ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ…

ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನ್’ ಎಂದು ಹೇಳಿದರೆ ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ

ಸುಲೈಮಾನ್ ಬಿನ್ ಸುರದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿದ್ದೆ. ಆಗ ಅಲ್ಲಿ ಇಬ್ಬರು ಪರಸ್ಪರ ನಿಂದಿಸುತ್ತಿದ್ದರು. ಅವರಲ್ಲೊಬ್ಬನ ಮುಖ ಕೆಂಪಾಯಿತು ಮತ್ತು ಅವನ ಕುತ್ತಿಗೆಯ ರಕ್ತನಾಳಗಳು ಊದಿಕೊಂಡವು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನ್’ ಎಂದು ಹೇಳಿದರೆ ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ." ಆಗ ಅವರು ಆ ವ್ಯಕ್ತಿಯೊಡನೆ ಹೇಳಿದರು: "ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡು" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದಾರೆ. ಆಗ ಅವನು ಕೇಳಿದನು: "ನನಗೇನು ಹುಚ್ಚು ಹಿಡಿದಿದೆಯೇ?"

[صحيح] [متفق عليه]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಾ ಒಬ್ಬರನ್ನೊಬ್ಬರು ನಿಂದಿಸುತ್ತಿದ್ದರು. ಅವರಲ್ಲೊಬ್ಬನ ಮುಖ ಕೆಂಪಾಯಿತು ಮತ್ತು ಅವನ ಕುತ್ತಿಗೆಯ ಸುತ್ತಲಿನ ರಕ್ತನಾಳಗಳು ಊದಿಕೊಂಡವು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ಒಂದು ಮಾತನ್ನು ಬಲ್ಲೆ. ಈ ಕೋಪಗೊಂಡವನು ಅದನ್ನು ಹೇಳಿದರೆ, ಅವನಲ್ಲಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನಿ ರ್‍ರಜೀಮ್’ ಎಂದು ಹೇಳಿದರೆ. ಆಗ ಅವರು ಆ ವ್ಯಕ್ತಿಯೊಡನೆ ಹೇಳಿದರು: "ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡು" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದಾರೆ. ಆಗ ಅವನು ಕೇಳಿದನು: "ನಾನೇನು ಹುಚ್ಚನೇ?" ಹುಚ್ಚಿರುವವರು ಮಾತ್ರ ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುತ್ತಾರೆ ಎಂದು ಅವನು ಭಾವಿಸಿದ್ದನು.

فوائد الحديث

ಮಾರ್ಗದರ್ಶನ ಮತ್ತು ನಿರ್ದೇಶನ ನೀಡುವ ಅವಕಾಶವುಂಟಾದರೆ ಅದನ್ನು ಬಳಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರುತ್ತಿದ್ದ ಉತ್ಸಾಹವನ್ನು ತಿಳಿಸಲಾಗಿದೆ.

ಕೋಪವು ಶೈತಾನನಿಂದ ಬರುತ್ತದೆ.

ಕೋಪ ಬಂದಾಗ ‘ಅಊದು ಬಿಲ್ಲಾಹಿ ಮಿನಶ್ಶೈತಾನಿ ರ್ರಜೀಮ್’ ಎಂದು ಅಲ್ಲಾಹನಲ್ಲಿ ಶೈತಾನನಿಂದ ರಕ್ಷಣೆ ಬೇಡಲು ಆದೇಶಿಸಲಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಮತ್ತು ಶೈತಾನನಿಂದ ನಿಮಗೆ ದುಷ್ಪ್ರಚೋದನೆ ಉಂಟಾದರೆ ಅಲ್ಲಾಹನಲ್ಲಿ ರಕ್ಷಣೆ ಬೇಡಿರಿ."

ಶಾಪ ಮತ್ತು ಅದರಂತಿರುವ ನಿಂದನೆಗಳ ಬಗ್ಗೆ ಎಚ್ಚರಿಸಲಾಗಿದೆ ಮತ್ತು ಅವುಗಳಿಂದ ದೂರವಿರಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅವು ಜನರ ನಡುವೆ ಅಶಾಂತಿಗೆ ಕಾರಣವಾಗುತ್ತವೆ.

ಉಪದೇಶವನ್ನು ಆಲಿಸದವರಿಗೆ ಅವರು ಅದರ ಪ್ರಯೋಜನವನ್ನು ಪಡೆಯಲು ಅದನ್ನು ಅವರಿಗೆ ತಿಳಿಸಬೇಕೆಂದು ಹೇಳಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೋಪದ ಬಗ್ಗೆ ಎಚ್ಚರಿಸಿದ್ದಾರೆ. ಏಕೆಂದರೆ ಅದು ಕೆಡುಕು ಮತ್ತು ದುಡುಕಿಗೆ ಕಾರಣವಾಗುತ್ತದೆ. ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಲಾದಾಗ ಮಾತ್ರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೋಪಗೊಳ್ಳುತ್ತಿದ್ದರು. ಇದು ಪ್ರಶಂಸಾರ್ಹ ಕೋಪವಾಗಿದೆ.

"ನನಗೆ ಹುಚ್ಚು ಹಿಡಿದಿದೆಯೆಂದು ನಿಮಗೆ ಅನ್ನಿಸುತ್ತಿದೆಯೇ" ಎಂಬ ಮಾತನ್ನು ವ್ಯಾಖ್ಯಾನಿಸುತ್ತಾ ನವವಿ ಹೇಳಿದರು: ಬಹುಶಃ ಈ ಮಾತನ್ನು ಹೇಳಿದವನು ಕಪಟವಿಶ್ವಾಸಿಯಾಗಿರಬಹುದು ಅಥವಾ ಒರಟು ಸ್ವಭಾವದ ಮರುಭೂಮಿ ನಿವಾಸಿಯಾಗಿರಬಹುದು.

التصنيفات

Blameworthy Morals, Dhikr on Special Occasions