ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ

ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ."

[صحيح] [متفق عليه]

الشرح

ಪ್ರವಾದಿಯವರು ಸಹರಿ ಸೇವಿಸುವುದನ್ನು ಪ್ರೋತ್ಸಾಹಿಸಿದ್ದಾರೆ. ಸಹರಿ ಎಂದರೆ ಉಪವಾಸದ ಸಿದ್ಧತೆಗಾಗಿ ರಾತ್ರಿಯ ಕೊನೆಯ ಭಾಗದಲ್ಲಿ ಆಹಾರ ಸೇವಿಸುವುದು. ಏಕೆಂದರೆ ಅದರಲ್ಲಿ "ಬರಕತ್", ಬರಕತ್ ಎಂದರೆ ಪ್ರತಿಫಲ ಮತ್ತು ಪುರಸ್ಕಾರದ ರೂಪದಲ್ಲಿರುವ ಹೇರಳ ಒಳಿತುಗಳು, ನಮಾಝ್‌ಗಾಗಿ ರಾತ್ರಿಯ ಕೊನೆಯ ಭಾಗದಲ್ಲಿ ಏಳುವುದು, ಉಪವಾಸಕ್ಕಾಗಿ ಶಕ್ತಿಯನ್ನು ಗಳಿಸುವುದು, ಅದಕ್ಕಾಗಿ ಚೈತನ್ಯ ಹೊಂದುವುದು ಮತ್ತು ಅದರ ಕಷ್ಟವನ್ನು ಕಡಿಮೆ ಮಾಡುವುದು ಮುಂತಾದ ಕಾರ್ಯಗಳಿವೆ.

فوائد الحديث

ಸಹರಿ ಸೇವಿಸುವುದು ಅಪೇಕ್ಷಣೀಯವಾಗಿದೆ. ಅದನ್ನು ಸೇವಿಸುವುದು ಶರಿಯತ್‌ನ ಆಜ್ಞೆಗೆ ವಿಧೇಯತೆ ತೋರುವುದನ್ನು ಸೂಚಿಸುತ್ತದೆ.

ಇಬ್ನ್ ಹಜರ್ ಫತ್ಹುಲ್ ಬಾರಿಯಲ್ಲಿ ಹೇಳಿದರು: "ಸಹರಿಯಲ್ಲಿನ ಸಮೃದ್ಧಿಯು ವಿವಿಧ ರೀತಿಯಲ್ಲಿ ದೊರೆಯುತ್ತದೆ: ಸುನ್ನತ್ ಅನ್ನು ಅನುಸರಿಸುವುದು, ಗ್ರಂಥದವರಿಗೆ ವಿರುದ್ಧವಾಗುವುದು, ಆರಾಧನೆ ನಿರ್ವಹಿಸಲು ಶಕ್ತಿಯನ್ನು ಪಡೆಯುವುದು, ಚೈತನ್ಯವನ್ನು ಹೆಚ್ಚಿಸುವುದು, ಹಸಿವಿನಿಂದ ಉಂಟಾಗಬಹುದಾದ ಕೆಟ್ಟ ನಡತೆಯನ್ನು ನಿವಾರಿಸುವುದು, ದಾನ ಕೇಳುವವರಿಗೆ ದಾನ ಮಾಡುವ ಅಥವಾ ಅವರನ್ನು ಊಟದಲ್ಲಿ ಸೇರಿಕೊಳ್ಳುವ ಅವಕಾಶವನ್ನು ಒದಗಿಸುವುದು, ಪ್ರಾರ್ಥನೆಗಳಿಗೆ ಉತ್ತರ ಸಿಗುವ ಸಂಭಾವ್ಯತೆಯಿರುವ ಸಮಯದಲ್ಲಿ ದಿಕ್ರ್ (ಅಲ್ಲಾಹನ ಸ್ಮರಣೆ) ಮತ್ತು ದುವಾ (ಪ್ರಾರ್ಥನೆ) ನಿರ್ವಹಿಸಲು ಕಾರಣವಾಗುವುದು, ಮತ್ತು ಮಲಗುವ ಮುನ್ನ ಉಪವಾಸದ ನಿಯ್ಯತ್ (ಉದ್ದೇಶ) ಮಾಡಲು ಮರೆತವರಿಗೆ ಅದನ್ನು ಮಾಡಲು ಅವಕಾಶ ಮಾಡಿಕೊಡುವುದು."

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯುತ್ತಮ ಬೋಧನಾಶೈಲಿಯನ್ನು ಕಾಣಬಹುದು. ಏಕೆಂದರೆ, ಅವರು ನಿಯಮಗಳನ್ನು ಸೂಕ್ತ ತರ್ಕದೊಂದಿಗೆ ಜೋಡಿಸುತ್ತಿದ್ದರು. ಇದರಿಂದ ಕೇಳುಗರಿಗೆ ಮನಸ್ಸಂತೃಪ್ತಿಯನ್ನು ನೀಡಲು ಮತ್ತು ಶರಿಯತ್‌ನ ಶ್ರೇಷ್ಠತೆಯನ್ನು ತಿಳಿಯಪಡಿಸಲು ಸಾಧ್ಯವಾಗುತ್ತದೆ.

ಇಬ್ನ್ ಹಜರ್ ಹೇಳಿದರು: ಒಬ್ಬ ವ್ಯಕ್ತಿಯು ಸೇವಿಸುವ ಕನಿಷ್ಠ ಆಹಾರ ಅಥವಾ ಪಾನೀಯದಿಂದ ಸಹರಿ ಪೂರ್ಣಗೊಳ್ಳುತ್ತದೆ.

التصنيفات

Recommended Acts of Fasting