ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ…

ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ ವಾಲಿದವನಂತೆ ಬರುವನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ ವಾಲಿದವನಂತೆ ಬರುವನು."

[صحيح]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿದ್ದು ಅವನು ತನ್ನ ಪತ್ನಿಯರ ನಡುವೆ ತನಗೆ ಸಾಧ್ಯವಾಗುವಷ್ಟು ನ್ಯಾಯವನ್ನು ಪಾಲಿಸುವುದಿಲ್ಲವೋ, ಅಂದರೆ ಅವರಿಗೆ ಸಮಾನವಾಗಿ ಖರ್ಚು, ವಸತಿ, ಉಡುಪು ಮತ್ತು ರಾತ್ರಿಯನ್ನು ನೀಡುವುದಿಲ್ಲವೋ, ಅವನಿಗೆ ಪುನರುತ್ಥಾನ ದಿನದಂದು ನೀಡಲಾಗುವ ಶಿಕ್ಷೆಯೇನೆಂದರೆ ಅವರ ದೇಹದ ಅರ್ಧಭಾಗವು ವಾಲಿಕೊಂಡಿರುವುದು. ಹೀಗೆ ವಾಲಿಕೊಂಡಿರುವುದು ಅವನು ಮಾಡಿದ ಅನ್ಯಾಯಕ್ಕೆ ಅಂದರೆ ತನ್ನ ವರ್ತನೆಯಲ್ಲಿ ಒಂದು ಕಡೆ ವಾಲಿದ್ದಕ್ಕೆ ಶಿಕ್ಷೆಯಾಗಿದೆ.

فوائد الحديث

ಗಂಡನು ತನ್ನ ಇಬ್ಬರು ಅಥವಾ ಹೆಚ್ಚು ಪತ್ನಿಯರ ನಡುವೆ ಸಮಾನವಾಗಿ ಪಾಲು ಹಂಚುವುದು ಕಡ್ಡಾಯವಾಗಿದೆ. ಖರ್ಚು ನೀಡುವುದು, ರಾತ್ರಿ ಕಳೆಯುವುದು, ಉತ್ತಮವಾಗಿ ನೋಡಿಕೊಳ್ಳುವುದು ಮುಂತಾದ ಅವನಿಗೆ ಸಾಧ್ಯವಿರುವ ವಿಷಯಗಳಲ್ಲಿ ಅವನು ಅವರಲ್ಲಿ ಒಬ್ಬಳನ್ನು ಕಡೆಗಣಿಸಿ ಇನ್ನೊಬ್ಬಳ ಕಡೆಗೆ ವಾಲುವುದು ನಿಷೇಧಿಸಲಾಗಿದೆ.

ಹಂಚುವುದು ಮುಂತಾದ ಮನುಷ್ಯನಿಗೆ ಸಾಮರ್ಥ್ಯವಿರುವ ವಿಷಯಗಳಲ್ಲಿ ಸಮಾನತೆ ಪಾಲಿಸಬೇಕು. ಆದರೆ ಮನುಷ್ಯ ಸಾಮರ್ಥ್ಯಕ್ಕೆ ಅತೀತವಾದ ಪ್ರೀತಿಸುವುದು ಮತ್ತು ಹೃದಯದಲ್ಲಿ ಒಲವು ತೋರುವುದು ಮುಂತಾದ ವಿಷಯಗಳು ಹದೀಸಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಚನದಲ್ಲಿ ಅಲ್ಲಾಹು ಹೇಳಿದ್ದು ಇದನ್ನೇ ಆಗಿದೆ: "ನೀವು ಎಷ್ಟೇ ಉತ್ಸಾಹ ತೋರಿದರೂ ಪತ್ನಿಯರ ನಡುವೆ ನ್ಯಾಯನಿಷ್ಠೆಯಿಂದ ವರ್ತಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ." [ಅನ್ನಿಸಾ: 129]

ಪ್ರತಿಫಲವು ಕರ್ಮಕ್ಕೆ ಅನುಗುಣವಾಗಿರುತ್ತದೆ. ಏಕೆಂದರೆ ಪುರುಷನು ಇಹಲೋಕದಲ್ಲಿ ಒಬ್ಬ ಪತ್ನಿಯನ್ನು ಕಡೆಗಣಿಸಿ ಇನ್ನೊಬ್ಬ ಪತ್ನಿಯ ಕಡೆಗೆ ವಾಲಿದ್ದರಿಂದ ಪುನರುತ್ಥಾನ ದಿನದಂದು ಅವನ ಒಂದು ಪಾರ್ಶ್ವವು ಇನ್ನೊಂದರಿಂದ ವಾಲಿಕೊಂಡ ರೀತಿಯಲ್ಲಿ ಬರುತ್ತಾನೆ.

ಮನುಷ್ಯರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅದರಲ್ಲಿ ಹೊಂದಾಣಿಕೆ ಮಾಡಬಾರದೆಂದು ತಿಳಿಸಲಾಗಿದೆ. ಏಕೆಂದರೆ ಅವು ಅತಿಯಾಸೆ ಮತ್ತು ಸೂಕ್ಷ್ಮತೆಯ ಮೇಲೆ ಆಧಾರಿತವಾಗಿದೆ.

ತನ್ನ ಪತ್ನಿಯರ ನಡುವೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂಬ ಭಯವಿದ್ದರೆ, ಏಕ ಪತ್ನಿಯನ್ನು ಹೊಂದಿರುವುದು ಅಪೇಕ್ಷಣೀಯವಾಗಿದೆ. ಇದರಿಂದ ಧಾರ್ಮಿಕವಾಗಿ ಲೋಪ ಸಂಭವಿಸುವುದನ್ನು ತಪ್ಪಿಸಬಹುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "(ಪತ್ನಿಯರ ನಡುವೆ) ನ್ಯಾಯ ಪಾಲಿಸಲು ನಿಮಗೆ ಸಾಧ್ಯವಾಗಲಾರದೆಂದು ಭಯಪಟ್ಟರೆ, ಒಬ್ಬಳನ್ನು ಮಾತ್ರ (ವಿವಾಹವಾಗಿರಿ)." [ಅನ್ನಿಸಾ: 3]

التصنيفات

Marital Relations