إعدادات العرض
ದೊಡ್ಡ ಅಶುದ್ಧಿಯಿಂದ (ಜನಾಬತ್) ಸ್ನಾನ ಮಾಡುವ ರೂಪ
ದೊಡ್ಡ ಅಶುದ್ಧಿಯಿಂದ (ಜನಾಬತ್) ಸ್ನಾನ ಮಾಡುವ ರೂಪ
ಸತ್ಯವಿಶ್ವಾಸಿಗಳ ಮಾತೆ ಮೈಮೂನ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ನಾನ ಮಾಡಲು ನೀರನ್ನು ಇಟ್ಟು ಬಟ್ಟೆಯಿಂದ ಅವರನ್ನು ಮರೆಮಾಚಿದೆ. ಅವರು ತಮ್ಮ ಕೈಗಳ ಮೇಲೆ ನೀರು ಸುರಿದು ಅವುಗಳನ್ನು ತೊಳೆದರು. ನಂತರ, ತಮ್ಮ ಬಲಗೈಯಿಂದ ಎಡಗೈಗೆ ನೀರು ಸುರಿದು ತಮ್ಮ ಜನನಾಂಗವನ್ನು ತೊಳೆದರು. ನಂತರ, ತಮ್ಮ ಕೈಯನ್ನು ನೆಲಕ್ಕೆ ಬಡಿದು ಉಜ್ಜಿದರು, ನಂತರ ಅದನ್ನು ತೊಳೆದರು. ನಂತರ, ಬಾಯಿ ಮುಕ್ಕಳಿಸಿದರು ಮತ್ತು ಮೂಗಿಗೆ ನೀರೆಳೆದು ಹೊರಬಿಟ್ಟರು ಹಾಗೂ ತಮ್ಮ ಮುಖವನ್ನು ಮತ್ತು ಮೊಣಕೈಗಳನ್ನು ತೊಳೆದರು. ನಂತರ, ತಮ್ಮ ತಲೆಯ ಮೇಲೆ ಮತ್ತು ತಮ್ಮ ದೇಹದ ಮೇಲೆ ನೀರು ಸುರಿದರು. ನಂತರ, ಸ್ವಲ್ಪ ದೂರ ಸರಿದು ನಿಂತು ತಮ್ಮ ಪಾದಗಳನ್ನು ತೊಳೆದರು. ನಾನು ಅವರಿಗೆ ಒರೆಸಲು ಒಂದು ಬಟ್ಟೆಯನ್ನು ಕೊಟ್ಟೆ. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಅವರು ತಮ್ಮ ಕೈಗಳನ್ನು ಕೊಡವುತ್ತಾ ಹೊರಟುಹೋದರು.
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt ئۇيغۇرچە Hausa Português Kurdî Kiswahili සිංහල دری অসমীয়া ไทย አማርኛ Svenska Кыргызча Yorùbá ગુજરાતી नेपाली Oromoo മലയാളം Română Nederlands Soomaali پښتو తెలుగు Kinyarwanda Malagasy Српски Moore ქართულიالشرح
ಸತ್ಯವಿಶ್ವಾಸಿಗಳ ಮಾತೆ ಮೈಮೂನ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಿರುವ (ಜನಾಬತ್) ಸ್ನಾನದ ಬಗ್ಗೆ ತಿಳಿಸಿದ್ದಾರೆ. ಅದು ಹೇಗೆಂದರೆ, ಅವರು ಪ್ರವಾದಿಗೆ ಸ್ನಾನ ಮಾಡಲು ನೀರನ್ನು ಇಟ್ಟು ಪರದೆಯಿಂದ ಅವರನ್ನು ಮರೆಮಾಚಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನಂತೆ ಮಾಡಿದರು: ಮೊದಲನೆಯದಾಗಿ, ಅವರು ಕೈಗಳನ್ನು ಪಾತ್ರೆಯೊಳಗೆ ತೂರಿಸುವುದಕ್ಕೆ ಮೊದಲು ಅವುಗಳಿಗೆ ನೀರು ಸುರಿದು ತೊಳೆದರು. ಎರಡನೆಯದಾಗಿ, ಅವರು ಬಲಗೈಯಿಂದ ಎಡಗೈಗೆ ನೀರು ಸುರಿದು ತಮ್ಮ ಜನನಾಂಗವನ್ನು, ಅದಕ್ಕೆ ಅಂಟಿಕೊಂಡ ದೊಡ್ಡ ಅಶುದ್ಧಿಯ ಮಾಲಿನ್ಯವನ್ನು ತೊಳೆದು ಸ್ವಚ್ಛಗೊಳಿಸಿದರು. ಮೂರನೆಯದಾಗಿ, ತಮ್ಮ ಕೈಯನ್ನು ನೆಲಕ್ಕೆ ಬಡಿದು ಉಜ್ಜಿದರು, ನಂತರ ಅದನ್ನು ತೊಳೆದು ಅದರಿಂದ ಮಾಲಿನ್ಯವನ್ನು ನಿವಾರಿಸಿದರು. ನಾಲ್ಕನೆಯದಾಗಿ, ಬಾಯಿ ಮುಕ್ಕಳಿಸಿದರು. ಅಂದರೆ ನೀರನ್ನು ಬಾಯಿಗೆ ಹಾಕಿ ಚೆನ್ನಾಗಿ ಅಲುಗಾಡಿಸಿ ಉಗಿದರು. ನಂತರ, ಮೂಗನ್ನು ಸ್ವಚ್ಛಗೊಳಿಸಲು ಶ್ವಾಸದೊಂದಿಗೆ ಮೂಗಿಗೆ ನೀರೆಳೆದು ಹೊರಬಿಟ್ಟರು. ಐದನೆಯದಾಗಿ, ಮುಖವನ್ನು ಮತ್ತು ಎರಡು ಮೊಣಕೈಗಳನ್ನು ತೊಳೆದರು. ಆರನೆಯದಾಗಿ, ತಲೆಯ ಮೇಲೆ ನೀರು ಸುರಿದರು. ಏಳನೆಯದಾಗಿ, ದೇಹದ ಉಳಿದ ಭಾಗಗಳ ಮೇಲೆ ನೀರು ಸುರಿದರು. ಎಂಟನೆಯದಾಗಿ, ಅವರು ನಿಂತಿದ್ದ ಸ್ಥಳದಿಂದ ಸ್ವಲ್ಪ ಸರಿದು ನಿಂತು ತಮ್ಮ ಪಾದಗಳನ್ನು ತೊಳೆದರು. ಅವರು ಇದನ್ನು ಮೊದಲು ತೊಳೆದಿರಲಿಲ್ಲ. ನಂತರ, ಅವರು (ಮೈಮೂನ) ಒರೆಸಲು ಒಂದು ತುಂಡು ಬಟ್ಟೆಯನ್ನು ತಂದರು. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಅವರು ದೇಹದಲ್ಲಿರುವ ನೀರನ್ನು ಕೈಗಳಿಂದ ಒರಸಿ, ಕೈಗಳನ್ನು ಕೊಡವಿದರು.فوائد الحديث
ಸಮುದಾಯಕ್ಕೆ ಕಲಿಸುವ ಉದ್ದೇಶದಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೀವನದ ಸೂಕ್ಷ್ಮ ವಿವರಗಳನ್ನು ತಿಳಿಸುವುದರಲ್ಲಿ ಅವರ ಪತ್ನಿಯರು ತೋರುತ್ತಿದ್ದ ಕಾಳಜಿಯನ್ನು ತಿಳಿಸಲಾಗಿದೆ.
ಇಲ್ಲಿ ವಿವರಿಸಲಾದ ಸ್ನಾನದ ರೂಪವು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಬೀತಾದ ದೊಡ್ಡ ಅಶುದ್ಧಿಯ (ಜನಾಬತ್‌ನ) ಸ್ನಾನದ ಪೂರ್ಣ ರೂಪಗಳಲ್ಲಿ ಒಂದಾಗಿದೆ. ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆದು ಹೊರಬಿಡುವುದು ಸೇರಿದಂತೆ ಸಂಪೂರ್ಣ ದೇಹವನ್ನು ತೊಳೆಯುವುದು ಇದರ ಪರ್ಯಾಪ್ತ ರೂಪವಾಗಿದೆ.
ಸ್ನಾನ ಅಥವಾ ವುದೂ ನಿರ್ವಹಿಸಿದ ನಂತರ ಬಟ್ಟೆಯ ತುಂಡಿನಿಂದ ದೇಹವನ್ನು ಒರೆಸುವುದು ಅಥವಾ ಒರೆಸದಿರುವುದು ಧರ್ಮಸಮ್ಮತವಾಗಿದೆ.
التصنيفات
Ritual Bath