ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಸ್ಮಿಕ ನೋಟದ ಬಗ್ಗೆ ಕೇಳಿದೆ. ಆಗ ಅವರು ನನಗೆ…

ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಸ್ಮಿಕ ನೋಟದ ಬಗ್ಗೆ ಕೇಳಿದೆ. ಆಗ ಅವರು ನನಗೆ ದೃಷ್ಟಿಯನ್ನು ತಿರುಗಿಸಲು ಹೇಳಿದರು

ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಸ್ಮಿಕ ನೋಟದ ಬಗ್ಗೆ ಕೇಳಿದೆ. ಆಗ ಅವರು ನನಗೆ ದೃಷ್ಟಿಯನ್ನು ತಿರುಗಿಸಲು ಹೇಳಿದರು."

[صحيح] [رواه مسلم]

الشرح

ಒಬ್ಬ ಪುರುಷ ಅನ್ಯ ಮಹಿಳೆಯನ್ನು ಆಕಸ್ಮಿಕವಾಗಿ ಉದ್ದೇಶಪೂರ್ವಕವಲ್ಲದೆ ನೋಡುವುದರ ಬಗ್ಗೆ ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ ತಕ್ಷಣ ಇನ್ನೊಂದು ದಿಕ್ಕಿಗೆ ಅಥವಾ ಇನ್ನೊಂದು ಕಡೆಗೆ ಕಡ್ಡಾಯವಾಗಿ ಮುಖ ತಿರುಗಿಸಬೇಕೆಂದು ಆದೇಶಿಸಿದರು. ಆ (ಪ್ರಥಮ) ನೋಟಕ್ಕಾಗಿ ಅವರಿಗೆ ಯಾವುದೇ ಶಿಕ್ಷೆಯಿರುವುದಿಲ್ಲ.

فوائد الحديث

ದೃಷ್ಟಿಯನ್ನು ತಗ್ಗಿಸಲು ಪ್ರೋತ್ಸಾಹಿಸಲಾಗಿದೆ.

ನೋಡುವುದು ನಿಷಿದ್ಧವಾಗಿರುವುದನ್ನು ಆಕಸ್ಮಿಕವಾಗಿ ಉದ್ದೇಶಪೂರ್ವಕವಲ್ಲದೆ ನೋಡಿದರೆ, ನೋಡುವುದನ್ನು ಮುಂದುವರಿಸಬಾರದೆಂದು ಎಚ್ಚರಿಸಲಾಗಿದೆ.

ಮಹಿಳೆಯರನ್ನು ನೋಡುವುದು ನಿಷೇಧಿಸಲಾಗಿದೆ ಎಂಬ ಆಜ್ಞೆಯು ಸಹಾಬಿಗಳಲ್ಲಿ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಇದು ಪುರಾವೆಯಾಗಿದೆ. ಏಕೆಂದರೆ ಇಲ್ಲಿ ಜರೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರನ್ನು ಉದ್ದೇಶಪೂರ್ವಕವಲ್ಲದೆ ನೋಡುವುದರ ಬಗ್ಗೆ, ಹಾಗೆ ನೋಡಿದರೆ ಅದು ಉದ್ದೇಶಪೂರ್ವಕವಾಗಿ ನೋಡಿದಂತಾಗುತ್ತದೆಯೇ ಎಂದು ಕೇಳಿದ್ದಾರೆ.

ಜನರ ಯೋಗಕ್ಷೇಮದ ಬಗ್ಗೆ ಧರ್ಮಶಾಸ್ತ್ರವು ಹೊಂದಿರುವ ಕಾಳಜಿಯನ್ನು ಇದರಿಂದ ತಿಳಿಯಬಹುದು. ಅದು ಹೇಗೆಂದರೆ, ಅನ್ಯ ಮಹಿಳೆಯನ್ನು ನೋಡುವುದನ್ನು ಅವರಿಗೆ ನಿಷೇಧಿಸಲಾಗಿದೆ. ಏಕೆಂದರೆ ಅದು ಧಾರ್ಮಿಕ ಮತ್ತು ಪಾರಲೌಕಿಕವಾದ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ.

ಸಂಶಯ ಉಂಟಾದಾಗ ಸಹಾಬಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಪ್ರಶ್ನೆ ಕೇಳುತ್ತಿದ್ದರು. ಇದೇ ರೀತಿ ಜನಸಾಮಾನ್ಯರು ಕೂಡ ತಮಗೆ ಸಂಶಯ ಉಂಟಾದರೆ ವಿದ್ವಾಂಸರ ಬಳಿಗೆ ತೆರಳಿ ಪ್ರಶ್ನಿಸಬೇಕಾಗಿದೆ.

التصنيفات

Purification of Souls