إعدادات العرض
ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?
ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ತಿಳಿಸಿಕೊಡಿ." ಅವರು ಹೇಳಿದರು: "ಕಷ್ಟ ಕಾಲದಲ್ಲಿ ಅತ್ಯುತ್ತಮವಾಗಿ ವುದೂ ನಿರ್ವಹಿಸುವುದು, ಮಸೀದಿಗೆ ಅತ್ಯಧಿಕ ಹೆಜ್ಜೆ ಹಾಕುವುದು ಮತ್ತು ಒಂದು ನಮಾಝ್ ನಿರ್ವಹಿಸಿದ ಬಳಿಕ ಇನ್ನೊಂದು ನಮಾಝನ್ನು ಕಾಯುವುದು. ಇದೇ ರಿಬಾತ್ ಆಗಿದೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt Hausa Kurdî Kiswahili Português සිංහල دری অসমীয়া ไทย አማርኛ Svenska Кыргызча Yorùbá ગુજરાતી नेपाली മലയാളം Oromoo Română Nederlands Soomaali پښتو తెలుగు Kinyarwanda Malagasy Српскиالشرح
ಪಾಪಗಳು ಕ್ಷಮಿಸಲ್ಪಡಲು ಮತ್ತು ಅವುಗಳನ್ನು ಬರೆದಿಡುವ ದೇವದೂತರ ದಾಖಲೆಗಳಿಂದ ಅವುಗಳನ್ನು ಅಳಿಸಿಬಿಡಲು ಹಾಗೂ ಸ್ವರ್ಗದಲ್ಲಿ ಉನ್ನತ ಸೌಧಗಳು ದೊರೆಯುಂತಾಗಲು ಕಾರಣವಾಗುವ ಕರ್ಮಗಳ ಬಗ್ಗೆ ಅವರಿಗೆ ತಿಳಿಸಿಕೊಡುವುದನ್ನು ಅವರು ಬಯಸುತ್ತಾರೆಯೇ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳೊಂದಿಗೆ ಕೇಳಿದರು. ಸಹಾಬಿಗಳು ಹೇಳಿದರು: ಹೌದು ನಾವು ಅದನ್ನು ಬಯಸುತ್ತೇವೆ. ಅವರು (ಪ್ರವಾದಿ) ಹೇಳಿದರು: ಮೊದಲನೆಯದಾಗಿ, ಚಳಿ, ನೀರಿನ ಅಭಾವ, ದೈಹಿಕ ನೋವು ಮುಂತಾದ ಕಷ್ಟಗಳ ಸಂದರ್ಭದಲ್ಲಿ ಪೂರ್ಣವಾಗಿ ವುದೂ ನಿರ್ವಹಿಸಲು ನಿಗಾ ವಹಿಸುವುದು. ಎರಡನೆಯದಾಗಿ, ಮಸೀದಿಗೆ ಅತ್ಯಧಿಕ ಹೆಜ್ಜೆ ಹಾಕುವುದು. ಹೆಜ್ಜೆ ಎಂದರೆ ಎರಡು ಪಾದಗಳ ನಡುವಿನ ಅಂತರ. ಇದು ಮನೆ ಮಸೀದಿಯಿಂದ ದೂರವಿರುವುದರಿಂದ ಮತ್ತು ಪದೇ ಪದೇ ಮಸೀದಿಗೆ ತೆರಳುವುದರಿಂದ ಸಾಧ್ಯವಾಗುತ್ತದೆ. ಮೂರನೆಯದಾಗಿ, ನಮಾಝ್‌ನ ಸಮಯವನ್ನು ಕಾಯವುದು, ಹೃದಯವನ್ನು ನಮಾಝಿನೊಂದಿಗೆ ಜೋಡಿಸುವುದು, ಅದಕ್ಕಾಗಿ ಸಿದ್ಧಗೊಳ್ಳುವುದು ಮತ್ತು ಜಮಾಅತ್ ಅನ್ನು ಕಾಯುತ್ತಾ ನಮಾಝ್‌ಗಾಗಿ ಮಸೀದಿಯಲ್ಲಿ ಕುಳಿತುಕೊಳ್ಳುವುದು. ನಮಾಝನ್ನು ನಿರ್ವಹಿಸಿದ ನಂತರ ಅಲ್ಲೇ ಕುಳಿತು ಇನ್ನೊಂದು ನಮಾಝ್‌ಗಾಗಿ ಕಾಯುವುದು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಈ ವಿಷಯಗಳೇ ನಿಜವಾದ ರಿಬಾತ್ (ಗಡಿಯಲ್ಲಿ ಶತ್ರುಗಳಿಂದ ದೇಶವನ್ನು ಕಾಯುವುದು). ಏಕೆಂದರೆ, ಇದು ಶೈತಾನನು ಮನಸ್ಸನ್ನು ಪ್ರವೇಶಿಸುವ ದಾರಿಗಳನ್ನು ಮುಚ್ಚುತ್ತದೆ, ಸ್ವೇಚ್ಛೆಗಳನ್ನು ನಿಗ್ರಹಿಸುತ್ತದೆ ಮತ್ತು ಶೈತಾನನ ಪಿಸುಮಾತುಗಳನ್ನು ಸ್ವೀಕರಿಸದಂತೆ ಮನಸ್ಸನ್ನು ತಡೆಯುತ್ತದೆ. ಇದರಿಂದ ಅಲ್ಲಾಹನ ಸೈನ್ಯವು ಶೈತಾನನ ಯೋಧರನ್ನು ಸೋಲಿಸುತ್ತದೆ. ಇದೇ ಅತಿದೊಡ್ಡ ಜಿಹಾದ್. ಇದು ಶತ್ರುಗಳ ಪ್ರವೇಶವನ್ನು ತಡೆಯುವುದಕ್ಕಾಗಿ ಗಡಿಯಲ್ಲಿ ಕಾವಲು ಕಾಯವುದರ ಸ್ಥಾನವನ್ನು ಹೊಂದಿದೆ.فوائد الحديث
ಕಡ್ಡಾಯ ನಮಾಝ್‌ಗಳನ್ನು ಮಸೀದಿಗಳಲ್ಲೇ ಸಾಮೂಹಿಕವಾಗಿ ನಿರ್ವಹಿಸುವುದರ ಪ್ರಾಮುಖ್ಯತೆಯನ್ನು, ನಮಾಝ್‌ಗಳ ಬಗ್ಗೆ ಕಾಳಜಿ ವಹಿಸುವುದನ್ನು ಮತ್ತು ಅದರ ಬಗ್ಗೆ ನಿರ್ಲಕ್ಷ್ಯ ಭಾವನೆ ಸಲ್ಲದು ಎಂಬುದನ್ನು ತಿಳಿಸಲಾಗಿದೆ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯುತ್ತಮ ಪ್ರಸ್ತುತಿಯನ್ನು ಮತ್ತು ಅವರು ತಮ್ಮ ಸಹಚರರಿಗೆ ನೀಡಿದ ಸ್ಫೂರ್ತಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಅವರು ಪ್ರಶ್ನೋತ್ತರ ರೂಪದಲ್ಲಿ ಅತಿದೊಡ್ಡ ಪ್ರತಿಫಲದಿಂದಲೇ ಆರಂಭಿಸಿದ್ದಾರೆ. ಇದು ಬೋಧನಾ ಶೈಲಿಗಳಲ್ಲಿ ಒಂದಾಗಿದೆ.
ವಿಷಯವನ್ನು ಪ್ರಶ್ನೋತ್ತರ ರೂಪದಲ್ಲಿ ಪ್ರಸ್ತುತಪಡಿಸುವ ಒಂದು ಪ್ರಯೋಜನವೇನೆಂದರೆ, ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಮಾತನಾಡುವ ನಿಯಮದ ಪ್ರಕಾರ, ಇದರಿಂದ ಮಾತುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ನವವಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದರು: "ಅದೇ ರಿಬಾತ್" ಎಂದರೆ, ಅದೇ ಅಪೇಕ್ಷಿತ ರಿಬಾತ್ ಎಂದರ್ಥ. ರಿಬಾತ್‌ನ ಮೂಲ ಅರ್ಥವು ಒಂದು ವಸ್ತುವನ್ನು ಹಿಡಿದಿಡುವುದು. ಅಂದರೆ ಮನಸ್ಸನ್ನು ಈ ಅನುಸರಣಾ ಕರ್ಮಗಳಲ್ಲಿ ಹಿಡಿದಿಡುವುದು. ಜಿಹಾದ್ ಎಂದರೆ ಆತ್ಮದ ವಿರುದ್ಧ ಹೋರಾಡುವುದು ಎಂದು ಹೇಳಲಾಗಿರುವಂತೆ ಇದನ್ನು ಅತಿಶ್ರೇಷ್ಠ ರಿಬಾತ್ ಎಂದು ಹೇಳಲಾಗಿರಬಹುದು. ಇದರ ಅರ್ಥ ಇದು ಸುಲಭಸಾಧ್ಯವಾದ ರಿಬಾತ್ ಆಗಿದೆ ಎಂದಾಗಿರಬಹುದು. ಅಂದರೆ, ಇದು ರಿಬಾತ್‌ನ ಅನೇಕ ವಿಧಗಳಲ್ಲಿ ಒಂದಾಗಿದೆ.
"ರಿಬಾತ್" ಅನ್ನು ಪುನರಾವರ್ತಿಸಲಾಗಿದೆ ಮತ್ತು 'ಅಲ್' ಸೇರಿಸಿ "ಅರ್‍ರಿಬಾತ್" ಎಂದು ಹೇಳಲಾಗಿದೆ. ಇದು ಈ ಕರ್ಮಗಳನ್ನು ಗೌರವಿಸುವ ಉದ್ದೇಶದಿಂದಾಗಿದೆ.
التصنيفات
Merits of Good Deeds