إعدادات العرض
ನೀನು ಹೇಳಿದಂತೆ ನೀನಿದ್ದರೆ, ನೀನು ಅವರಿಗೆ ಬಿಸಿ ಬೂದಿಯನ್ನು ತಿನ್ನಿಸುತ್ತಿರುವಂತಿದೆ. ನೀನು ಇದೇ ಸ್ಥಿತಿಯಲ್ಲಿರುವವರೆಗೆ ನಿನಗೆ…
ನೀನು ಹೇಳಿದಂತೆ ನೀನಿದ್ದರೆ, ನೀನು ಅವರಿಗೆ ಬಿಸಿ ಬೂದಿಯನ್ನು ತಿನ್ನಿಸುತ್ತಿರುವಂತಿದೆ. ನೀನು ಇದೇ ಸ್ಥಿತಿಯಲ್ಲಿರುವವರೆಗೆ ನಿನಗೆ ಅಲ್ಲಾಹನ ಕಡೆಯಿಂದ ಅವರ ವಿರುದ್ಧ ಸಹಾಯ ದೊರೆಯುತ್ತಲೇ ಇರುತ್ತದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಕೆಲವು ಹತ್ತಿರದ ಸಂಬಂಧಿಕರಿದ್ದಾರೆ, ನಾನು ಅವರೊಡನೆ ಸಂಬಂಧ ಬೆಸೆಯುತ್ತೇನೆ, ಆದರೆ ಅವರು ನನ್ನೊಂದಿಗೆ ಸಂಬಂಧ ಕಡಿದುಕೊಳ್ಳುತ್ತಾರೆ. ನಾನು ಅವರಿಗೆ ಒಳ್ಳೆಯದನ್ನು ಮಾಡುತ್ತೇನೆ, ಆದರೆ ಅವರು ನನಗೆ ಕೆಟ್ಟದ್ದನ್ನು ಮಾಡುತ್ತಾರೆ. ನಾನು ಅವರೊಂದಿಗೆ ಸಹನೆಯಿಂದ ವರ್ತಿಸುತ್ತೇನೆ, ಆದರೆ ಅವರು ನನ್ನೊಂದಿಗೆ ಅವಿವೇಕಿಗಳಂತೆ ವರ್ತಿಸುತ್ತಾರೆ." ಅದಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹೇಳಿದಂತೆ ನೀನಿದ್ದರೆ, ನೀನು ಅವರಿಗೆ ಬಿಸಿ ಬೂದಿಯನ್ನು ತಿನ್ನಿಸುತ್ತಿರುವಂತಿದೆ. ನೀನು ಇದೇ ಸ್ಥಿತಿಯಲ್ಲಿರುವವರೆಗೆ ನಿನಗೆ ಅಲ್ಲಾಹನ ಕಡೆಯಿಂದ ಅವರ ವಿರುದ್ಧ ಸಹಾಯ ದೊರೆಯುತ್ತಲೇ ಇರುತ್ತದೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල Hausa Kurdî Kiswahili Português தமிழ் Nederlands অসমীয়া ગુજરાતી پښتو മലയാളം नेपाली Magyar ქართული తెలుగు Македонски Svenska Moore Română Українська ไทย मराठी ਪੰਜਾਬੀ دری አማርኛ Wolof ភាសាខ្មែរالشرح
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ದೂರು ನೀಡುತ್ತಾ ತನಗೆ ಕೆಲವು ಹತ್ತಿರದ ಸಂಬಂಧಿಕರು ಮತ್ತು ರಕ್ತ ಸಂಬಂಧಿಗಳಿದ್ದಾರೆ ಎನ್ನುತ್ತಾನೆ. ನಾನು ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸುತ್ತೇನೆ, ಆದರೆ ಅವರು ನನ್ನೊಂದಿಗೆ ಅದಕ್ಕೆ ವಿರುದ್ಧವಾಗಿ ವ್ಯವಹರಿಸುತ್ತಾರೆ. ನಾನು ಅವರನ್ನು ಬೆಸೆಯುತ್ತೇನೆ ಮತ್ತು ಅವರ ಬಳಿಗೆ ಹೋಗುತ್ತೇನೆ, ಆದರೆ ಅವರು ನನ್ನನ್ನು ಕಡಿದುಕೊಳ್ಳುತ್ತಾರೆ. ನಾನು ಅವರಿಗೆ ಸತ್ಕಾರ ಮತ್ತು ನಿಷ್ಠೆಯಿಂದ ಒಳ್ಳೆಯದನ್ನು ಮಾಡುತ್ತೇನೆ, ಆದರೆ ಅವರು ನನಗೆ ಅನ್ಯಾಯ ಮತ್ತು ಒರಟುತನದಿಂದ ಕೆಟ್ಟದ್ದನ್ನು ಮಾಡುತ್ತಾರೆ. ನಾನು ಸಹನೆ ವಹಿಸುತ್ತೇನೆ ಮತ್ತು ಅವರನ್ನು ಕ್ಷಮಿಸುತ್ತೇನೆ, ಆದರೆ ಅವರು ನನಗೆ ಕೆಟ್ಟ ಮಾತು ಮತ್ತು ಕಾರ್ಯಗಳಿಂದ ಅವಿವೇಕತನವನ್ನು ತೋರಿಸುತ್ತಾರೆ. ಈ ಸ್ಥಿತಿಯಲ್ಲಿಯೂ ನಾನು ಅವರೊಂದಿಗೆ ಸಂಬಂಧವನ್ನು ಮುಂದುವರಿಸಬೇಕೆ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸಂಗತಿ ನೀನು ಹೇಳಿದಂತೆಯೇ ಇದ್ದರೆ, ಖಂಡಿತವಾಗಿಯೂ ನೀನು ಅವರಿಗೆ ಅವಮಾನವಾಗುವಂತೆ ಮತ್ತು ಅವರ ಮನಸ್ಸಿನಲ್ಲಿ ಅವರ ಬಗ್ಗೆ ಅವರಿಗೆ ಕೀಳು ಭಾವನೆ ಉಂಟಾಗುವಂತೆ ಮಾಡುತ್ತಿರುವೆ. ನೀನು ಹೆಚ್ಚು ಹೆಚ್ಚು ಒಳ್ಳೆಯದನ್ನು ಮಾಡುತ್ತಿರುವುದರಿಂದ ಮತ್ತು ಅವರು ನಿನಗೆ ಕೆಟ್ಟದ್ದನ್ನು ಬಗೆಯುತ್ತಿರುವುದರಿಂದ ನೀನು ಅವರಿಗೆ ಬಿಸಿ ಬೂದಿಯನ್ನು ತಿನ್ನಿಸುತ್ತಿರುವೆಯೋ ಎಂಬಂತಿರುವೆ. ನೀನು ಅವರಿಗೆ ಒಳ್ಳೆಯದನ್ನು ಮಾಡುತ್ತಿರುವವರೆಗೂ ಮತ್ತು ಅವರು ನಿನಗೆ ಕೆಟ್ಟದ್ದನ್ನು ಮಾಡುತ್ತಿರುವವರೆಗೂ, ಅಲ್ಲಾಹನ ಕಡೆಯಿಂದ ನಿನಗೆ ಸಹಾಯ ಮಾಡುವವನು ಮತ್ತು ಅವರ ಕಿರುಕುಳವನ್ನು ನಿವಾರಿಸುವವನು ನಿನ್ನ ಜೊತೆ ಇದ್ದೇ ಇರುತ್ತಾನೆ."فوائد الحديث
ಕೆಟ್ಟದ್ದನ್ನು ಒಳ್ಳೆಯತನದಿಂದ ಎದುರಿಸಿದರೆ, ಕೆಟ್ಟವನು ಕೂಡ ಸತ್ಯದ ಕಡೆಗೆ ಹಿಂದಿರುಗುವ ನಿರೀಕ್ಷೆಯಿರುತ್ತದೆ. ಅಲ್ಲಾಹು ಹೇಳಿರುವಂತೆ: "ನೀನು ಅತ್ಯುತ್ತಮವಾದ ರೀತಿಯಲ್ಲಿ (ಕೆಟ್ಟದ್ದನ್ನು) ತಡೆ, ಆಗ ನಿನ್ನ ಮತ್ತು ಯಾರ ನಡುವೆ ವೈರತ್ವವಿದೆಯೋ, ಅವನು ಆತ್ಮೀಯ ಸ್ನೇಹಿತನಂತೆ ಆಗುವನು."
ಅಲ್ಲಾಹನ ಆಜ್ಞೆಯನ್ನು ಪಾಲಿಸಬೇಕೆಂದು ಮತ್ತು ಅದರಿಂದ ನೋವುಂಟಾದರೂ, ಅದು ಸತ್ಯವಿಶ್ವಾಸಿ ದಾಸನಿಗೆ ಅಲ್ಲಾಹನ ಸಹಾಯ ದೊರೆಯಲು ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ.
ರಕ್ತ ಸಂಬಂಧವನ್ನು ಕಡಿದುಕೊಳ್ಳುವುದು ಜಗತ್ತಿನಲ್ಲಿ ನೋವು ಮತ್ತು ಶಿಕ್ಷೆಗೆ ಹಾಗೂ ಪರಲೋಕದಲ್ಲಿ ಪಾಪ ಮತ್ತು ವಿಚಾರಣೆಗೆ ಕಾರಣವಾಗುತ್ತದೆ.
ಮುಸಲ್ಮಾನನು ತನ್ನ ಸತ್ಕರ್ಮಗಳಲ್ಲಿ ಪ್ರತಿಫಲವನ್ನು ಅಪೇಕ್ಷಿಸಬೇಕು, ಮತ್ತು ಜನರ ಕಿರುಕುಳ ಹಾಗೂ ಬಹಿಷ್ಕಾರವು ಅವನನ್ನು ಒಳಿತು ಮಾಡುವ ಅಭ್ಯಾಸದಿಂದ ದೂರಗೊಳಿಸಬಾರದು.
ಸಂಬಂಧ ಬೆಸೆಯುವವನು ಎಂದರೆ ತನ್ನೊಂದಿಗೆ ಸಂಬಂಧ ಬೆಸೆದವರೊಂದಿಗೆ ಮಾತ್ರ ಸಂಬಂಧ ಬೆಸೆಯುವವನಲ್ಲ. ಬದಲಿಗೆ ನಿಜವಾದ ರೀತಿಯಲ್ಲಿ ಸಂಬಂಧ ಬೆಸೆಯುವವನು ಯಾರೆಂದರೆ, ತನ್ನೊಂದಿಗೆ ಸಂಬಂಧ ಕಡಿದವರೊಂದಿಗೆ ಸಂಬಂಧ ಬೆಸೆಯುವವನಾಗಿದ್ದಾನೆ.
التصنيفات
Merits of Maintaining Kinship Ties