಂಚವು ಸತ್ಯವಿಶ್ವಾಸಿಯ ಸೆರೆಮನೆಯಾಗಿದೆ ಮತ್ತು ಸತ್ಯನಿಷೇಧಿಯ ಸ್ವರ್ಗವಾಗಿದೆ".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಈ ಲೌಕಿಕ ಜೀವನವು ಸತ್ಯವಿಶ್ವಾಸಿಗೆ ಒಂದು ಸೆರೆಮನೆಯಂತಿದೆ. ಏಕೆಂದರೆ ಅವನು ಶರೀಅತ್‌ನ (ಧಾರ್ಮಿಕ) ಹೊಣೆಗಾರಿಕೆಗಳಿಗೆ, ಅಂದರೆ ಆದೇಶಗಳನ್ನು ಪಾಲಿಸುವುದು ಮತ್ತು ನಿಷಿದ್ಧಗಳಿಂದ ದೂರವಿರುವುದಕ್ಕೆ, ಬದ್ಧನಾಗಿರುತ್ತಾನೆ. ಅವನು ಮರಣ ಹೊಂದಿದಾಗ, ಅವನು ಇದರಿಂದ ವಿಶ್ರಾಂತಿ ಪಡೆಯುತ್ತಾನೆ ಮತ್ತು ಸರ್ವೋನ್ನತನಾದ ಅಲ್ಲಾಹು ಅವನಿಗಾಗಿ ಸಿದ್ಧಪಡಿಸಿರುವ ಶಾಶ್ವತವಾದ ಅನುಗ್ರಹಗಳ ಕಡೆಗೆ ಸಾಗುತ್ತಾನೆ. ಮತ್ತು ಇದು (ಈ ಪ್ರಪಂಚ) ಸತ್ಯನಿಷೇಧಿಗೆ ಸ್ವರ್ಗದಂತಿದೆ. ಏಕೆಂದರೆ ಅವನು ಅದರಲ್ಲಿ ತನ್ನ ಮನಸ್ಸು ಬಯಸಿದ್ದನ್ನೆಲ್ಲಾ ಮತ್ತು ತನ್ನ ಇಚ್ಛೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತಾನೆ. ಅವನು ಮರಣ ಹೊಂದಿದಾಗ, ಅವನು (ಪುನರುತ್ಥಾನ) ದಿನದಂದು ಸರ್ವೋನ್ನತನಾದ ಅಲ್ಲಾಹು ಅವನಿಗಾಗಿ ಸಿದ್ಧಪಡಿಸಿರುವ ಶಾಶ್ವತವಾದ ಶಿಕ್ಷೆಯ ಕಡೆಗೆ ಸಾಗುತ್ತಾನೆ.

فوائد الحديث

ಇಮಾಮ್ ನವವಿ ಹೇಳುತ್ತಾರೆ: "ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ಈ ಪ್ರಪಂಚದಲ್ಲಿ ನಿಷಿದ್ಧ ಮತ್ತು ಅನಿಷ್ಟಕರ ಆಸೆಗಳಿಂದ ತಡೆಹಿಡಿಯಲ್ಪಟ್ಟಿದ್ದಾನೆ ಮತ್ತು ಸೆರೆಯಲ್ಲಿಡಲ್ಪಟ್ಟಿದ್ದಾನೆ. ಅವನು ಕಷ್ಟಕರವಾದ ವಿಧೇಯತೆಯ ಕರ್ಮಗಳನ್ನು ಮಾಡಲು ಹೊಣೆಗಾರನಾಗಿದ್ದಾನೆ. ಅವನು ಮರಣ ಹೊಂದಿದಾಗ, ಅವನು ಇದರಿಂದ ವಿಶ್ರಾಂತಿ ಪಡೆಯುತ್ತಾನೆ, ಮತ್ತು ಸರ್ವೋನ್ನತನಾದ ಅಲ್ಲಾಹು ಅವನಿಗಾಗಿ ಸಿದ್ಧಪಡಿಸಿರುವ ಶಾಶ್ವತವಾದ ಅನುಗ್ರಹ ಮತ್ತು ಕೊರತೆಯಿಲ್ಲದ ಪರಿಶುದ್ಧವಾದ ಆರಾಮದ ಕಡೆಗೆ ಸಾಗುತ್ತಾನೆ. ಆದರೆ ಸತ್ಯನಿಷೇಧಿಗೆ ಸಂಬಂಧಿಸಿದಂತೆ, ಅವನಿಗೆ ಈ ಪ್ರಪಂಚದಲ್ಲಿ ಸಿಕ್ಕಿದ ಸುಖ-ಸಂತೋಷ ಮಾತ್ರವಿದೆ. ಅದು ಅಲ್ಪ ಮತ್ತು ತೊಂದರೆಗಳಿಂದ ಕೂಡಿದ್ದಾಗಿದೆ. ಅವನು ಮರಣ ಹೊಂದಿದಾಗ, ಅವನು ಶಾಶ್ವತ ಶಿಕ್ಷೆ ಮತ್ತು ಅನಂತ ದುಃಖದ ಕಡೆಗೆ ಸಾಗುತ್ತಾನೆ."

ಅಸ್ಸಿಂದಿ ಹೇಳುತ್ತಾರೆ: "ಅವರ ಮಾತು 'ಸತ್ಯವಿಶ್ವಾಸಿಯ ಸೆರೆಮನೆಯಾಗಿದೆ' ಎಂಬುದರ ಅರ್ಥವೇನೆಂದರೆ, ಅವನು (ಸತ್ಯವಿಶ್ವಾಸಿ) (ಈ ಜಗತ್ತಿನಲ್ಲಿ) ಅನುಗ್ರಹದಲ್ಲಿದ್ದರೂ, ಸ್ವರ್ಗವು ಅವನಿಗೆ ಅದಕ್ಕಿಂತ ಉತ್ತಮವಾಗಿದೆ. 'ಮತ್ತು ಸತ್ಯನಿಷೇಧಿಯ ಸ್ವರ್ಗವಾಗಿದೆ' ಎಂಬುದರ ಅರ್ಥವೇನೆಂದರೆ, ಅವನು (ಸತ್ಯನಿಷೇಧಿ) (ಈ ಜಗತ್ತಿನಲ್ಲಿ) ಕಷ್ಟಕರ ಸ್ಥಿತಿಯಲ್ಲಿದ್ದರೂ, ನರಕವು ಅವನಿಗೆ ಅದಕ್ಕಿಂತ ಕೆಟ್ಟದಾಗಿದೆ."

ಅಲ್ಲಾಹನ ದೃಷ್ಟಿಯಲ್ಲಿ ಈ ಪ್ರಪಂಚದ ತುಚ್ಛತೆಯನ್ನು ತಿಳಿಸಲಾಗಿದೆ.

ಈ ಪ್ರಪಂಚವು ಸತ್ಯವಿಶ್ವಾಸಿಗಳಿಗೆ ಪರೀಕ್ಷೆಯ ಮನೆಯಾಗಿದೆ.

ಸತ್ಯನಿಷೇಧಿ ತನ್ನ ಸ್ವರ್ಗವನ್ನು ಈ ಪ್ರಪಂಚದಲ್ಲಿಯೇ ಪಡೆದುಕೊಳ್ಳಲು ಆತುರಪಡುತ್ತಾನೆ. ಆದ್ದರಿಂದ ಅವನಿಗೆ ಪರಲೋಕದ ಸ್ವರ್ಗ ಮತ್ತು ಅದರ ಅನುಗ್ರಹಗಳಿಂದ ವಂಚಿತನಾಗುವ ಶಿಕ್ಷೆ ನೀಡಲಾಗುತ್ತದೆ.

التصنيفات

Asceticism and Piety, Condemning Love of the World