ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ

ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ. ಅವು: ಹಣೆ"—ಇದನ್ನು ಹೇಳುವಾಗ ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು—"ಕೈಗಳು, ಮೊಣಕಾಲುಗಳು ಮತ್ತು ಪಾದಗಳ ತುದಿಗಳು. ಮತ್ತು ಬಟ್ಟೆ ಹಾಗೂ ಕೂದಲನ್ನು ಮಡಚಬಾರದೆಂದು ಕೂಡ ಆಜ್ಞಾಪಿಸಲಾಗಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝ್ ಮಾಡುವಾಗ ದೇಹದ ಏಳು ಅಂಗಗಳ ಮೇಲೆ ಸಾಷ್ಟಾಂಗ ಮಾಡಲು ಅಲ್ಲಾಹು ಅವರಿಗೆ ಆಜ್ಞಾಪಿಸಿದ್ದಾನೆ. ಅವು: ಮೊದಲನೆಯದು: ಹಣೆ. ಅಂದರೆ ಮೂಗು ಮತ್ತು ಕಣ್ಣುಗಳ ಮೇಲ್ಭಾಗದಲ್ಲಿರುವ ಮುಖದ ಭಾಗ. ಆ ಏಳು ಅಂಗಗಳಲ್ಲಿ ಹಣೆ ಮತ್ತು ಮೂಗು ಒಂದೇ ಅಂಗವೆಂದು ತಿಳಿಸಲು ಮತ್ತು ಸಾಷ್ಟಾಂಗವೆರಗುವ ವ್ಯಕ್ತಿಯು ಎರಡರಿಂದಲೂ ನೆಲವನ್ನು ಸ್ಪರ್ಶಿಸಬೇಕೆಂದು ಒತ್ತಿಹೇಳಲು, ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು. ಎರಡನೇ ಮತ್ತು ಮೂರನೇ ಅಂಗ: ಎರಡು ಕೈಗಳು. ನಾಲ್ಕನೇ ಮತ್ತು ಐದನೇ ಅಂಗ: ಎರಡು ಮೊಣಕಾಲುಗಳು. ಆರನೇ ಮತ್ತು ಏಳನೇ ಅಂಗ: ಪಾದಗಳ ಬೆರಳುಗಳು. ಮಾತ್ರವಲ್ಲದೆ, ಸಾಷ್ಟಾಂಗ ಮಾಡುವಾಗ ನಮ್ಮ ಕೂದಲು ಅಥವಾ ಬಟ್ಟೆಗಳು ಕೆಳಗೆ ಜೋತು ಬೀಳದಂತೆ ಅವುಗಳನ್ನು ಕಟ್ಟುವುದು ಅಥವಾ ಮಡಚುವುದು ಮಾಡಬಾರದೆಂದು ನಮಗೆ ಆಜ್ಞಾಪಿಸಲಾಗಿದೆ. ಬದಲಿಗೆ, ಇತರ ಅಂಗಗಳೊಂದಿಗೆ ಅವು ಕೂಡ ಸಾಷ್ಟಾಂಗ ಮಾಡುವಂತಾಗಲು ಅವುಗಳನ್ನು ನೆಲಕ್ಕೆ ಬೀಳುವಂತೆ ಬಿಟ್ಟು ಬಿಡಬೇಕು.

فوائد الحديث

ನಮಾಝ್‌ನಲ್ಲಿ ಏಳು ಅಂಗಗಳ ಮೇಲೆ ಸುಜೂದ್ ಮಾಡುವುದು ಕಡ್ಡಾಯವಾಗಿದೆ.

ನಮಾಝ್‌ನಲ್ಲಿ ಬಟ್ಟೆ ಹಾಗೂ ಕೂದಲನ್ನು ಕಟ್ಟುವುದು ಅಥವಾ ಮಡಚುವುದನ್ನು ಅಸಹ್ಯಪಡಲಾಗಿದೆ.

ನಮಾಝ್ ಮಾಡುವಾಗ ತಟಸ್ಥತೆಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದು ಹೇಗೆಂದರೆ, ಸಾಷ್ಟಾಂಗದ ಏಳು ಅಂಗಗಳನ್ನು ನೆಲದ ಮೇಲಿಟ್ಟು, ಝಿಕ್ರ್ (ಸ್ಮರಣೆ) ಗಳೆಲ್ಲವನ್ನೂ ಪಠಿಸುವ ತನಕ ಹಾಗೆಯೇ ತಟಸ್ಥವಾಗಿರುವುದು.

ಕೂದಲನ್ನು ಕಟ್ಟಬಾರದೆಂಬ ಆಜ್ಞೆಯು ವಿಶೇಷವಾಗಿ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ. ಮಹಿಳೆಯರು ನಮಾಝ್ ಮಾಡುವಾಗ ಕೂದಲನ್ನು ಸಂಪೂರ್ಣವಾಗಿ ಮುಚ್ಚಬೇಕಾಗಿದೆ.

التصنيفات

Method of Prayer