إعدادات العرض
ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ
ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ
ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."
الترجمة
العربية বাংলা Bosanski English Español فارسی Français Bahasa Indonesia Tagalog Türkçe اردو 中文 हिन्दी Hausa Kurdî Português සිංහල Русский Svenska ગુજરાતી አማርኛ Yorùbá ئۇيغۇرچە Tiếng Việt Kiswahili پښتو অসমীয়া دری Кыргызча or Malagasy नेपाली Čeština Oromoo Română Nederlands Soomaali മലയാളം తెలుగు ไทย Српски Kinyarwanda Lietuvių Wolof Українська ქართული Magyar Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಕ್ಷಮೆಯಾಚನೆ ಮಾಡಲು ಅನೇಕ ಪ್ರಾರ್ಥನೆಗಳಿವೆ. ಆದರೆ ಅವುಗಳಲ್ಲಿ ಅತಿಶ್ರೇಷ್ಠವಾದುದು ದಾಸನು ಈ ರೀತಿ ಹೇಳುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ದಾಸನು ಮೊದಲನೆಯದಾಗಿ ಅಲ್ಲಾಹನ ಏಕತ್ವವನ್ನು ಒಪ್ಪಿಕೊಳ್ಳುತ್ತಾನೆ. ಅಂದರೆ ಅಲ್ಲಾಹು ಅವನ ಸೃಷ್ಟಿಕರ್ತ ಮತ್ತು ಆರಾಧ್ಯನಾಗಿದ್ದಾನೆ ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲವೆಂದು ಒಪ್ಪಿಕೊಳ್ಳುತ್ತಾನೆ. ತಾನು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೇನೆ ಮತ್ತು ಅನುಸರಿಸುತ್ತೇನೆಂದು ಅವನು ಮಾಡಿದ ಕರಾರಿಗೆ, ಅವನಿಗೆ ಸಾಧ್ಯವಾದಷ್ಟು ನಿಷ್ಠನಾಗಿದ್ದಾನೆಂದು ಒಪ್ಪಿಕೊಳ್ಳುತ್ತಾನೆ. ಏಕೆಂದರೆ ದಾಸನು ಎಷ್ಟೇ ಆರಾಧನೆ ಮಾಡಿದರೂ, ಅಲ್ಲಾಹು ಆದೇಶಿಸಿದ ಎಲ್ಲವನ್ನೂ ನಿರ್ವಹಿಸಲು ಅವನಿಗೆ ಸಾಧ್ಯವಿಲ್ಲ, ಹಾಗೆಯೇ ಅಲ್ಲಾಹನಿಗೆ ಆಭಾರಿಯಾಗಿರಲು ಸಾಧ್ಯವಾಗುವಷ್ಟು ಆರಾಧನೆಗಳನ್ನು ಮಾಡಲೂ ಅವನಿಗೆ ಸಾಧ್ಯವಿಲ್ಲ. ನಂತರ ಅವನು ಅಲ್ಲಾಹನಲ್ಲಿ ಆಶ್ರಯ ಮತ್ತು ರಕ್ಷೆಯನ್ನು ಬೇಡುತ್ತಾನೆ. ಏಕೆಂದರೆ, ದಾಸನು ಮಾಡಿದ ಕೆಡುಕುಗಳಿಂದ ಅವನನ್ನು ರಕ್ಷಿಸಲು ಅಲ್ಲಾಹನಿಗೆ ಮಾತ್ರ ಸಾಧ್ಯ. ನಂತರ ಅಲ್ಲಾಹು ಅವನಿಗೆ ನೀಡಿದ ಅನುಗ್ರಹಗಳನ್ನು ಅವನು ಸ್ವಯಂ ಒಪ್ಪಿಕೊಳ್ಳುತ್ತಾನೆ ಮತ್ತು ತಾನು ಮಾಡಿದ ಪಾಪಗಳನ್ನು ಕೂಡ ಒಪ್ಪಿಕೊಳ್ಳುತ್ತಾನೆ. ಈ ರೀತಿ ಅಲ್ಲಾಹನಲ್ಲಿ ಬೇಡಿಕೊಂಡ ನಂತರ, ತನ್ನನ್ನು ಕ್ಷಮಿಸಲು, ತನ್ನ ತಪ್ಪುಗಳನ್ನು ಮರೆಮಾಚಲು ಮತ್ತು ಅಲ್ಲಾಹು ಅವನ ದಯೆ, ಉದಾರತನ ಮತ್ತು ಕರುಣೆಯಿಂದ ತನ್ನನ್ನು ತನ್ನ ಪಾಪಗಳಿಂದ ರಕ್ಷಿಸಲು ಬೇಡುತ್ತಾನೆ. ಏಕೆಂದರೆ, ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರೂ ಇಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ ಈ ಪ್ರಾರ್ಥನೆಯು ಬೆಳಗ್ಗೆ ಮತ್ತು ಸಂಜೆ ಪಠಿಸಬೇಕಾದ ಸ್ಮರಣೆಗಳಲ್ಲಿ ಒಂದಾಗಿದ್ದು, ಯಾರಾದರೂ ಇದನ್ನು ದೃಢನಿಶ್ಚಯದಿಂದ, ಇದರ ಅರ್ಥಗಳನ್ನು ಮನನ ಮಾಡಿಕೊಂಡು, ಇದರಲ್ಲಿ ನಂಬಿಕೆಯಿಟ್ಟು ದಿನದ ಆರಂಭದಲ್ಲಿ ಅಂದರೆ ಸೂರ್ಯೋದಯದಿಂದ ತೊಡಗಿ ಮಧ್ಯಾಹ್ನದೊಳಗೆ ಇದನ್ನು ಪಠಿಸಿ—ಇದು ಹಗಲಿನ ಸಮಯವಾಗಿದೆ—ನಂತರ ನಿಧನನಾದರೆ, ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಹಾಗೆಯೇ, ಯಾರಾದರೂ ಇದನ್ನು ರಾತ್ರಿಯಲ್ಲಿ, ಅಂದರೆ ಸೂರ್ಯಾಸ್ತದಿಂದ ತೊಡಗಿ ಮುಂಜಾನೆಯೊಳಗೆ ಪಠಿಸಿ, ಬೆಳಗಾಗುವ ಮೊದಲು ನಿಧನನಾದರೆ, ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ.فوائد الحديث
ಕ್ಷಮೆಯಾಚನೆಯ ಪ್ರಾರ್ಥನೆಗಳಲ್ಲಿ ಅನೇಕ ವಿಧಗಳಿದ್ದು, ಅವುಗಳಲ್ಲಿ ಕೆಲವು ಇತರವುಗಳಿಗಿಂತ ಶ್ರೇಷ್ಠವಾಗಿವೆ.
ಈ ಪ್ರಾರ್ಥನೆಯ ಮೂಲಕ ಅಲ್ಲಾಹನಲ್ಲಿ ಪ್ರಾರ್ಥಿಸಲು ದಾಸನು ಉತ್ಸಾಹ ತೋರಬೇಕು. ಏಕೆಂದರೆ ಇದು ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆಯಾಗಿದೆ.
التصنيفات
Morning and Evening Dhikr